ಇಡೀ ಪಾಕಿಸ್ತಾನವನ್ನು ಸಂಪೂರ್ಣ ನಾಶಗೊಳಿಸಿ! ಯತ್ನಾಳ
ವಿಜಯಪುರ ನಗರದಲ್ಲಿಯೂ ಯಾರ ಬಂದರೂ ಏನು ಕಿತ್ತುಕೊಳ್ಳಲಾಗುವುದಿಲ್ಲ..!
ವಿಜಯಪುರ: ಇಡೀ ಪಾಕಿಸ್ತಾನವನ್ನು ಸಂಪೂರ್ಣ ನಾಶಗೊಳಿಸಿದರೆ ಮಾತ್ರ ಭಾರತಕ್ಕೆ ನೆಮ್ಮದಿಯಿದೆ. ಹೀಗಾಗಿ ಆ ದೇಶವನ್ನು ನಾಶಗೊಳಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಕರೆ ನೀಡಿದರು.
ನಗರದಲ್ಲಿ ಭಾನುವಾರ ಸಂಜೆ ವಡ್ಡರ ಸಮಾಜದ ವತಿಯಿಂದ ಹನುಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ 15 ಅಡಿ ಎತ್ತರದ ಶ್ರೀ ಆಂಜನೇಯನ ಮೂರ್ತಿಯ ಭವ್ಯ ಶೋಭಾಯಾತ್ರೆಗೆ ದೇಶದ ರಕ್ಷಣೆಗಾಗಿ ಹುತಾತ್ಮರಾದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ, ನಂತರ ಚಾಲನೆ ನೀಡಿ ಅವರು ಮಾತನಾಡಿದರು.
ಈ ದೇಶಕ್ಕೆ ಗಾಂಧಿ-ನೆಹರು ಅವಶ್ಯಕತೆಯಿಲ್ಲ. ಬೇಕಿರುವುದು ಡಾ.ಬಿ.ಆರ್.ಅಂಬೇಡ್ಕರ್, ನೇತಾಜಿ ಸುಭಾಷಚಂದ್ರ ಬೋಸ್, ಸರ್ದಾರ್ ವಲ್ಲಭ ಬಾಯಿ ಪಟೇಲ್, ಭಗತ್ ಸಿಂಗ್, ನರೇಂದ್ರ ಮೋದಿಯವರಂತಹ ದಿಟ್ಟ ನಾಯಕರು. 1942ರಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ರವರು, ಹಿಂದೂಸ್ತಾನ್-ಪಾಕಿಸ್ತಾನ್ ಒಡೆಯಬೇಕೆಂದರೆ ಭಾರತದಲ್ಲಿರುವ ಕೊನೆಯ ಮುಸ್ಲಿಂ ಪಾಕಿಸ್ತಾನಕ್ಕೆ ಹೋಗಬೇಕು. ಅಲ್ಲಿರುವ ಸಮಸ್ತ ಹಿಂದೂಗಳು, ದಲಿತರು ಭಾರತಕ್ಕೆ ಬರಬೇಕೆಂದು ಹೇಳಿದ್ದಾರೆ.
ಆದರೆ, ಇಂದು ದೇಶದ ಅನ್ನ ತಿಂದು, ನೀರು ಕುಡಿದು ಪಾಕಿಸ್ತಾನ್ ಪರ ಪೋಸ್ಟ್ ಗಳನ್ನು ಹಾಗೂ ಘೋಷಣೆ ಹಾಕುತ್ತಾರೆ. ಅಂತ ದೇಶದ್ರೋಹಿಗಳ ವಿರುದ್ಧ ಕೇಸ್ ದಾಖಲಿಸಿ, ಅವರ ಮೇಲೆ ನಿಗಾಯಿಡಿ. ಹಿಂದೂ ಮಹಾಪುರುಷರ, ದೇವರ ಜಾತ್ರೆ, ಉತ್ಸವಗಳನ್ನು ನಡೆದರೆ, ಯಾವುದೇ ಜಾತಿ ಮಾಡದೆ ಸಮಸ್ತ ಹಿಂದೂ ಬಾಂಧವರು ಒಂದಾಗಿ ಆಚರಿಸುವ ಮೂಲಕ ಒಗ್ಗಟ್ಟಾಗೋಣ. ನಾವು ಒಂದಾದರೇ ಯಾರು ಏನು ಮಾಡಲು ಆಗುವುದಿಲ್ಲ.
ವಿಜಯಪುರ ನಗರದಲ್ಲಿಯೂ ಯಾರ ಬಂದರೂ ಏನು ಕಿತ್ತುಕೊಳ್ಳಲಾಗುವುದಿಲ್ಲ. ಯಾರು ಕೇಸರಿ ಟೋಪಿ, ಕೇಸರಿ ಶಾಲು, ಕೇಸರಿ ಪೇಟಾ ದರಿಸುವುದಿಲ್ಲವೋ, ಅಂತವರಿಗೆ ಹಿಂದೂಗಳು ಒಂದು ವೋಟ್ ಸಹ ಹಾಕಬಾರದು ಎಂದು ಕಿವಿಮಾತು ಹೇಳಿದರು.
ಶ್ರೀ ಸಿದ್ದೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಬಿಜೆಪಿ ನಗರ ಮಂಡಲ ಮಾಜಿ ಅಧ್ಯಕ್ಷ ಶಂಕರ ಹೂಗಾರ, ಮಹಾನಗರ ಪಾಲಿಕೆ ಸದಸ್ಯರಾದ ವಿಠ್ಠಲ ಹೊಸಪೇಟ, ಎಂ.ಎಸ್.ಕರಡಿ, ಮಲ್ಲಿಕಾರ್ಜುನ ಗಡಗಿ, ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ರಾಹುಲ್ ಜಾಧವ, ಗಣೇಶ ಚವ್ಹಾಣ, ರಾಹುಲ್ ವಡ್ಡರ್, ಸಂತೋಷ ಗುಜ್ಜರಕರ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದರು.


















