ಶ್ರೀಗಳ ಜನ್ಮ ದಿನಾಚರಣೆ ನಿಮಿತ್ಯ
ಇಂದು ಕೆ.ಎ.ಎಸ್ ಮತ್ತು ಐ.ಎ.ಎಸ್ ಕಾರ್ಯಾಗಾರ
ಇಂಡಿ : ಶಿರಶ್ಯಾಡದ ಪರಮಪೂಜ್ಯ ಶ್ರೀ ಮುರುಗೇಂದ್ರ ಶಿವಾಚಾರ್ಯರರ ಜನ್ಮ ದಿನೋತ್ಸವ ಹಾಗೂ ಗುರುವಂದನಾ ಮತ್ತು ಗ್ರಾಮೀಣ ಮಕ್ಕಳ ಉಜ್ವಲ್ ಭವಿಷ್ಯಕ್ಕಾಗಿ ಕೆ.ಎ.ಎಸ್ ಮತ್ತು ಐ.ಎ.ಎಸ್ ಕಾರ್ಯಾಗಾರ ಪ್ರತಿ ತಿಂಗಳ ಮಾಸಿಕ ಶಿಬಿರದ ಹಾಗೂ ಪ್ರತಿ ತಿಂಗಳ ಹುಣ್ಣಿಮೆ ಬೆಳಂದಿಗಳ ಕಾರ್ಯಕ್ರಮದ ಉದ್ಘಾಟನೆ ಬುಧವಾರ ಮಾ. ೧೮ ರಂದು ಸಾಯಂಕಾಲ ೫ ಗಂಟೆಗೆ ಶ್ರೀಮಠದ ಸದಾಶಿವ ನಗರ ಸಿಂದಗಿ ರಸ್ತೆಯಲ್ಲಿ ನಡೆಯಲಿದೆ.
ಶಿರಶ್ಯಾಡದ ಮುರಗೇಂದ್ರ ಶ್ರೀಗಳು, ಮಮದಾಪುರದ ಮುರಗೇಂದ್ರ ಶಿವಾಚಾರ್ಯರರು,ಆಳುರದ ಶಂಕರಾನAದ ಶ್ರೀಗಳು, ಚಿಕ್ಕಪಡಸಲಗಿಯ ಶಶಿಕಾಂತ ಗುರುಜಿ, ಸಂಸದ ರಮೇಶ ಜಿಗಜಿಣಗಿ, ಶಾಸಕ ಯಶವಂತರಾಯಗೌಡ ಪಾಟೀಲ, ನಾಗರತ್ನ ಅಶೋಕ ಮನಗೂಳಿ, ಶಂಕರಗೌಡ ಪಾಟೀಲ, ಕಾಸುಗೌಡ ಬಿರಾದಾರ, ಸಂಗಮೇಶ್ವರ ಬಬಲೇಶ್ವರ, ಮಾಜಿ ಶಾಸಕ ದೇವಾನಂದ ಚವ್ಹಾಣ, ವಿ.ಪ ಸದಸ್ಯ ಹಣಮಂತ ನಿರಾಣಿ, ನಾನಾಗೌಡ ಬಿರಾದಾರ, ಡಾ|| ಪ್ರಭುಗೌಡ ಪಾಟೀಲ, ದಯಾಸಾಗರ ಪಾಟೀಲ, ಬಿ.ಡಿ.ಪಾಟೀಲ ಆಗಮಿಸುವರು ಎಂದು ಶ್ರೀಮಠದಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



















