ಇಂಡಿ : ಕುಡಿಯುವ ನೀರಿನ ದರ ಕಡಿತಗೊಳಿಸಿ, ಇಲ್ಲದಿದ್ದರೆ ಪುರಸಭೆ ಮುಂಬಾಗದಲ್ಲಿ 01/03/2022 ರಂದು ಧರಣಿ ಸತ್ಯಾಗ್ರಹ ಮಾಡುತ್ತೆವೆ ಎಂದು ಕರ್ನಾಟಕ ಪ್ರದೇಶ ಮಾದಿಗರ ಸಂಘ, ತಾಲೂಕು ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಹೊಸಮನಿ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಇಂಡಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಹಲವು ಬಾರಿ ಪುರಸಭೆಯ ಅಧಿಕಾರಿಗಳಿಗೆ ಕುಡಿಯುವ ನೀರಿನ ಕನಿಷ್ಠ ದರದ ಕುರಿತು ಮನವಿ ಮಾಡಿದ್ದವೆ. ಎರಡು ವರ್ಷ ಕೊವಿಡ್ ಕಾಟದಿಂದ ಜನರ ಜೀವನಕ್ಕೆ ದೊಡ್ಡ ಪ್ರಮಾಣದ ಹಾನಿ ಅನುಭವಿಸಿದ್ದಾಗಿದೆ. ಪಟ್ಟಣದ ಕೂಲಿ ಕಾರ್ಮಿಕರ, ಬಡವರ ಜೀವನ ನಡೆಸುವುದೇ ಕಷ್ಟದಾಯಕವಾಗಿದೆ. ಆದರೆ ನಗರದಲ್ಲಿ ಕುಡಿಯುವ ನೀರಿನ ದರ ಮಾತ್ರ ಗಗನ ಕುಸಮದಂತಾಗಿದೆ. ಈ ಸಮಸ್ಯೆ ಕುರಿತು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುವ ಗುಣಗಳು ಮಾತ್ರ ಕಂಡಿಲ್ಲ ಎಂದರು.
ಸರಕಾರದ ಆದೇಶದಂತೆ, ಸರಕಾರದ ಮಾರ್ಗ ಸೂಚಿ ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ FD 529 exp-9:2009 ದಿನಾಂಕ ೨೪/೦೯/೨೦೦೯ ರಲ್ಲಿ ನೀಡಿರುವ ಕನಿಷ್ಠ ಸಹಮತಿಯನ್ವಯ ನೀರಿನ ಕನಿಷ್ಟ ದರವನ್ನು ಆದೇಶದಲ್ಲಿ ಗೃಹ ಸಂಪರ್ಕಕ್ಕೆ 56 ರೂ ಗಳನ್ನು ನಿಗದಿ ಮಾಡಿ ಎಂದು ಸ್ವಷ್ಟವಾಗಿ ತಿಳಿಸಿದರೂ ಅದು ಪ್ರಯೋಜನೆಯಾಗಿಲ್ಲ. ಆ ಆದೇಶಕ್ಕೆ ಕವಡೆ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಕಿಡಿಕಾರಿದರು. ಆದರೆ ಇಂಡಿ ಪುರಸಭೆಯ ಇಲಾಖೆಯ ಅಧಿಕಾರಿಗಳು ಮಾತ್ರ 150 ರೂಪಾಯಿ ನಿಗದಿ ಮಾಡಿ ಹಣ ಪಡೆಯುತ್ತಿದ್ದಾರೆ. ಈ ಕುರಿತು ಹಲವು ಬಾರಿ ಪ್ರಗತಿಪರ ವಿವಿಧ ಸಂಘಟನೆಗಳು, ಪುರಸಭೆ ಸದಸ್ಯರು ಅನೇಕ ಬಾರಿ ಹೋರಾಟ ಮಾಡಿ ಅಧಿಕಾರಿಗಳ ಗಮನಕ್ಕೆ ತಂದರೂ ಪುರಸಭೆ ಇಲಾಖೆಯ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ. ಈ ಎಲ್ಲಾ ಬೆಳವಣಿಗೆ ಕಂಡ ಇಂಡಿ ಉಪವಿಭಾಗ ಅಧಿಕಾರಿ ರಾಹುಲ್ ಶಿಂಧೆ ಯವರು, ನಂ:ಸಿಎಎಎಲ್ ಸಿ ಆ 40:2021-2022 – ದಿನಾಂಕ 11/08/2021 ರಂದು ನೀರಿನ ದರ ಪರಿಷ್ಕರಿಸಿ 56 ರೂಪಾಯಿ ನಿಗದಿ ಮಾಡಿ ಆದೇಶ ಹೊಡಿಸಿ 6 ತಿಂಗಳು ಗತಿಸಿದ್ದರೂ ಕ್ರಮವೇನೂ ಕೈಗೊಂಡಿಲ್ಲ. ಈ ಕೂಡಲೇ ಸರಕಾರದ ಮಾರ್ಗ ಸೂಚಿಯಂತೆ ದರ ನಿಗದಿ ಪಡಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಸಿದ್ದರೆ ಪುರಸಭೆ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.