ಇಂಡಿ : ಮಹಾರಾಷ್ಟ್ರ ಗಡಿ ಭಾಗದಲ್ಲಿ ಕೋವಿಡ್-19 ವೈರಸ್ ಭೀತಿ ಹಿನ್ನಲೆ ನಿಂಬೆ ನಾಡಿನಲ್ಲಿ ವೈರಸ್ ಹರಡದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ತಾಲೂಕು ಮತ್ತು ಜಿಲ್ಲಾಡಳಿತ ಮುಂದಾಗಿದೆ. ಇನ್ನು ಕೋವಿಡ್ ಮುನ್ನಚರಿಕೆ ಕ್ರಮವಾಗಿ ಜಿಲ್ಲೆಯ ಇಂಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕಂದಾಯ ಉಪವಿಭಾಗ ಅಧಿಕಾರಿ ಎನ್.ಎಮ್ ಚೋರಗಸ್ತಿ ಹಾಗೂ ತಹಶಿಲ್ದಾರ ಬಸವರಾಜ್ ಐ.ಈ. ಬೇಟಿ ನೀಡಿ ವೀಕ್ಷಣೆ ಮಾಡಿದರು.
ಇತ್ತಿಚಿಗೆ ನಿರ್ಮಾಣವಾದ ಆಕ್ಸಿಜನ್ ಘಟಕ, ಪರಿಶೀಲಿಸಿ ಪ್ರಾರಂಭಿಸಲು ಇರುವ ಸಮಸ್ಯೆಗಳ ಕುರಿತು ಮುಖ್ಯ ವೈಧ್ಯಧಿಕಾರಿ ಜೊತೆ ಚರ್ಚೆ ಮಾಡಿದರು. ತದನಂತರ ಆಸ್ಪತ್ರೆಯ ಸ್ವಚ್ಚತೆ, ಕುಡಿಯುವ ನೀರು, ಸಿಬ್ಬಂದಿ ನಿರ್ಲಕ್ಷ್ಯ ಹಾಜರಾತಿ ಬಗ್ಗೆ ಆಡಳಿತ ಮಂಡಳಿಗೆ ಎಚ್ಚರಿಕೆಯ ಸಂದೇಶ ನೀಡಿದರು. ಕೂಡಲೇ ಕಂದಾಯ ಉಪವಿಭಾಗ ಅಧಿಕಾರಿ ನೇತೃತ್ವದಲ್ಲಿ ಸ್ಟಾಪ್ ಮೀಟಿಂಗ್ ಆಯೋಜನೆ ಮಾಡಲು ತಿಳಿಸಿದರು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದು ಕಂಡು ಬಂದ್ರೆ ಮುಲಾಜು ಇಲ್ಲದೇ ಕಾನೂನು ಕ್ರಮ ಜರಗಿಸಲಾಗುತ್ತದೆ ಎಂದು ಉಪವಿಭಾಗದ ಅಧಿಕಾರಿ ಎನ್ ಎಮ್ ಚೋರಗಸ್ತಿ ಹೇಳಿದರು. ಈ ಸಂದರ್ಭದಲ್ಲಿ ಮುಖ್ಯ ವೈಧ್ಯಧಿಕಾರಿ ಆರ್ ಟಿ ಕೋಳೆಕರ,ಕಂದಾಯ ನಿರೀಕ್ಷಕ ಬಸವರಾಜ ರಾವೂರ ಮತ್ತು ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.