ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಶಾಸಕರಿಗೆ ಮನವಿ..!
ಬೇಡಿಕೆಗಳು ಈಡೇರದಿದ್ದರೆ ಹೋರಾಟದ ಎಚ್ಚರಿಕೆ..!
ಇಂಡಿ : ಸರ್ಕಾರ ಆ ಗ್ರಾಮದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಇಂದಿರಾ ಆವಾಸ್ ಯೋಜನೆಯಲ್ಲಿ 250 ಮನೆಗಳನ್ನು ನಿರ್ಮಿಸಿ ಕೊಟ್ಟಿತ್ತು. 250 ಮನೆಗಳಲ್ಲಿ ಸಧ್ಯ 800 ಕುಟುಂಬಗಳು ವಾಸಿಸುತ್ತಿವೆ. ಆದರೆ ಈ ಕುಟುಂಬಳಿಗೆ ಮೂಲಭೂತ ಸೌಕರ್ಯಗಳೇ ಮರಿಚಿಕೆಯಾಗಿವೆ.
ಹೌದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಸಳಿ ಬಿ.ಕೆ. ಗ್ರಾಮದ ಹೊಸೂರು ಜನವಸತಿ ಪ್ರದೇಶದಲ್ಲಿ 30 ವರ್ಷಗಳ ಹಿಂದೆ ಅಂದಿನ ಶಾಸಕ ದಿ. ಆರ್. ಆರ್. ಕಲ್ಲೂರ ರವರು ಮಸಳಿ ಗ್ರಾಮದ ಹೊಸೂರು ಜನ ವಸತಿ ಪ್ರದೇಶದಲ್ಲಿ ಇಂದಿರಾ ಆವಾಸ ಯೋಜನೆ ಅಡಿಯಲ್ಲಿ ಸುಮಾರು 250 ಮನೆಗಳನ್ನು ಸರಕಾರದಿಂದ ಮಂಜೂರು ಮಾಡಿಸಿ ಕಟ್ಟಸಿಕೊಟ್ಟಿರು. ಸದ್ಯ ಆ ಪ್ರದೇಶದಲ್ಲಿ ಸುಮಾರು 800 ಜನಸಂಖ್ಯೆ ವಾಸವಾಗಿದ್ದಾರೆ. ಮನೆಗಳು ನಿರ್ಮಾಣವಾದಾಗಿನಿಂದ ಜನ ವಸತಿ ಪ್ರದೇಶದಲ್ಲಿ ಇಲ್ಲಿಯವರೆಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಿಲ್ಲ.
ಇನ್ನು ಜನವಸತಿ ಪ್ರದೇಶದ ರಸ್ತೆಗಳು,ಅತಿಕ್ರಮವಾಗಿ ಒತ್ತುವರಿಯಾಗಿವೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಅನೇಕ ಬಾರಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರುವದಿಲ್ಲ.
ಆದ್ದರಿಂದ ಮಸಳಿ ಬಿ.ಕೆ. ಗ್ರಾಮದ ಹೊಸೂರು ಜನ ವಸತಿ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸೂಕ್ತ ಸಿ. ಸಿ ರಸ್ತೆ, ಚರಂಡಿ ವ್ಯವಸ್ಥೆ, ಬೀದಿ ದೀಪ, ರಸ್ತೆಗಳ ಅಗಲೀಕರಣ ಹಾಗೂ ಶೌಚಾಲಯಗಳ ವ್ಯವಸ್ಥೆ ಮಾಡಿಕೊಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಮನವಿ ಮಾಡಿದ್ದಾರೆ. ಒಂದು ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಮೀನಾಮೇಶ ಮಾಡಿದರೆ ಜನವಸತಿ ಪ್ರದೇಶದ ಜನರು ಉಗ್ರವಾದ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
ರಂಜಾನ್ ಚಟರಕಿ, ರೇಣುಕಾ ಬಿದನೂರು, ಶಾಲನಬೀ ನಾಟೀಕಾರ, ಸುಭಾಲೇವ್ವ ನಂದ್ಯಾಳ,ಶಾರದಾ ನಾಗಠಾಣ, ಸೈಫನ್ ಚಟ್ಟರಕಿ, ರಸೂಲ್ ನಾಟೀಕಾರ, ಪ್ರೇಮಾ ಲೋಕುರ, ಅಜೀತ ಬಾವಿಕಟ್ಟಿ, ಶಕೀಲ ಚಟ್ಟರಕಿ, ಶಾಬುದ್ದಿನ ಜೇಟಗಿ ಉಪಸ್ಥಿತರಿದ್ದರು.