ಫೆ.17 ಇಂಡಿಯಲ್ಲಿ ವಿದ್ಯುತ್ ಪೂರೈಕೆಯ ವ್ಯತ್ಯಯ..!
News :9972400321/8618981392
ಇಂಡಿ: 220ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರ ಆಹೇರಿ ಮತ್ತು ಇಂಡಿಯಲ್ಲಿ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ, ಹಿನ್ನೆಲೆಯಲ್ಲಿ ಸದರೀ ವಿದ್ಯುತ್ ಸ್ವೀಕರಣಾ ಕೇಂದ್ರ 220ಕೆ.ವಿ ಆಹೇರಿ ಮತ್ತು ಇಂಡಿಯಿಂದ ಸರಬರಾಜು ಆಗುವ ಎಲ್ಲ 110ಕೆ.ವಿ, 33ಕೆ.ವಿ ಮತ್ತು 11ಕೆ.ವಿ ಮಾರ್ಗಗಳಲ್ಲಿ ಫೆ. 17, ಬೆಳಗ್ಗೆ 08.00 ಘಂಟೆಯಿಂದ ಸಾಯಂಕಾಲ 04.00 ಘಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು (ವಿ) ಹೆಸ್ಕಾಂ, ಇಂಡಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.