ಬೆಂಗಳೂರು: ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಪಾಂಡಿಚೇರಿ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ, ನಮ್ಮ ರಾಜ್ಯಕ್ಕೆ ಅನ್ಯಾಯ ವಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ಮಾಯಾ ಜಿಂಕೆಯಾಗಿದ್ದು, ರಾಜ್ಯಕ್ಕೆ ಅನ್ಯಾಯ ಮಾಡಿವೆ. ಕೇಂದ್ರದಲ್ಲಿ ಗೌರವ ಸಿಕ್ಕಿಲ್ಲ ಎಂದರು. ಹೌದು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಅವರು ಮಾತಾನಾಡಿ, 2022 ಜೆಡಿಎಸ್ ನ ಸಂಘಟನಾ ವರ್ಷ ಎಂದು ಹಲವಾರು ಬಾರಿ ಹೇಳಿದ್ದೆನೆ. ಈ ನಿಟ್ಟಿನಲ್ಲಿ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಜಲಧಾರೆ ಯಾತ್ರೆ ಕೈಗೊಳ್ಳಲಾಗುವುದು. ಜಲಧಾರೆಯ ಯಾತ್ರೆಯ ಮೂಲಕ ಕೇಂದ್ರದ ಕಿರುಕುಳ ಮತ್ತು ಅನ್ಯಾಯದ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು. ನಾನು ಮುಖ್ಯ ಮಂತ್ರಿಯಾಗಿದ್ದಾಗ ಮೋದಿಯವರನ್ನು ಬೇಟಿ ಮಾಡಿದ್ದೆ, ನಿತಿನ್ ಗಡ್ಕರಿಯನ್ನು ಬೇಟಿಯಾಗಿ ಮನವಿ ಮಾಡಿದ್ದೆನೆ. ಆಗ ಡಿಪಿಆರ್ ಸಲ್ಲಿಸುವಂತೆ ಗಡ್ಕರಿಯವರು ಕೇಳಿದ್ದರು. ನೀರಾವರಿ ವಿಚಾರವಾಗಿ ಹಲವು ಬಾರಿ ಬೇಟಿ ಮಾಡಿದ್ದರೂ ಎಂದು ಗೌರವ ನಮ್ಮ ರಾಜ್ಯಕ್ಕೆ ಸಿಕ್ಕಿಲ್ಲ ಎಂದರು.