ಗಣೇಶ ಚತುರ್ಥಿ ಹಬ್ಬ ಕಾನೂನು ಸುವ್ಯವಸ್ಥೆ ಕಾಪಾಡಲು ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
ವಿಜಯಪುರ, ಸೆಪ್ಟೆಂಬರ್ 03 :ವಿಜಯಪುರ ಜಿಲ್ಲೆಯಾದ್ಯಂತ ಸೆ.7ರಿಂದ ಗಣೇಶ ಚತುರ್ಥಿ ಹಬ್ಬ ಆಚರಿಸಲಾಗುತ್ತಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಕಾಲಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆಯಾಗಿ ವಿಶೇಷ ದಂಡಾಧಿಕಾರಿಗಳನ್ನು ನೇಮಿಸಿ, ಜಿಲ್ಲೆಯ ಎಲ್ಲ ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸುವಂತೆ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.
ವಿಜಯಪುರ ಉಪವಿಭಾಗಕ್ಕೆ ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ (ಮೊ:9599909724), ಇಂಡಿ ಉಪವಿಭಾಗಕ್ಕೆ ಇಂಡಿ ಉಪ ವಿಭಾಗಾಧಿಕಾರಿ ಆಬೀದ ಗದ್ಯಾಳ (ಮೊ:9008690039) ಅವರನ್ನು ವಿಶೇಷ ದಂಡಾಧಿಕಾರಿಗಳಾಗಿ ನಿಯೋಜಿಸಿ ಆದೇಶಿಸಲಾಗಿದೆ.
ದಿನಾಂಕ : 07-09-2024 ರಂದು ಪ್ರತಿಷ್ಠಾಪನೆ ದಿನ ಹಾಗೂ ಸೆ.11, 13, 15 ಹಾಗೂ 17ರವರೆಗೆ ವಿಸರ್ಜನೆ ಕಾಲಕ್ಕೆ ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ (ಮೊ:9448692358) ಅವರನ್ನು ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ ನಂ.01 ರಿಂದ 17ರವರೆಗೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳಾದ ಈರಣ್ಣ ಆಶಾಪೂರ (ಮೊ:9731042063) ಅವರನ್ನು ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ ನಂ. 18ರಿಂದ 35 ರವರೆಗೆ ಹಾಗೂ ಪ್ರಭಾರ ತಹಶೀಲ್ದಾರ ವ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಎಸ್.ಎಚ್.ಅರಕೇರಿ ಅವರನ್ನು ತಿಕೋಟಾ ತಾಲೂಕಿಗೆ ನಿಯೋಜಿಸಿ ಆದೇಶಿಸಲಾಗಿದೆ.
ವಿಜಯಪುರ ತಾಲೂಕಿಗೆ ತಹಶೀಲ್ದಾರ ಪಿ.ಎಸ್.ಚನಗೊಂಡ (ಮೊ:9482896370), ಇಂಡಿ ತಾಲೂಕಿಗೆ ತಹಶೀಲ್ದಾರ ಬಿ.ಎಸ್.ಕಡಕಭಾವಿ (ಮೊ:9902748240), ಬಸವನಬಾಗೇವಾಡಿ ತಾಲೂಕಿಗೆ ತಹಶೀಲ್ದಾರರಾದ ವಾಯ್.ಎಸ್.ಸೋಮನಕಟ್ಟಿ (ಮೊ:9008712765), ಮುದ್ದೇಬಿಹಾಳ ತಾಲೂಕಿಗೆ ತಹಶೀಲ್ದಾರ ಬಲರಾಮ್ ಕಟ್ಟಿಮನಿ (ಮೊ:9538284426), ಸಿಂದಗಿ ತಾಲೂಕಿಗೆ ತಹಶೀಲ್ದಾರ ಪ್ರದೀಪ ಹಿರೇಮಠ (ಮೊ:8073688515) ಹಾಗೂ ಬಬಲೇಶ್ವರ ತಾಲೂಕಿಗೆ ತಹಶೀಲ್ದಾರ ಎಂ.ಎಸ್.ಅರಕೇರಿ (ಮೊ:9538385106) ಅವರನ್ನು ನಿಯೋಜಿಸಿ ಆದೇಶಿಸಲಾಗಿದೆ.
ಕೊಲ್ಹಾರ ತಾಲೂಕಿಗೆ ತಹಶೀಲ್ದಾರ ಎಸ್.ಎಸ್. ನಾಯಕಲಮಠ (ಮೊ:9611101379), ನಿಡಗುಂದಿ ತಾಲೂಕಿಗೆ ತಹಶೀಲ್ದಾರ ಎ.ಡಿ.ಅಮರಾವದಗಿ (ಮೊ:9482268533), ತಾಳಿಕೊಟೆ ತಾಲೂಕಿಗೆ ತಹಶೀಲ್ದಾರ ಶ್ರೀಮತಿ ಕೀರ್ತಿ ಚಾಲಕ(ಮೊ:8861438554), ದೇವರಹಿಪ್ಪರಗಿ ತಾಲೂಕಿಗೆ ತಹಶೀಲ್ದಾರ ಪ್ರಕಾಶ ಸಿಂದಗಿ (ಮೊ:9945856274), ಆಲಮೇಲ ತಾಲೂಕಿಗೆ ತಹಶೀಲ್ದಾರ ಸುರೇಶ ಚಾವಲರ (ಮೊ:9449943022), ಚಡಚಣ ತಾಲೂಕಿಗೆ ತಹಶೀಲ್ದಾರ ಎಸ್.ಬಿ.ಇಂಗಳೆ (ಮೊ:9900776009) ಅವರನ್ನು ನಿಯೋಜಿಸಿ ಆದೇಶಿಸಲಾಗಿದೆ.