ರಾಯಚೂರು : ನಗರದ ವಾಸವಿ ಕ್ಲಬ್ ವತಿಯಿಂದ ಒಂದು ಹೆಜ್ಜೆ ಸ್ವಚ್ಛತೆ ಕಡೆಗೆ ಸ್ವಚ್ಛ ಭಾರತ ಸುಂದರ ಭಾರತ ಸ್ವಚ್ಛತಾ ಅಭಿಯಾನಕ್ಕೆ ನಗರದ ವಾಸವಿ ವೃತ್ತದಲ್ಲಿ ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಚಾಲನೆ ನೀಡಿದರು.
ನಗರದ ಹನುಮಾನ್ ಟಾಕಿಸ್ ಬಳಿ ಇರುವಂತಹ ನೂತನ ವಾಸವಿ ವೃತ್ತದಲ್ಲಿ ಇಂದು ರಾಯಚೂರು ನಗರ ಶಾಸಕ ಡಾಕ್ಟರ್ ಶಿವರಾಜ್ ಪಾಟೀಲ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಗರಸಭೆ ವತಿಯಿಂದ ಸಿಬ್ಬಂದಿಗಳು ಕಸ ವೊಯ್ಯಲು ಬಂದ ವೇಳೆಯಲ್ಲಿ ನಿವಾಸಿಗಳು ಮನೆಯಲ್ಲಿ ವಿಂಗಡಣೆ ಮಾಡುವ ಮೂಲಕ ಅವರಿಗೆ ನೀಡಲು ಕರೆ ನೀಡಿದರು.
ಭಾರತಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳು ಅಮೃತಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಇದರ ಅಡಿಯಲ್ಲಿ ರಾಯಚೂರು ನಗರದ ವಾಸವಿ ಕ್ಲಬ್ ಯುವಕರು ಒಂದು ಸ್ವಚ್ಛ ಅಭಿಯಾನ ಹಮ್ಮಿಕೊಂಡಿದ್ದು ಇದು ಮಾದರಿಯಾಗಬೇಕು ಮತ್ತು ಸಾರ್ವಜನಿಕರು ಕೂಡ ಎಲ್ಲರೂ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳಲು ಶಾಸಕರು ಕರೆ ನೀಡಿದರು.