ಬದಕು ಬದಲಾವಣೆಗಾಗಿ ನುಲಿಯ ಚಂದಯ್ಯ ನವರ ಆದರ್ಶ ಕಾಯಕ ತತ್ವ ಅಳವಡಿಸಿಕೊಳ್ಳಿ..! ಎಮ್ ಆರ್ ಮಂಜುನಾಥ್
ಹನೂರು: ಶ್ರೀ ನುಲಿಯ ಚಂದಯ್ಯ ನ 116ನೇ ಜಯಂತೋತ್ಸವ ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಾಮರಾಜನಗರ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ನುಲಿಯ ಚಂದಯ್ಯ ನವರ 916ನೇ ಜಯಂತೋತ್ಸವವನ್ನು ದೀಪ ಬೆಳಗಿಸುವುದರ ಮೂಲಕ ಹಾಗೂ ಶ್ರೀ ನುಲಿಯ ಚಂದಯ್ಯ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಎಂ ಆರ್ ಮಂಜುನಾಥ್ ರವರು ಚಾಲನೆಯನ್ನು ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದ ಎಂ ಆರ್ ಮಂಜುನಾಥ್ ಸಮಾಜದ ಬದುಕು ಮತ್ತು ಭೂಮಿಯ ಬಗ್ಗೆ ಬಹಳ ಚಿಂತನೆ ಮಾಡಿದ್ದ ಪ್ರಮುಖರಲ್ಲಿ ಶ್ರೀ ನುಲಿಯ ಚಂದಯ್ಯ ಒಬ್ಬರಾಗಿದ್ದಾರೆ. ಅವರ ಆದರ್ಶ ಕಾಯಕ ತತ್ವವನ್ನು ನಾವು ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಹಸನಾಗುತ್ತದೆ. ಕಾಯಕ ತತ್ವದಡಿಯಲ್ಲಿ ಶ್ರದ್ಧೆಯಿಂದ ಕಾರ್ಯ ಮಾಡುತ್ತಾ ಜೀವನ ಮಾಡಿದವರು. ಇಡೀ ಪ್ರಪಂಚಕ್ಕೆ ಒಂದು ದೊಡ್ಡ ಕ್ಯಾಬಿನೆಟ್ ನಂತೆ ಅನುಭವ ಮಂಟಪ ಒಂದು ದಾರಿ ದೀಪವಾಗಿದೆ ಎಂದು ತಿಳಿಸಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕಿರಣ್ ಕುಮಾರ್ ಕೊಟ್ಟಿಗೆರೆ ಅವರು ಮಾತನಾಡಿ 12ನೇ ಶತಮಾನದ ಧಾರ್ಮಿಕ ಜೀವನ ಚಳುವಳಿಯಲ್ಲಿ ನುಲಿಯ ಚಂದಯ್ಯ ನವರ ಪಾತ್ರ ಮುಖ್ಯವಾಗಿದೆ 100 ತಲೆಮಾರು ಕಳೆದರೂ ಇವರನ್ನು ನೆನಪಿಸಿಕೊಳ್ಳುತ್ತೇವೆ ಎಂದರೆ ಬಸವಣ್ಣನವರ ಕಾಲಮಾನ ಎಷ್ಟು ಶ್ರೇಷ್ಠವಾಗಿದೆ ಎಂದು ತಿಳಿದುಕೊಳ್ಳಬಹುದಾಗಿದೆ 915 ವರ್ಷಗಳ ಹಿಂದೆ ಎಲ್ಲಾ ಸಮುದಾಯಗಳಿಗೂ ಅನುಭವ ಮಂಟಪದಲ್ಲಿ ಅವಕಾಶವಿತ್ತು. ನುಲಿಯ ಚಂದಯ್ಯ ನವರು ಕಾಯಕ ತತ್ವ ಹಾಗೂ ಸರಳ ಜೀವಿಗೆ ಹೆಸರುವಾಸಿಯಾಗಿದ್ದರು. ಜಾತಿಯ ಹೆಸರಿನಲ್ಲಿ ಇಂದು ಅದನ್ನು ಮರೆಮಾಚಿಸುತ್ತಿದ್ದಾರೆ ತೋಷಿತ ತಳ ಸಮುದಾಯಗಳ ಬಗ್ಗೆ ಕಾಳಜಿ ಇಟ್ಟು ಸೇವೆ ಮಾಡುತ್ತಿರುವ ಶಾಸಕರ ಸೇವೆಗೆ ಅಭಿನಂದನೆಯನ್ನು ಸಲ್ಲಿಸಿದರು .ಇತಿಹಾಸ ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬುದಾಗಿ ತಿಳಿಸಿದರು.
ಕಾರ್ಯಕ್ರಮವು ಮುನ್ನ ಶ್ರೀ ನುಲಿಯ ಚಂದಯ್ಯ ನವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಗುರುಪ್ರಸಾದ್, ಪಟ್ಟಣ ಪಂಚಾಯತಿ ಸದಸ್ಯರುಗಳಾದ ಸಂಪತ್ ಆನಂದ್ ,ಮಹೇಶ್, ನಾಯಕ್ ಮುಮ್ತಾಜ್ ಬೇಗಂ, ಕುರುವ ಸಮಾಜದ ಜಿಲ್ಲಾಧ್ಯಕ್ಷ ಮಾದೇಶ್ ,ಕಾಂಗ್ರೆಸ್ ವಕ್ತಾರ ಪಲ್ಲವಿ, ಮಾಜಿ ಶಾಸಕ ಬಿ ಚಂದ್ರಣ್ಣ, ಕುಳುವ ಮಹಾಸಭದ ಅಧ್ಯಕ್ಷರಾದ ಶಿವಾನಂದ ಭಜಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಲಿಂಗಯ್ಯ, ವಕೀಲ ಮಹದೇವು, ಮುಖಂಡರು ಪಂಚಾಕ್ಷರಿ, ವೆಂಕಟೇಶ್ ಇನ್ನು ಮುಂತಾದವರು ಹಾಜರಿದ್ದರು.