ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ
ವಿಜಯಪುರ: ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025 ರ ನೋಂದಣಿ ಕಾರ್ಯ ಭರದಿಂದ ಸಾಗಿದ್ದು, ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ ಮಾಡಿಸಿದ್ದಾರೆ.
ಸರಕಾರಿ ಇಲಾಖೆಯ ಅಧಿಕಾರಿಗಳು, ಉಪನ್ಯಾಸಕರು, ವೈದ್ಯರು ಸೇರಿದಂತೆ ನಾನಾ ಕ್ಷೇತ್ರಗಳ ಕ್ರೀಡಾಸಕ್ತರು ತಮ್ಮ ಕುಟುಂಬ ಸಮೇತ ನೋಂದಣಿ ಮಾಡಿಸುವ ಮೂಲಕ ಈ ಬಾರಿಯ ಓಟಕ್ಕೆ ಮೆರಗು ತರುತ್ತಿದ್ದಾರೆ.
ಯಾದಗಿರಿ ಅಬಕಾರಿ ಇಲಾಖೆಯ ನಿರೀಕ್ಷಕ ಶ್ರೀಶೈಲ ಒಡೆಯರ 10 ಕಿ. ಮೀ., ಮತ್ತು ಅವರ ಪತ್ನಿ ಶ್ರೀದೇವಿ ಒಡೆಯರ, ಪುತ್ರ ಸಮರ್ಥ ಒಡೆಯರ ಹಾಗೂ ಸಿದ್ದು ಒಡೆಯರ ಎಲ್ಲರೂ 5 ಕಿ. ಮೀ. ಓಟದಲ್ಲಿ ಹೆಸರು ನೋಂದಾಯಿಸಿದ್ದಾರೆ. ವಿಜಯಪುರ ಅಬಕಾರಿ ಇಲಾಖೆಯ ಮುಖ್ಯ ಪೇದೆ ಅಪ್ಪು ಭೈರಗೊಂಡ ಅಪ್ಪು ಭೈರಗೊಂಡ 21 ಕಿ. ಮೀ., ಅವರ ಪತ್ನಿ ಇಂದುಮತಿ ಭೈರಗೊಂಡ 10 ಕಿ. ಮೀ. ಮತ್ತು ಅವರ ಮಕ್ಕಳಾದ ಅಪೇಕ್ಷಾ ಭೈರಗೊಂಡ ಹಾಗೂ ಅಮಿತ ಭೈರಗೊಂಡ 5 ಕಿ. ಮೀ. ಓಟದಲ್ಲಿ ಪಾಲ್ಗೋಳ್ಳಲು ಹೆಸರು ನೋಂದಾಯಿಸಿದ್ದಾರೆ. ಭೈರಗೊಂಡ ಕುಟುಂಬ ಕಳೆದ ಮೂರು ವರ್ಷಗಳಿಂದ ವೃಕ್ಷಥಾನ್ ಓಟದಲ್ಲಿ ಪಾಲ್ಗೋಳ್ಳುತ್ತಿದ್ದು, ಅಪ್ಪು ಭೈರಗೊಂಡ ಅವರು ಈಗಾಗಲೇ ಒಟ್ಟು ಎಂಟು ಹಾಪ್ ಮ್ಯಾರಥಾನ್, ಒಂದು 25 ಕಿ. ಮಿ. ಟ್ರೈಲ್ ರನ್, ನಾಲ್ಕು 10 ಕಿ. ಮಿ. ಮ್ಯಾರಾಥಾನ್ ಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೇ, ಮುಂಬೈನಲ್ಲಿ ನಡೆಯಲಿರುವ 42 ಕಿ. ಮಿೀ. ಫುಲ್ ಮ್ಯಾರಥಾನ್ ತಯಾರಿ ಮಾಡುತ್ತಿದ್ದಾರೆ.
ಇದೇ ವೇಳೆ ಆಡಿಟಿಂಗ್ ವಿಭಾಗದ ಅಧಿಕಾರಿ ಎ. ಪಿ. ಬಸನಾಳ, ಅವರ ಪತ್ನಿ ಭೀಮಾ ಬಸನಾಳ, ಮಕ ಆದಿತ್ಯ ಬಸನಾಳ ಹಾಗೂ ಆಯುಷ ಬಸನಾಳ, ಸರಕಾರಿ ಡಿಗ್ರಿ ಕಾಲೇಜಿನ ಪ್ರಾಧ್ಯಾಪಕ ಸಂಗಮೇಶ ಹಿರೇಮಠ, ಅವರ ಪತ್ನಿ ಜಿ. ಪಂ. ನಲ್ಲಿ ಅಧಿಕಾರಿಯಾಗಿರುವ ವಾಣಿ ಗದ್ದುಗೆ, ಪುತ್ರಿ ಸಾನ್ವಿ ಹಿರೇಮಠ, ಗುತ್ತಿಗೆದಾರ ಅಶೋಕ ಮನಳ್ಳಿ, ಅವರ ಪತ್ನಿ ಫಾರ್ಮಾಸಿಸ್ಟ್ ಅಧಿಕಾರಿ ಧನಶ್ರಿ ಮನಳ್ಳಿ, ಡಿಸಿಸಿ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಭೀಮನಗೌಡ ಪಾಟೀಲ, ಅವರ ಪತ್ನಿ ಭಾಗ್ಯಶ್ರಿ ಪಾಟೀಲ, ಎಕ್ಸಲೆಂಟ್ ಶಾಲೆಯ ನಿರ್ದೇಶಕ ರಾಜಶೇಖರ ಕೌಲಗಿ, ಅವರ ಪತ್ನಿ ಜ್ಯೋತಿ ಕೌಲಗಿ, ವೈದ್ಯ ಡಾ. ವೀರೇಶ ಕಸಬೇಗೌಡ, ಅವರ ಪತ್ನಿ ಸಂಗೀತಾ ಕಸಬೆಗೌಡ, ಗ್ರಾ. ಪಂ. ಪಿಡಿಓ ನಿಂಗಪ್ಪ ಬಿಸ್ತೋನ ಪತ್ನಿ ಪ್ರಿಯಾ ಬಿಸ್ತೋನ ಅವರು 5 ಕಿ. ಮೀ. ವಿಭಾಗದಲ್ಲಿ ಹೆಸರು ನೋಂದಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕುಟುಂಬ ಸದಸ್ಯರು, ಬಸವನಾಡಿನಲ್ಲಿ ನಡೆಯುವ ವೃಕ್ಷಥಾನ್ ದೇಶಾದ್ಯಂತ ಹೆಸರು ಮಾಡಿದೆ. ಇಲ್ಲಿನ ಸುಂದರ ಪರಿಸರದಲ್ಲಿ ಪ್ರಾಚೀನ ಸ್ಮಾರಕಗಳ ಎದುರು ಕುಟುಂಬ ಸಮೇತ ಓಡುವುದು ಜೀವನದ ಅಮೂಲ್ಯ ಕ್ಷಣಗಳಲ್ಲಿ ನೆನಪಿನಲ್ಲಿ ಉಳಿಯಲಿದೆ. ಈ ಬಾರಿಯ ಓಟಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು.
ಈ ಬಾರಿ ಬಹಳಷ್ಟು ಜನರು ಕುಟುಂಬ ಸಮೇತ ಹೆಸರು ನೋಂದಾಯಿಸುವ ಮೂಲಕ ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಮತ್ತು ಪ್ರವಾಸೋದ್ಯಮ ಉತ್ತೇಜನ ಹಾಗೂ ಸದೃಢ ಆರೋಗ್ಯಕ್ಕಾಗಿ ತಮಗಿರುವ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಇನ್ನೂ ಸಾಕಷ್ಟು ಜನರು ಕುಟುಂಬ ಸಮೇತ ಹೆಸರು ನೋಂದಾಯಿಸಲು ಆಸಕ್ತಿ ವಹಿಸಿದ್ದಾರೆ ನೋಂದಣಿ ಸಮಿತಿ ಪದಾಧಿಕಾರಿಗಳಾದ ಡಾ. ರಾಜು ಯಲಗೊಂಡ ಮತ್ತು ವಿನಾಯಕ ಕಂಚ್ಯಾಣಿ ಮಾತನಾಡಿ ಎಂದು ತಿಳಿಸಿದ್ದಾರೆ.
*ಧನ್ಯವಾದಗಳು*.
Vrukshathon Heritage Run Family Registration
ವಿಜಯಪುರ ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್- 2025 ನಲ್ಲಿ ಪಾಲ್ಗೋಳ್ಳಲು ಒಂಬತ್ತು ಜನರು ತಮ್ಮ ಕುಟುಂಬ ಸದಸ್ಯರ ಸಮೇತ ನೋಂದಣಿ ಮಾಡಿಸಿದರು. ಈ ಸಂದರ್ಭದಲ್ಲಿ ನೋಂದಣಿ ವಿಭಾಗದ ಡಾ. ರಾಜು ಯಲಗೊಂಡ, ವಿನಾಯಕ ಕಂಚ್ಯಾಣಿ ಮತ್ತು ಹೆಸರು ನೋಂದಾಯಿಸಿದ ಕುಟುಂಬಗಳ ಸದಸ್ಯರು ಉಪಸ್ಥಿತರಿದ್ದರು.



















