ಹತ್ತು ವರ್ಷಗಳ ಅವಧಿಯಲ್ಲಿ ಭೀಮಾತೀರ ಅಭಿವೃದ್ಧಿಯಿಂದ ವಂಚಿತ : ರವಿಕಾಂತ ಪಾಟೀಲ
ಇಂಡಿ : ರಸ್ತೆ, ಶಿಕ್ಷಣ ಗುಣಮಟ್ಟದ ಸುಸಜ್ಜಿತ ಆಸ್ಪತ್ರೆ ಹಾಗೂ ಮೂಲಭೂತ ಸೌಕರ್ಯದಿಂದ ಇಂಡಿ ಮತಕ್ಷೇತ್ರದ ವಂಚಿತವಾಗಿದೆ ಎಂದು ಹ್ಯಾಟ್ರಿಕ್ ಹೀರೊ ಮಾಜಿ ಶಾಸಕ ರವಿಕಾಂತ್ ಪಾಟೀಲ ಕಿಡಿಕಾರಿದರು.
ತಾಲ್ಲೂಕಿನ ಅಗರಖೇಡ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತಾನಾಡಿದ ಅವರು, ಸುಮಾರು ಹತ್ತು ವರ್ಷಗಳ ಅವಧಿಯಲ್ಲಿ ಭೀಮಾತೀರ ಸಂಪೂರ್ಣವಾಗಿ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಡಿ ಪಾಟೀಲ ಮಾತಾನಾಡಿದ ಅವರು, ಭೀಮಾ ತೀರದ ಬಹುತೇಕ ಗ್ರಾಮಗಳಲ್ಲಿ ಪ್ರವಾಹದ ಕಾಲದಲ್ಲಿ ಹಲವಾರು ಸಮಸ್ಯೆಗಳು ಇದ್ದು,ನಾನು ಕಣ್ಣಾರೆ ಕಂಡಿದ್ದೇನೆ. ಅಂತಹ ಸಮಸ್ಯೆಗಳು ಪದೆ ಪದೆ ಉದ್ಬವಾಗದಂತೆ ಕಾಣಲು ಈ ಭಾರಿ ಜೆಡಿಎಸ್ ಪಕ್ಷಕ್ಕೆ ನಿಮ್ಮ ಮತ ನೀಡಬೇಕು. ಖಚಿತವಾಗಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿದರು.
ಇದೇ ಸಂದರ್ಬದಲ್ಲಿ ನೀಲಕಂಠ ಸಾವಳಗಿ, ನಾಗೇಶ ತಳಕೇರಿ, ಶ್ರೀಶೈಲಗೌಡ ಪಾಟೀಲ, ಅಯೂಬ್ ನಾಟೀಕರ, ಡಾ ರಮೇಶ ರಾಠೋಡ ಮಾತನಾಡಿದರು.
ವೇದಿಕೆ ಮೇಲೆ ಶಿವಾನಂದಗೌಡ ಪಾಟೀಲ, ಸದ್ದಾಂ ಅರಬ್, ಶಿವುಕುಮಾರ ಅಂದೇವಾಡಿ, ಸಿದ್ದು ಡಂಗಾ, ಕಾಶಿನಾಥ್ ಮಾನೆ, ರವಿ ಕ್ಷೇತ್ರಿ, ಕಾಮಾ ಕ್ಷೇತ್ರಿ, ನಂದಾ ಗುನ್ನಾಪೂರ, ಸುರೇಶ ಡಿ ಕೆ ,ಶಿವಾಜಿ ರಾಠೋಡ, ತುಕಾರಾಂ ತಾಂಬೆ, ಅಶೋಕ ಖಂಡೇಕರ, ಸುದರ್ಶನ್ ಕ್ಷೇತ್ರಿ, ನಿಯಾಝ್ ಅಗರಖೇಡ ರಾಜು ಮುಲ್ಲಾ ಮುಂತಾದ ನಾಯಕರು ಉಪಸ್ಥಿತರಿದ್ದರು.