ಗಡಿಭಾಗಕ್ಕೆ ರಾಷ್ಟ್ರೀಯ ಹೆದ್ದಾರಿ ಭಾಗ್ಯ ದೊರೆತಿದ್ದು ಸಂಸದ ರಮೇಶ್ ಜಿಗಜಿಣಗಿ ಅವಿರತ ಪರಿಶ್ರಮ..
ಇಂಡಿ : ೨೦೨೩ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲೊದು ಪಕ್ಕಾ. ಕೇಂದ್ರ ಮತ್ತು ರಾಜ್ಯ ಸರಕಾರದ ಕಾರ್ಯಕ್ರಮಗಳ ಸಾಧನೆ ಮೆಚ್ಚಿ ಜನರು ಸಮಾರೋಪಾದಿಯಲ್ಲಿ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಜೊತೆಗೆ ಇಂಡಿ ಮತಕ್ಷೇತ್ರದಲ್ಲಿ ಯಾರಿಗೆ ಟಕೆಟ್ ಕೊಟ್ರೂ ಕೂಡಾ ಎಲ್ಲಾ ಮುಖಂಡರು ಒಗ್ಗಟಿನಿಂದ ಪ್ರಯತ್ನ ಮಾಡಿ ಗೆಲ್ಲೊದು ಶತಃ ಸಿದ್ದ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತಾನಾಡಿದ ಅವರು, ರಾಜ್ಯ ಸರಕಾರದ ಬಜೆಟ್ ಬಹಳ ಮಹತ್ವ ಪೂರ್ಣದಿಂದ ಕೂಡಿದೆ. ಶೈಕ್ಷಣಿಕ, ಆರೋಗ್ಯ, ಕೃಷಿ, ತೋಟಗಾರಿಕೆ, ಸಾರಿಗೆ, ಸಮಾಜ ಕಲ್ಯಾಣ ಹಾಗೂ ಜಲಸಂಪನ್ಮೂಲ ಜೊತೆಗೆ ಪ್ರತಿಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಕಾಳಜಿವಹಿಸಿ ಬೊಮ್ಮಾಯಿ ಸರಕಾರ ಬಜೆಟ್ ಮಂಡನೆ ಮಾಡಿದೆ. ಅದು ಜನರು ಕೂಡಾ ಒಪ್ಪಿಕೊಂಡು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಿದರು.
ಇನ್ನೂ ಎಲ್ಲಾ ಜಾತಿ ವರ್ಗಕ್ಕೂ ಹೆಚ್ಚಿನ ಮಹತ್ವಕೊಟ್ಟು ನಾರಾಯಣ ಗುರು ಅಭಿವೃದ್ಧಿ ನಿಮಗ, ಹಡಪದ ಅಭಿವೃದ್ಧಿ ನಿಗಮ, ಗಾಣಿಗ ಅಭಿವೃದ್ಧಿ ನಿಗಮ ಹಾಗೂ ಮಾಲಿ, ಮಾಳಿ, ಮಾಲಗಾರ, ಹೂಗಾರ ಅಭಿವೃದ್ಧಿ ನಿಗಮ ಮಂಡಳಿ ಮಾಡುವ ಮೂಲಕ ಬೊಮ್ಮಾಯಿ ಸರಕಾರ ವಿಶೇಷ ಕೊಡಗೆ ನೀಡಿದ್ದಾರೆ ಎಂದು ಹೇಳಿದರು. ಅದಲ್ಲದೇ ಮಹಾಗಡಿ ಭಾಗದಲ್ಲಿರುವ ಇಂಡಿ ತಾಲೂಕಿಗೆ ರಾಷ್ಟ್ರೀಯ ಹೆದ್ದಾರಿ ಭಾಗ್ಯ ದೊರೆತಿದ್ದು ಸಂಸದ ರಮೇಶ್ ಜಿಗಜಿಣಿಗಿ ಅವಿರತ ಪರಿಶ್ರಮ ಕಾರಣವಾಗಿದೆ ಎಂದು ಹೇಳಿದರು.