ಅ- 9 ರಂದು, ಶ್ರೀ ಆದಿಶೇಷನ ಜಾತ್ರಾ ಮಹೋತ್ಸವ.
ಇಂಡಿ : ನಗರದಲ್ಲಿ ವಿಶೇಷವಾಗಿ ಮಲೆನಾಡಿನ ಶೈಲಿಯ ಹಂಚಿನ ಮೇಲ್ಚಾವಣಿಯನ್ನು ಹೂಂದಿದ, ಪ್ರತ್ಯೇಕವಾಗಿ ನಾಗದೇವರ ದೇವಾಲಯ ನಿರ್ಮಾಣಗೋಂಡಿದ್ದು, ಇದು ಮೂರನೇ ವರ್ಷದ ಜಾತ್ರಾ ಮಹೋತ್ಸವ ಅ- 9 ರಂದು ನಡೆಯುತ್ತದೆ ಎಂದು ಜಾತ್ರಾ ಆಡಳಿತ ಮಂಡಳಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಂದಗಿ ರಸ್ತೆಯ ಪದವಿ ಕಾಲೇಜು ಪಕ್ಕದ ಹಳೆಯ ಸಾಲೋಟಗಿ ರಸ್ತೆಯ ವಾರ್ಡ್ ನಂಬರ್ 12ರಲ್ಲಿ, ಪ್ರತಿವರ್ಷದಂತೆ ಈ ವರ್ಷವೂ ನಾಗರಪಂಚಮಿಯ ದಿನದಂದು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಆದಿಶೇಷನಿಗೆ ಮಹಾ ಅಭಿಷೇಕ, ಹೋಮ್ ಹವನ ಕಾರ್ಯಕ್ರಮ ನಡೆಯುತ್ತದೆ. ಬೆಳ್ಳಿಗೆ 7 ಘಂಟೆಯಿಂದಲೆ ಸುಮಂಗಲಿಯರಿಂದ ನಾಗ ದೇವರಿಗೆ ಹಾಲೇರಿಯುವ ಕಾರ್ಯಕ್ರಮ ನಡೆಯುತ್ತದೆ. ಆಗಮಿಸಿದ ಭಕ್ತರಿಗೆ ಅನ್ನಪ್ರಸಾದ ವಿತರಣೆ, ಸಾಯಂಕಾಲ ಭಜನಾ ಮಂಡಳಿಯಿಂದ ಗಾನಸುಧೆ ನಡೆಯುವುದು.ನಗರದ ಸದ್ಬಕರು ಈ ಪೂಣ್ಯಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾಗಬೇಕಾಗಿ, ಶ್ರೀ ಆದಿಶೇಷ ದೇವಸ್ಥಾನ ಜಾತ್ರಾ ಮಹೋತ್ಸವದ ಕಮೀಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ