ತಳವಾರ ಸಮುದಾಯದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ..!
ಮನವಿಗಳಿಗೆ ಕಿವಿಗೊಡದ ಅಧಿಕಾರಿವರ್ಗ..!
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಶಿಷ್ಟ ಪಂಗಡದ ಗೆಜೆಟ್ ಹೊರಡಿಸಿವೆ..!
ಚಿಕ್ಕೋಡಿ : ಸರಕಾರದ ಆದೇಶದಂತೆ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ವಿತರಿಸಿ ಎಂದು ಅಖೀಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿಯ ಮುಖಂಡರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಪವಿಭಾಗ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿರುವ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಕೇಂದ್ರ ಸರಕಾರ 20-03-2020 ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿ ಗೆಜಟ್ ಹೊರಡಿಸಿದೆ. ಅದರಂತೆ ರಾಜ್ಯ ಸರಕಾರವೂ ಕೂಡಾ 28-05-2020 ರಂದು ರಾಜ್ಯ ಪತ್ರ ಹೊರಡಿಸಿ ಈ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ವಿತರಿಸಲು ಸರಕಾರ ಸೂಚಿಸಿದೆ. ಆದರೆ ಅಧಿಕಾರಿ ವರ್ಗ ಮಾತ್ರ ಪಲಾಯನ ಮಂತ್ರ ಜಪಿಸುತ್ತ ಸುಳ್ಳಿನ ಕಂತೆ ಕಟ್ಟುತ್ತಾರೆ . ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸುತ್ತೊಲೆ ಗೊಂದಲವಿದೆ. ಸ್ವಷ್ಟಿಕರಣಕ್ಕಾಗಿ ಜಿಲ್ಲಾ ಅಧಿಕಾರಿಗಳಿಗೆ ಪತ್ರ ಬರೆದಿದ್ದೆವೆ ಎಂದು ಹೇಳತ್ತಾ ಶೋಷಿತ ಜನರ ಶ್ರಮ ಸಮಯ ಹಣ ಎಲ್ಲವೂ ಹಾಳು ಮಾಡುತ್ತಾ ನಮ್ಮ ಸಮುದಾಯದ ಜನರಿಗೆ ಶೋಷಣೆ ಮಾಡುತ್ತಾರೆ ಎಂದು ಆರೋಪ ಮಾಡಿದರು.
ಇನ್ನೂ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶಾಲಾ ದಾಖಲಾತಿ, ಸ್ಥಳ ಪರಿಶೀಲನೆ ಮತ್ತು ಸರಕಾರ ಸುತ್ತೊಲೆ, ಗೆಜಟ್ ಪಾಲಿಸದೇ ಕಛೇರಿಯಲ್ಲಿ ಕುಳಿತುಕೊಂಡು ಸಕಾರಣ ನೀಡದೆ ಅರ್ಜಿಗಳನ್ನು ತಿರಸ್ಕರಿಸುತ್ತಾರೆ. ಇದೊಂದು ದುರದ್ದೇಶಪೂರ್ವಕ, ಬೇಜವಾಬ್ದಾರಿಯುತವಾಗಿ ಕಾನೂನಿನ ವಿರುದ್ದವಾಗಿ ನಡೆದುಕೊಳ್ಳುದರ ಜೊತೆಗೆ ಶೋಷಿತ ಸಮುದಾಯದ ಮೇಲೆ ದೃಷ್ಯ ಕೃತ್ಯ ಎಸಗಿದಂತಾಗುತ್ತೆದೆ ಎಂದು ಹೇಳಿದರು.
ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರ ಶೋಷಿತರ ಪರವಾಗಿ ಇದ್ದೆವೆ ಎಂದು ಸಬಕಾ ಸಾಥ್, ಸಬಕಾ ವಿಕಾಸ , ಸಬಕಾ ವಿಶ್ವಾಸ, ಸಬಕಾ ಪ್ರಯಾಸ್ ದೊಂದಿಗೆ ಶೋಷಿತ ವರ್ಗಗಳ ಸಬಲೀಕರಣಕ್ಕಾಗಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸರಕಾರದ ಯೋಜನೆ ಗಳು ತಲುಪಬೇಕು ಮತ್ತು ಮುನ್ನಲೆಗೆ ತರುವ ಮಹತ್ತರ ಜವಾಬ್ದಾರಿ ಸರಕಾರದ ಗುರಿಯಾಗಿದೆ. ಕಳೆದ ಎರಡು ವರ್ಷಗಳ ಹಿಂದೆಯೇ ಸರಕಾರ ತಳವಾರ ಮತ್ತು ಪರಿವಾರ ಜೊತೆಗೆ ಸಿದ್ದಿ ಜನಾಂಗಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಕೊಡಲು ಆದೇಶ ಹೋರಡಿಸಿದೆ. ಆದರೆ ಇಲ್ಲಿಯವರೆಗೆ ಪ್ರಮಾಣ ಪತ್ರ ಕೊಡದೆ ಈ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ . ಈ ಕೂಡಲೇ ಕಾನೂನಾತ್ಮಕವಾಗಿ ಪ್ರಮಾಣ ಪತ್ರ ಕೊಡಲು ಸೂಚಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಪ್ಪಾಸಾಬ ಟಿ.ಕೆ, ರಾಜು ತಳವಾರ, ಅಪ್ಪಾಸಾಬ ಎಮ್ ಕೆ, ಮಿಥುನ್ ಕೆ, ಅಮೀತ ಕೆ, ಕೃಷ್ಣಾ ಕೆ, ಸುಕುಮಾರ ಕೆ, ವೀರು ಕೆ, ಬಾಬಾಸಾಬ ತಳವಾರ, ಬಾಳು ಕೆ, ರವೀಂದ್ರ ಕೆ, ಸುನೀತಾ ಕೆ ಇನ್ನೂ ಅನೇಕರು ಉಪಸ್ಥಿತರು.