ಇಂಡಿ: ಸಂಪಾಗಿ ಬೆಳೆದ ಹಸಿರ ಹಾಸಿನ ಮೇಲೆ ಒಟ್ಟಿಗೆ ಕುಳಿತು ಜೋಳದರೊಟ್ಟಿ, ಶೇಂಗಾ ಎಳ್ಳಿನ ಹೋಳಿಗೆ, ನವಣೆ ಅನ್ನ, ಶೇಂಗಾ ಪುಡಿ, ಹಪ್ಪಳ, ಸಂಡಿಗೆ, ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಭಜ್ಜಿ, ಕಾಳು, ಎಣ್ಣೆಗಾಯಿ, ಅನ್ನಾ -ಸಾರು, ಚಪಾತಿ, ವಿವಿಧ ಬಗೆಯ ಪಲ್ಯ ಸವಿದು, ಸಂಜೆಯ ವರೆಗೂ ಮಾತಿನ ಮಳೆಯಲ್ಲಿ ಸಂಭ್ರಮಿಸಿದರು.
ಎಳ್ಳ ಅಮಾವಾಸ್ಯೆ ಅಪ್ಪಟ್ಟ ಕೃಷಿಕರ ಹಬ್ಬ. ಜಾತಿ, ಮತ ಭೇದವಿಲ್ಲದೆ ಒಕ್ಕಲುತನ ಅವಲಂಬಿಸಿರುವ ಮುಸ್ಲಿಂ, ಇತರೆ ಕುಟುಂಬಗಳು ಹಬ್ಬದಂದು ಹೊಲಕ್ಕೆ ಹೋಗಿ ಚರಗ ಚೆಲ್ಲುವುದು ವಾಡಿಕೆ. ಪಟ್ಟಣದಲ್ಲಿ ಅಂತಹ ಸಂಭ್ರಮದ ವಾತವರಣ ಕಂಡುಬಂತು. ಇಂಡಿ ಪಟ್ಟಣದ ಪುರಸಭೆ ಸದಸ್ಯ ಸತೀಶ ಕುಂಬಾರ,ಅವರ ಹೊಲದಲ್ಲಿ ಎಳ್ಳು ಅಮವಾಸ್ಯೆ (ಚರಗ) ಚಲ್ಲುವ ನಿಮತ್ಯ, ಸ್ನೇಹಿತರ ಒಕ್ಕೂಟ ಸೇರಿ ಮಾತಿನ ಸವಿಯೊಂದಿಗೆ ಊಟದ ಸಿಹಿಯೊಂದಿಗೆ ಆಚರಣೆ ಮಾಡಿದರು.