ಪ್ರತಿಯೊಬ್ಬ ಮನುಷ್ಯನಲ್ಲಿ ಸಮಾನತೆ ಮತ್ತು ತಾಳ್ಮೆ ಇದ್ದಾಗ ಮಾತ್ರ ಅವನು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು
ಇಂಡಿ: ಪ್ರತಿಯೊಬ್ಬ ಮನುಷ್ಯನಲ್ಲಿ ಸಮಾನತೆ ಮತ್ತು ತಾಳ್ಮೆ ಇದ್ದಾಗ ಮಾತ್ರ ಅವನು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಇದನ್ನು ಮಹಾತ್ಮರಿಂದಲೇ ಪಡೆದುಕೊಳ್ಳಬೇಕೆಂದು ಖೇಡಗಿ ವಿರಕ್ತಮಠದ ಶಿವ ಬಸವರಾಜೇಂದ್ರ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಬುಧವಾರ ತಾಲೂಕಿನ ಅಗಡಖೇಡ ಗ್ರಾಮದಲ್ಲಿ ಲಿಂ. ಪ್ರಭುಲಿಂಗೇಶ್ವರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾವು ಬದುಕಿನಲ್ಲಿ ಒಳ್ಳೆಯ ರೀತಿಯಾಗಿ ಇನ್ನೊಬ್ಬರಿಗೆ ಸಹಾಯ ಹಸ್ತ ನೀಡುವಂತ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಈ ಸಮಾಜ ಸುಂದರವಾಗಿ ಬೆಳೆಯಬಹುದೆಂದು ಅವರು ತಿಳಿಸಿ ಭಕ್ತರಲ್ಲಿ ಹೃದಯ ಶ್ರೀಮಂತಿಕೆ ಇರಬೇಕು. ದೈವಭಕ್ತಿ ಇರುವವರಿಗೆ ಗುರವಿನ ಆಶೀರ್ವಾದ ಇರುತ್ತದೆ ಎಂದರು.
ಇAಚಗೇರಿ ಬೃಹನ್ಮಮಠದ ಶಂಭುಲಿAಗ ಶಿವಾಚಾರ್ಯರು ಹಾಗೂ ಚಡಚಣ ವಿರಕ್ತಮಠದ ಷಡಕ್ಷರಿ ಮಹಾಸ್ವಾಮಿಗಳು ಉಪಸ್ಥಿರಿದ್ದು ಆಶೀರ್ವಚನ ನೀಡಿ, ಇಂತಹ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮಾಂತರ ಪ್ರದೇಶಗಳಲ್ಲಿ ನಡೆದಾಗ ಮಾತ್ರ ಸಮಾಜದಲ್ಲಿ ನಾವು ಹಲವಾರು ವಿಷಯಗಳನ್ನು ತಿಳಿಯುತ್ತೇವೆ ಎಂದರು.
ಜಾತ್ರಾ ಮಹೋತ್ಸವ ಅಂಗವಾಗಿ ಬೆಳಗ್ಗೆ ಲಿಂಗೈಕ್ಯ ಪ್ರಭುಲಿಂಗೇಶ್ವರ ಶಿವಯೋಗಿಗಳ ಕತೃ ಗದ್ದುಗೆ ಮಹಾ ರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ ಮಹಾಮಂಗಳಾರತಿ ಬಸವರಾಜ ಹಿರೇಮಠ ಹಾಗೂ ಮಡಿವಾಳಯ್ಯ ಹಿರೇಮಠ ನೆರವೇರಿಸಿದರು.
ಈ ಸಂದರ್ಭದಲ್ಲಿ ಗುರುವರ್ಯರ ಪಲ್ಲಕ್ಕಿ ಉತ್ಸವ, ಪುರವಂತರ ಸೇವೆ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭ ಕಳಸಾರತೆ ಹಾಗೂ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಜರುಗಿತು.
ಮಹೋತ್ಸವ ಅಂಗವಾಗಿ ೧೧ ದಿನಗಳ ಕಾಲ ಆಯೋಜಿಸಿದ ನವಲಗುಂದ ನಾಗಲಿಂಗ ಅಜ್ಜನವರ ಪುರಾಣ ಪ್ರವಚನ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಮಹಾಪ್ರಸಾದ ಸೇವೆ ಮಾಡಿದ ದಾನಿಗಳನ್ನು ಶಾಲು ಹೊಂದಿಸಿ ಸನ್ಮಾನಿಸಲಾಯಿತು. ಮುತ್ತೈದೆರಿಗೆ ಸಿದ್ದಲಿಂಗ ಕಾಳಪ್ಪ ಬಡಿಗೇರ್ ದಂಪತಿಗಳಿAದ ಉಡಿ ತುಂಬುವ ಕಾರ್ಯಕ್ರಮ ಜರುಗಿತು.
ಪ್ರಭುಲಿಂಗೇಶ್ವರದ ವಿರಕ್ತಮಠದ ಪೀಠಾಧಿಪತಿ ಅಭಿನವ ಪ್ರಭುಲಿಂಗೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಅಗರಖೇಡ ಹಾಗೂ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಭಾಗವಹಿಸಿದರು.
ಶಿಕ್ಷಕರಾದ ಎಸ್. ಎಮ್.ಬಿರಾದಾರ್ ಹಾಗೂ ಪ್ರಭು ಪಾಟೀಲ ನಿರೂಪಿಸಿದರು.




















