ರೈತರಿಗೆ ಒಂದು ದಿನದ ತಾಂತ್ರಿಕ ಹಾಗೂ ಸಾಮಾರ್ಥ್ಯಾಭಿವೃದ್ಧಿ ತರಬೇತಿ
ವಿಜಯಪುರ,ಫೆ 25 :2025-26ನೇ ಸಾಲಿನ ದೇಸಿ ತಳಿಗಳ ಸಂರಕ್ಷಣೆ ಮತ್ತು ರೈತರಿಗೆ ಒಂದು ದಿನದ ತಾಂತ್ರಿಕ ಹಾಗೂ ಸಾಮಾರ್ಥ್ಯಾಭಿವೃದ್ಧಿ ತರಬೇತಿ ಉತ್ತೇಜನ ಕಾರ್ಯಕ್ರಮದಡಿ ಫೆ 23ರಂದು ವಿಜಯಪುರ, ಮುದ್ದೇಬಿಹಾಳ ಹಾಗೂ ಬಸವನ ಬಾಗೇವಾಡಿಯಲ್ಲಿ ಫೆ 24 ರಂದು ಸಿಂದಗಿ ಮತ್ತು ಇಂಡಿ ತಾಲೂಕಿನ ರೈತ -ರೈತ ಮಹಿಳೆಯರಿಗೆ ವಿಜಯಪುರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ತರಬೇತಿ ಆಯೋಜಿಸಲಾಯಿತು.
ಕಣ್ಮರೆಯಾಗುತ್ತಿರುವ ಹಾಗೂ ನಶಿಸಿ ಹೋಗುತ್ತಿರುವ ಸ್ಥಳೀಯ ಪ್ರದೇಶಕ್ಕೆ ಸೂಕ್ತವಾದ ದೇಸಿ ತಳಿಗಳನ್ನು ಗುರುತಿಸುವುದು ಹಾಗೂ ಸಂರಕ್ಷಿಸುವುದು. ದೇಸಿ ತಳಿಗಳನ್ನು ಸಂರಕ್ಷಿಸಿ ಕೃಷಿ ಮಾಡುತ್ತಿರುವ ರೈತರಿಗೆ ಬೆಂಬಲ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಕಾರ್ಯಕ್ರಮವನ್ನು ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ.ಎಸ್.ಪಾಟೀಲ ಉದ್ಘಾಟಿಸಿ, ಕಣ್ಮರೆಯಾಗುತ್ತಿರುವ ಹಾಗೂ ನಶಿಸಿ ಹೋಗುತ್ತಿರುವ ದೇಸಿ ತಳಿಗಳನ್ನು ಗುರುತಿಸುವುದು ಹಾಗೂ ಸಂರಕ್ಷಿಸುವ ಕುರಿತು ಮಾತನಾಡಿದರು.
ವಿಜುಪುರದ ಕೆ.ವಿ.ಕೆಯ ಮುಖ್ಯಸ್ಥರಾದ ಮತ್ತು ಹಿರಿಯ ವಿಜ್ಞಾನಿಗಳಾದ ಡಾ ಎಸ್. ಎಂ. ವಸ್ತ್ರದ ಮಾತನಾಡಿ ದೇಸಿ ಬೀಜಗಳ ಮಹತ್ವ ಮತ್ತು ಬೀಜ ಆಯ್ಕೆ ವಿಧಾನಗಳನ್ನು ವಿವರಿಸಿದರು. ರೈತ-ರೈತ ಮಹಿಳೆಯರು ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಉಪ ವಿಜಯಪುರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರಾದ ಎಸ್.ಜಿ.ರಾಧಾಕೃಷ್ಣ,
ಸಹಾಯಕ ಕೃಷಿ ನಿರ್ದೇಶಕರಾದ ಎಚ್.ವಾಯ್.ಸಿಂಗೆಗೋಳ, ಶ್ರೀಮತಿ ಪಾರ್ವತಿ ಪಾಟೀಲ, ಶ್ರೀಮತಿ ವಿಜಯಲಕ್ಷ್ಮೀ ಚವ್ಹಾಣ, ಕೃಷಿ ಅಧಿಕಾರಿಗಳಾದ ಶ್ರೀಮತಿ ಲಕ್ಷ್ಮೀ ಕಾಮಗೊಂಡ, ಶ್ರೀಮತಿ ಫಾತಿಮಾಭಾನು ಸುತಾರ, ಎಂ. ಆರ್ ಮೈದರಗಿ ಹಾಗೂ ಶ್ರೀಮತಿ ಗೀತಾ ಭಜಂತ್ರಿ ಉಪಸ್ಥಿತರಿದ್ದರು.



















