ಲಿಂಗಸೂಗೂರು: ರಾಯಚೂರ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರ ಸಾಮಾನ್ಯ ಸಭೆ ಕರೆಯಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಮೊರ್ಚಾ ಅಧ್ಯಕ್ಷ ಈಶ್ವರ ವಜ್ಜಲ್ ವಹಿಸಿದ್ದರು.ಜನೇವರಿ ೧೨ ರಿಂದ ನಡೆಯುವ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಸಸಿ ನೆಡುವ, ಸ್ವಚ್ಚತಾ,ಕ್ರೀಡೆ,ಹಾಗೂ ಸಂಘಟನೆಯ ಚಟುವಟಿಕೆಗಳನ್ನು ನಡೆಸುವದರೊಂದಿಗೆ ವಿವೇಕಾನಂದರ ಜನ್ಮ ದಿನಾಚರಣೆ ನಡೆಸಲಾಗುವದು. ಈ ವೇಳೆ ಯುವ ಮೊರ್ಚಾ ಅಧ್ಯಕ್ಷ ಈಶ್ವರ ವಜ್ಜಲ್,ಮಾತನಾಡಿ ಯುವ ಮೊರ್ಚಾ ಹಾಗೂ ಪಕ್ಷದ ಸಂಘಟನೆಗೆ ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಈ ಸಂಧರ್ಭದಲ್ಲಿ ಯುವ ಮೊರ್ಚಾ ಉಪಾಧ್ಯಕ್ಷ ಅಮರೇಶ್ ಕಡಿ,ಸಂದೀಪ್ ಹಟ್ಟಿ,ಆದರ್ಶ ಸಜ್ಜನ್,ಕೃಷ್ಣ,ರಾಘವೇಂದ್ರ,ರಮೇಶ ನಿಲೋಗಲ್,ಹರೀಶ್,ಶಿವು ಮುದಗಲ್ ಉಪಸ್ಥಿತರಿದ್ದರು.