ಸಿಂಧನೂರು: ನಗರದ ತಹಶೀಲ್ದಾರ ಕಚೇರಿ ಮುಂದೆ ಶ್ರೀ ಗುರು ಪುಟ್ಟರಾಜ ವೃತ್ತಿರಂಗ ಭೂಮಿ ಕಲಾವಿದರ ಸಂಘದ ವತಿಯಿಂದ ವೀಕೆಂಡ್, ನೈಟ್ ಕರ್ಫ್ಯೂ ವಿರೋಧಿಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಸಂಘದ ಅಧ್ಯಕ್ಷರಾದ ಅಲ್ಲಾ ಭಕ್ಷೀ ದರವೇಶ ಮಾತನಾಡಿ ಸರಕಾರವು ಕೋವಿಡ್ ಹಿನ್ನೆಲೆ ಎರಡು ಲಾಕ್ ಡೌನ್ ಜನಸಾಮಾನ್ಯರ ಮೇಲೆ ಹೇರಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಅಧಿಕಾರಿಗಳು ಸರಕಾರ ಹಾಗೂ ಜಿಲ್ಲಾಧಿಕಾರಿಗಳ ಆದೇಶ ಎಂದು ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ. ಈ ಅಧಿಕಾರಿಗಳಿಗೆ ತಿಂಗಳು ತಿಂಗಳು ಸಂಬಳ ಎಣಿಸುವುದರಿಂದ ಬಡ ಕಲಾವಿದರ ಸೇರಿದಂತೆ ರೈತಾಪಿ ಜನರ ಸಂಕಷ್ಟ ಹೇಗೆ ಅರ್ಥವಾಗುತ್ತದೆ. ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ಮಾಡುವುದರಿಂದ ಕಲಾವಿದರಿಗೆ ತೀವ್ರ ತೊಂದರೆ ಆಗುತ್ತದೆ. ಸರಕಾರವು ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ರದ್ದು ಮಾಡಿ ನಮಗೆ ದುಡಿದು ತಿನ್ನಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.