ನಮ್ಮ ಸರಕಾರ ಅಧಿಕಾರ ವಿಕೇಂದ್ರೀಕರಣ ಮೂಲಕ ಸ್ಥಳೀಯ ಸರಕಾರಕ್ಕೆ ಅಧಿಕಾರಿ ಕೊಟ್ಟಿದೆ : ಶಾಸಕ ಸಿ ಎಸ್ ನಾಡಗೌಡ
—–
ಸ್ಥಳೀಯ ಸರಕಾರದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಸಹಕಾರ ನೀಡಬೇಕು.
——
ರಕ್ಕಸಗಿ ಗ್ರಾಪಂ ನೂತನ ಹೊಸ ಕಟ್ಟಡಕ್ಕೆ ಚಾಲನೆ: ಸಿ ಎಸ್ ನಾಡಗೌಡ.
ಮುದ್ದೇಬಿಹಾಳ: ನಮ್ಮಲ್ಲಿ ರಾಜಕೀಯ ಅರಿವು ಇಟ್ಟುಕೊಂಡು, ಅರಿವು ನಮ್ಮಲ್ಲಿ ಬರಬೇಕು ರಾಜಕೀಯ ಬೆರೆಸುವ ಕೆಲಸ ಮಾಡುತ್ತಾರೆ ಸ್ಥಳೀಯ ಗ್ರಾಪಂಗೆ ನಮ್ಮ ಸರಕಾರ ಅಧಿಕಾರ ವಿಕೇಂದ್ರೀಕರಣ ಮೂಲಕ ಗ್ರಾಮದಲ್ಲಿ ಸಾರ್ವಜನಿಕ ಕೂಡಿಸಿಕೊಂಡು ಗ್ರಾಮ ಸಭೆಯಲ್ಲಿ ಚರ್ಚ್ ಆದ ಅಭಿಪ್ರಾಯ ಗ್ರಾಪಂ ಅಡಳಿತ ಮಂಡಳಿ ಸದಸ್ಯರು ಗಮನಕ್ಕೆ ಯೋಜನೆಗಳನ್ನು ರೂಪಿಸಿ ಗ್ರಾಮಗಳಿಗೆ ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗುವಂತೆ ಈಗ ನಿಮ್ಮ ಕೈಯಲ್ಲಿ ಅಧಿಕಾರವನ್ನು ಸರಕಾರ ನೀಡಿದ್ದು, ವರ್ಷಕ್ಕೆ ಎರಡು ಬಾರಿ,ವಿಶೇಷ ಗ್ರಾಮ ಸಭೆ ನಡೆಸುವ ಮೂಲಕ ಸರಕಾರ ಯೋಜನೆ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುಕೂಲವಾಗುತ್ತದೆ ಎಂದು ಕೆ ಎಸ್ ಡಿ ನಿಗಮದ ಅಧ್ಯಕ್ಷ ಹಾಗೂಶಾಸಕ ಸಿ ಎಸ್ ನಾಡಗೌಡ (ಅಪ್ಪಾಜಿ) ಹೇಳಿದರು.
ತಾಲ್ಲೂಕಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣದ ರಾಜೀವಗಾಂಧಿ ಸೇವಾ ಕೇಂದ್ರ, ಎನ್ ಆರ್ ಎಲ್ ಎಂ ಶೆಡ್ ಅಡಿಯಲ್ಲಿ ಬುಧವಾರ ತಾಲ್ಲೂಕಿನ ರಕ್ಕಸಗಿ ಗ್ರಾಮ ಪಂಚಾಯತಿ ನೂತನ ಹೊಸ ಕಟ್ಟಡವನ್ನು ಶಾಸಕ ನಾಡಗೌಡರು ಚಾಲನೆ ನೀಡಿ ಅವರ ಮಾತನಾಡಿ
ನಮ್ಮ ಯುಪಿಎ ಸರಕಾರ ಅಧಿಕಾರದ ಪ್ರಧಾನಿ
ಮನಮೋಹನ್ ಸಿಂಗ್ ಸರಕಾರ ಕೇಂದ್ರ ಸರ್ಕಾರದ ಅನುದಾನ 90 ರಷ್ಟು,ರಾಜ್ಯ ಸರಕಾರ 10 ರಷ್ಟು ಅನುದಾನ ಹಾಗೂ ನೂರು ದಿವಸ ಕಡ್ಡಾಯ ಕೂಲಿ ಕೆಲಸ ಇತ್ತು. ನರೇಂದ್ರ ಮೋದಿ ಸರಕಾರ ಈಗ ಹೆಸರು ಬದಲಾಯಿಸಿ
125 ದಿವಸ ಕಡ್ಡಾಯವಾಗಿ ಕೆಲಸ ಸೀಮಿತವಾಗಿದೆ.ಕೇಂದ್ರ ಅನುದಾನ 60 ರಷ್ಟು ರಾಜ್ಯ 40 ರಷ್ಟು ಅನುದಾನ ನೀಡಬೇಕು ಹೊಸ ಕಾಯ್ದೆ ತಂದಿದ್ದು,ರಾಜ್ಯದ ಸರಕಾರ ಮೇಲೆ ಆರ್ಥಿಕ ಹೊರೆ ಬೀಳುತ್ತದೆ.
ಸ್ವಾತಂತ್ರಕ್ಕಾಗಿ ಮಹಾತ್ಮ ಗಾಂಧಿ ಎಲ್ಲಾ ಸಮಾಜವನ್ನು ಕಟ್ಟಿಕೊಂಡು ಸತ್ಯಾಗ್ರಹದ ಮೂಲಕ ಬ್ರಿಟಿಷ್ ವಿರುದ್ಧ ಹೋರಾಟ ಮಾಡಿದ ಮಹಾನ್ ನಾಯಕ ಮಹಾತ್ಮ ಗಾಂಧಿಯವರ ಹೆಸರು ಅಳಿಸಿ ಒರಟಿರುವ ಈಗ ವಿ ರಾಮ ಜಿ ಹೆಸರು ಬದಲಾವಣೆ ಮಾಡುವತ್ತಿರುವದಿಂದ ಇದರಲ್ಲಿ ರಾಜಕಾರಣ ಮಾಡಿದ್ದನ್ನು ಕೇಂದ್ರದ ಬಿಜೆಪಿ ಸರ್ಕಾರದ ಬಿಡಬೇಕು ಎಂದು ಶಾಸಕರು ಎಚ್ಚರಿಕೆ ನೀಡಿದರು.
ವೇಳೆ ಪಂಚ ಗ್ಯಾರಂಟಿ ಯೋಜನೆ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಅವರ ಮಾತನಾಡಿದ ವಿರುದ್ಧ ಪಕ್ಷದ ನಾಯಕರು ನಮ್ಮ ಸಿದ್ದರಾಮಯ್ಯ ಸರಕಾರ ಯೋಜನೆಯಾದ ಗ್ರಹ ಲಕ್ಷ್ಮಿ,ಅನ್ನ ಭಾಗ್ಯ,ಶಕ್ತಿ, ಗ್ರಹ ಜ್ಯೋತಿ,ಯುವ ನಿಧಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡವರಿಗೆ ಮಧ್ಯಮ ಬಡವರಿಗೆ ಎಲ್ಲಾ ಯೋಜನೆಯ ಅನುಕೂಲವಾಗುತ್ತದೆ.ಬಿಜೆಪಿ ಅವರು ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಆಗಿಲ್ಲ ಎಂದು ಬಿಜೆಪಿ ಸುಳ್ಳು ಹೇಳುವ ಜನರಿಗೆ ಮೋಸ ಮಾಡುತ್ತಾರೆ ಎಂದರು.
ಇದೇ ವೇಳೆ ತಾಪಂ ಇಒ ವೆಂಕಟೇಶ್ ವಂದಾಲ,ಜಿ ಎಸ್ ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ರಕ್ಕಸಗಿ ಗ್ರಾಪಂ ಅಧ್ಯಕ್ಷ ರೀತೇಶ ನಾಡಗೌಡರ,ಉಪಾಧ್ಯಕ್ಷ ತಂಗಮ್ಮ ಗುರಿಕಾರ,
ಪಂಚ ಗ್ಯಾರಂಟಿ ಯೋಜನೆ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ,ಉಪಾಧ್ಯಕ್ಷ ಲಕ್ಷ್ಮಣ ಲಮಾಣಿ, ಎಸ್ ಬಿ ನಾಡಗೌಡ,ಜಿ ಎಸ್ ಪಾಟೀಲ, ತಾಪಂ ಇಒ ವೆಂಕಟೇಶ್ ವಂದಾಲ,ತಾಪಂ ಎಡಿ ಎಸ್ ಎಸ್ ಗಣಾಚಾರಿ,ತಾಪಂ ಮ್ಯಾನೇಜರ್ ನಿರ್ಮಲಾ ತೋಟದ, ಪಿಡಿಓ ಪಿ ಎಸ್ ನಾಯ್ಕೋಡಿ,ಆನಂದ ಹಿರೇಮಠ,ಗ್ರಾಪಂ ಪಿಡಿಓ ಎಂ ವಾಯ್ ಅಮ್ಮನ್ನವರ,ಕಾರ್ಯದರ್ಶಿ ಸಿ ಬಿ ಹೊಳಿ,
ಗ್ರಾಪಂ ಸದಸ್ಯರಾದ ನಿಂಗಣ್ಣ ಅಲ್ಲಾಪೂರ,ಸರಿತಾ ರಕ್ಕಸಗಿ, ಪದ್ಮಾವತಿ ವಡ್ಡರ,ನಾಗಮ್ಮ ಹುಡೇದ,ಶಂಕ್ರಣ್ಣ ನಾಡಗೌಡರ,ಅಭಿನಂದನ ಕಡೇಹಳ್ಳಿ, ರಜೀಯಾಬೇಗಂ ನದಾಪ,ಗ್ಯಾನಮ್ಮ ಪಾಟೀಲ, ಯಲ್ಲವ್ವ ಕಾನಕ್ಕಿ,ಹಣಮಂತ ಚಲವಾದಿ, ಸಾಗರ ಮುದೂರ, ಗ್ರಾಪಂ ಸಿಬ್ಬಂದಿಗಳಾದ ಎಚ್ ಆರ್ ಮುಂದಿನಮನಿ, ಎ ವಾಯ್ ಪಠಾಣ,ಜಿ ಕೆ ವಾಲಿ, ತಾಲ್ಲೂಕಿನ ಪಿಡಿಓ ಕಾರ್ಯದರ್ಶಿ ತಾಪಂ ಸಿಬ್ಬಂದಿಗಳು ಸೇರಿದಂತೆ ಉಪಸ್ಥಿತರಿದ್ದರು.
ಕೇಂದ್ರದಲ್ಲಿ ಅಧಿಕಾರ ಇರುವ ನರೇಂದ್ರ ಮೋದಿ ಬಿಜೆಪಿ ಸರಕಾರ ನರೇಗಾ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ
ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಅಳಿಸಿ ಹೊಸ ಹೆಸರು ವಿರಾಮಜಿ ಎಂದು ನಾಮಕರಣ ಮಾಡಲು ಹೊರಟಿರುವ ಬಿಜೆಪಿ ಸರಕಾರ ವಿರುದ್ಧ ,ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಸರಕಾರ ಎಲ್ಲಾ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ರಾಜ್ಯದ 6000 ಸಾವಿರ ಗ್ರಾಮ ಪಂಚಾಯತಿಗೆ ರಾಷ್ಟ್ರಪಿತಾಮ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯ ಎಂದು ನಾಮಕರಣ ಮಾಡುತ್ತವೆ.
ಸಿ ಎಸ್ ನಾಡಗೌಡ ಕೆಎಸ್ಡಿ ನಿಗಮದ ಅಧ್ಯಕ್ಷ ,ಶಾಸಕರು.