ಇಂಡಿ : ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿರುವ ನ್ಯಾಯಾಧೀಶ ವಿರುದ್ಧ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಮಿನಿ ವಿಧಾನಸೌಧ ಎದುರು ಕರ್ನಾಟಕ ರಾಜ್ಯ ದಲಿತ ಸಮನ್ವಯ ಸಮಿತಿಯಿಂದ ಪ್ರತಿಭಟನೆ ನಡೆಸಿದರು. ಇನ್ನು ಸರ್ಕಾರ ನ್ಯಾಯಾಧೀಶ ಮಲ್ಲಿಕಾರ್ಜುನಗೌಡರ ಮೇಲೆ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅಂಬೇಡ್ಕರ್‌ಗೆ ಅವಮಾನ ಮಾಡಿದ್ದು ಖಂಡನೀಯ. ಅದಕ್ಕಾಗಿ ಅವರನ್ನು ಕೆಲಸದಿಂದ ವಜಾ ಮಾಡುಬೇಕು. ಅಲ್ಲದೇ, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಆಗ್ರಹಿಸಿದರು.
ಇದೇ ವೇಳೆಯಲ್ಲಿ ಹೋರಾಟಗಾರ ಶಿವಾಜಿ ಮೇಟಗಾರ್ ಮಾತನಾಡಿ, ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಿರುದ್ಧ ಸರ್ಕಾರ ತಕ್ಷಣವೇ ಕ್ರಮಕ್ಕೆ ಮುಂದಾಗಬೇಕು. ಇಲ್ಲದೇ ಹೋದ್ರೇ ಭೀಮಾತೀರದ ಹಾಗೇ ರಾಯಚೂರಿನಲ್ಲಿ ಕೃಷ್ಣಾತೀರ ಆಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಇದೇ ಸಂದರ್ಬದಲ್ಲಿ ಬಜೆಪಿ ಜಿಲ್ಲಾ ರೈತ ಮೂರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ದಸ್ತಗೀರ ಮುಲ್ಲಾ, ನಾಗೇಶ ಶಿವರಶರಣ, ಶಿವು ಮೂರಮನ ಮಾತಾನಾಡಿ, ಕೂಡಲೇ ಕ್ರಮ ಜರಗಿಸಿದಿದ್ದರೆ ಉಗ್ರ ರೂಪದ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ನೀಡಿದರು.
ದೇವೆಂದ್ರ ಕುಂಬಾರ, ಬಾಳು ಗಣೋರೆ, ಮುನ್ನಾ ಡಾಂಗೆ, ಗಣಪತಿ ಬಾಣಿಕೋಲ, ವಿಜಯಕುಮಾರ ಮೂರಮನ, ಅಯೂಬ ನಾಟಿಕಾರ, ಶಿವು ಬಗಲಿ,ಆನಂದ ಪವಾರ್, ಪಿರಪ್ಪ ಕಟ್ಟಿಮನಿ, ಹುಚ್ಚಪ್ಪ ತಳವಾರ, ರೈಸ್ ಅಷ್ಟೇಕರ, ವಿಕಾಸ ಹೊಸಮನಿ, ಪರಸು ಬಿಸನಾಳ, ಪರಶುರಾಮ ಶಿವಶರಣ, ಶಶಿಕಾಂತ ರಾಠೋಡ, ದತ್ತಾ ಬಂಡೆನವರ ಉಪಸ್ಥಿತರು.