ಮುದ್ದೇಬಿಹಾಳ ;ಪಟ್ಟಣದ ಜನರ ಬಹುದಿನದ ಬೇಡಿಕೆಗಳಲ್ಲಿ ಒಂದಾದ ನಗರ ಸಾರಿಗೆ ಸಂಚಾರ ವ್ಯವಸ್ಥೆಗೆ ರವಿವಾರ ಅಧಿಕೃತ ಚಾಲನೆಯನ್ನು ಕೆಎಸ್ ಡಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ಚಾಲನೆಯನ್ನು ನೀಡಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಎರಡು ನಗರ ಸಂಚಾರ ಬಸ್ ಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದ ಶಾಸಕರು ಈ ದಿನ ಸಂತೋಷದ ಸುದಿನವಾಗಿದೆ ಮುದ್ದೇಬಿಹಾಳ ಪಟ್ಟಣ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗಲು ಎರಡು ಮೂರು ಕಿಮೀ ದೂರ ಸಂಚರಿಸಬೇಕು ಇದರಿಂದ ತುಂಬಾ ಜನರಿಗೆ ತೊಂದರೆ ಆಗುತ್ತಿತ್ತು ಇದನ್ನು ಮನಗಂಡು ನಮ್ಮ ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಶಿವಶಂಕರಗೌಡ ಹಿರೇಗೌಡರ ಅವರು ಸಭೆ ಮಾಡಿ ಅಭಿಪ್ರಾಯ ಪಡೆದಾಗ ಸಿಟಿ ಬಸ್ ಸಂಚಾರ ಕುರಿತು ಅಭಿಪ್ರಾಯ ಬಂದಾಗ ಆ ವಿಷಯವನ್ನು ನನ್ನೂಂದಿಗೆ ಚರ್ಚೆಸಿದರು ಕೂಡಲೇ ಸಾರಿಗೆ ಜಿಲ್ಲಾ ಡಿಸಿ ಅವರೂಂದಿಗೆ ಮುದ್ದೇಬಿಹಾಳ ಸಾರಿಗೆ ಘಟಕ ವ್ಯವಸ್ಥಾಪಕರೂಂದಿಗೆ ಚರ್ಚಿಸಿದ ದಿನವೇ ಎರಡು ಬಸ್ ಪಡೆದರು ಇದು ನಿಜವಾದ ಕಾರ್ಯಕ್ಷಮತೆ ಎಂದರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು ಸದ್ಯ ಎರಡು ಬಸ್ ಗಳು ನಗರದಲ್ಲಿ ಸಂಚರಿಸುತ್ತವೆ ಅದರ ಆದಾಯ ಮತ್ತು ಜನರ ಸ್ಪಂದನೆಯನ್ನು ಗಮನಿಸಿ ಪಟ್ಟಣದ ಇತರೆ ನಗರಕ್ಕೆ ಸಿಟಿ ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಶಿವಶಂಕರಗೌಡ ಹಿರೇಗೌಡರ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಸ್ಥಾಯಿ ಸಮಿತಿಯ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ಅಬ್ದುಲ್ ಗಫೂರ್ ಮಕಾನದಾರ, ಪಿಂಟು ಸಾಲಿಮನಿ, ಕಾಮರಾಜ ಬಿರಾದಾರ,ಪ್ರತಿಭಾ ಅಂಗಡೇರಿ, ಗಿರಿಜಾ ಕಡಿ, ಸರಸ್ವತಿ ಪೀರಾಪೂರ ಸೇರಿದಂತೆ ಪುರಸಭೆ ಸದಸ್ಯರು ಗ್ಯಾರಂಟಿ ಯೋಜನೆ ಸದಸ್ಯರು ಪಟ್ಟಣದ ನಾಗರಿಕರು ಭಾಗವಹಿಸಿದ್ದರು
ನೂತನ ಸಿಟಿ ಬಸ್ ಸಂಚಾರಕ್ಕೆ ಮುದ್ದೇಬಿಹಾಳ ಪಟ್ಟಣದ ಜನತೆ ಪುಲ್ ಖುಷ್ ಆಗಿದ್ದಾರೆ ಪಟ್ಟಣದ ವಿವಿಧಡೆ ಬಸ್ ಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಸಿಹಿ ಹಂಚಿದರು.
ಮುದ್ದೇಬಿಹಾಳ ಬಸ್ ನಿಲ್ದಾಣದಿಂದ ಹಡಲಗೇರಿ ಮಾರ್ಗ ಕ್ಕೆ ಒಂದು ಬಸ್ ,ಅಂತೆಯೇ ಬಸ್ ನಿಲ್ದಾಣದಿಂದ ಮಾರುತಿ ನಗರ ಮಾರ್ಗ ಕ್ಕೆ ಇನ್ನೊಂದು ಬಸ್ ವ್ಯವಸ್ಥೆ ಮಾಡಲಾಗಿದೆ.
ಸ್ಟಾಪ್ ಗಳು ;ಮುದ್ದೇಬಿಹಾಳ ಬಸ್ ನಿಲ್ದಾಣದಿಂದ ಬಸವೇಶ್ವರ ವೃತ್ತ, ಕೆಇಬಿ ( ಪಿಲೆಕಮ್ಮ ಮಂದಿರ) ಸರಕಾರಿ ಆಸ್ಪತ್ರೆ, ಪದ್ಮಾವತಿ ದೇವಿ ಮಂದಿರ, ಹಡಲಗೇರಿ , ಹುಡ್ಕೂ ಗೇಟ್, ಅಂಬೇಡ್ಕರ್ ವೃತ್ತ ( ಓಂಶಾಂತಿ) ರಿಲಯನ್ಸ್ ಪೆಟ್ರೋಲ್ ಬಂಕ್, ಮಾರುತಿ ನಗರ ಮಾರುತಿ ದೇವಸ್ಥಾನ, ಎಂಜಿಎಂಕೆ ಮೈದಾನ, ಮಾರುತಿ ನಗರ
ಬಸ್ ದರ ; ಪ್ರತಿ ಸ್ಟಾಪ್ ಗೆ 6 ರೂ, ಬಸ್ ನಿಲ್ದಾಣದಿಂದ ಹಡಲಗೇರಿ 12 ರೂ ,ಹಡಲಗೇರಿ ಇಂದ ಮಾರುತಿ ನಗರ 16 ರೂ ಸಿಟಿ ಬಸ್ ಸಂಚಾರಕ್ಕೆ ಶಕ್ತಿ ಯೋಜನೆ ಸೌಲಭ್ಯ ಇದೆ ; ಎ.ಹೆಚ್ ಮಧಬಾವಿ ಸಾರಿಗೆ ಘಟಕ ವ್ಯವಸ್ಥಾಪಕರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಎರಡು ನಗರ ಸಂಚಾರ ಬಸ್ ಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಶಾಸಕ ಸಿ ಎಸ್ ನಾಡಗೌಡ ಮಾತನಾಡಿದರು.