ಹಿರೇಬೇವನೂರ ಸಕ್ಕರೆ ಕಾರ್ಖಾನೆಗೆ ಅಧಿಕಾರಿಗಳ ಭೇಟಿ
ತೂಕ ಮತ್ತು ಇಳುವರಿ ಪರಿಶೀಲನೆ
ಇಂಡಿ : ತಾಲೂಕಿನ ಹಿರೇಬೇವನೂರ ಗ್ರಾಮದ ಇಂಡಿಯನ್ ಸುಗರ್ ಕೇನ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಗೆ ಕೃಷಿ ಉಪ ನಿರ್ದೇಶಕ ಚಂದ್ರಕಾAತ ಪವಾರ ನೇತೃತ್ವದ ಕಬ್ಬು ಪರಿಶೀಲನಾ ಸಮಿತಿ ಭೇಟಿ ನೀಡಿತು.
ಕಬ್ಬಿನ ತೂಕ, ಮಷಿನ ಮತ್ತು ಇಳುವರಿ ಪರಿಶೀಲಿಸಿತು. ಕಬ್ಬಿನ ತೂಕದ ಮಷೀನು ಡಿಜಿಟಲ್ ಮತ್ತು ಎರಡು ತೂಕದ ಮಷಿನ್ ಇರುವದನ್ನು ಪರಿಶೀಲಿಸಿತು.
ಅದರಂತೆ ಕಬ್ಬಿನ ರಿಕವರಿ ರೈತರ ಸಮ್ಮುಖದಲ್ಲಿ ಪ್ರಯೋಗಾಲಯದಲ್ಲಿ ಖಚಿತ ಪಡಿಸಿಕೊಂಡಿತು.
ಅದಲ್ಲದೆ ರೈತರಿಗೆ ಕಬ್ಬಿನ ತೂಕದ ಪಾವತಿ ವಿತರಣೆ ಯಾಗುತ್ತಿರುವ ಬಗ್ಗೆ ಪರಿಶೀಲಿಸಿದರು.ರೈತರಿಗೆ ತೂಕದಲ್ಲಿ ಯಾವದೇ ರೀತಿಯ ವ್ಯತ್ಯಾಸ ಆಗದಂತೆ ನೋಡಿ ಕೊಳ್ಳಲು ಕಾರ್ಖಾನೆ ಸಿಬ್ಬಂದಿಗೆ ಸೂಚಿಸಿತು. ಕಬ್ಬಿನ ಹಣ ನೀಡುವದನ್ನು ಸಮಿತಿ ಖಚಿತ ಪಡಿಸಿಕೊಂಡಿತು.
ಕೃಷಿ ಉಪ ನಿರ್ದೇಶಕ ಚಂದ್ರಕಾAತ ಪವಾರ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಗ್ರಾಮೀಣ ಪಿ.ಎಸ್.ಐ ರಾಜು ಮಮದಾಪುರ, ಆಹಾರ ನೀರಿಕ್ಷಕ ಎಸ್. ಡಿ.ಹಲಸಂಗಿ ಅಬಕಾರಿ ಅಧಿಕಾರಿ ರಾಹುಲ್ ನಾಯಕ,ತೂಕ ಮತ್ತು ಅಳತೆ ಅಧಿಕಾರಿ ಶಶಿಕಾಂತ ಲಮಾಣಿ ರೈತ ಮುಖಂಡರಾದ ಇಂಗಳಗಿಯ ಚಿಕ್ಕಪ್ಪ ಪೂಜಾರಿ, ಭ್ಯೂಯ್ಯಾರ ಗ್ರಾಮದ ರಮೇಶ ನಾಟಿಕಾರ, ಹಿರೇಬೇವನೂರದ ಶ್ರೀಶೈಲ ಬೇವನೂರ ಮತ್ತು ಜಗದೀಶ ಬಮ್ಮನಹಳ್ಳಿ ಮತ್ತಿತರಿದ್ದರು.
ಇಂಡಿ ತಾಲೂಕಿನ ಹಿರೇಬೇವನೂರ ಸಕ್ಕರೆ ಕಾರ್ಖಾನೆಗೆ ಅಧಿಕಾರಿಗಳ ಭೇಟಿ


















