ಇಂಡಿ : 32- ಇಂಡಿ ವಿಧಾನಸಭಾ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಅವರು ತಮ್ಮ ಬೆಂಬಲಿಗರ ಜೊತೆಗೆ ಆಗಮಿಸಿ ಗುರುವಾರ ಕಂದಾಯ ಉಪವಿಭಾಗ ಅಧಿಕಾರಿ ರಾಮಚಂದ್ರ ಗಡದೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಶ್ವನಾಥ ಬಿರಾದಾರ,ಧರ್ಮರಾಜ ವಾಲಿಕಾರ ಜಟ್ಟಪ್ಪ ರವಳಿ, ಶಿವಾನಂದ ನಿಂಬಾಳ, ಹುಚ್ಚಪ್ಪ ತಳವಾರ ಇದ್ದರು.
ಇಂಡಿ : 32- ಇಂಡಿ ವಿಧಾನಸಭಾ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಬಿ.ಡಿ ಪಾಟೀಲ ಬೆಂಬಲಿಗರ ಜೊತೆಗೆ ಗುರುವಾರ ಕಂದಾಯ ಉಪವಿಭಾಗ ಅಧಿಕಾರಿ ರಾಮಚಂದ್ರ ಗಡದೆ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿ.ಜಿ ಪಾಟೀಲ ಹಲಸಂಗಿ, ರವೀಂದ್ರ ಪೂಜಾರಿ, ಮರೆಪ್ಪ ಗಿರಣಿವಡ್ಡರ, ಬಾಳು ರಾಠೋಡ ಇದ್ದರು.
ಇಂಡಿ: 32 – ವಿಧಾನಸಭಾ ಕೆ ಆರ್ ಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಅಶೋಕ ಜಾಧವ ಬೆಂಬಲಿಗರ ಜೊತೆಗೆ ಆಗಮಿಸಿ ಗುರುವಾರ ಕಂದಾಯ ಉಪವಿಭಾಗ ಅಧಿಕಾರಿ ರಾಮಚಂದ್ರ ಗಡದೆ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಣಪತಿ ಲಾಲಸಿಂಗ್ ರಾಠೋಡ, ಸುರೇಂದ್ರ ಕುಸನಾಳೆ, ನಬಿರಸುಲ್ ಜಮಾದಾರ, ಭೀಮಾಶಂಕರ ಕಾಂಬಳೆ, ಮಲ್ಲಿಕಾರ್ಜುನ ಬಿರಾದಾರ, ಈರಣ್ಣ ತೇಲಿ, ಮುತ್ತುರಾಜ ಹೊನಗೊಂಡ, ತೀಕೊಟಾ ಲಕ್ಷ್ಮಣ ಚಡಚಣಕರ, ಸುನೀಲ ರಾಠೋಡ, ಉಮೇಶ ತಳವಾರ. ಸುರೇಶ ನಿಂಬೋಳಿ ಇದ್ದರು.