ಹಂಡೇವಜೀರ ಸಮಾಜದ ನೂತನ ಪದಾಧಿಕಾರಿಗಳಿಗೆ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಸನ್ಮಾನ
ಮುದ್ದೇಬಿಹಾಳ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕದ ವತಿಯಿಂದ, ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೇವಜೀರ ಸಮಾಜದ ನೂತನ ತಾಲೂಕಾ ಪದಾಧಿಕಾರಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಇತ್ತೀಚೆಗೆ ಹಂಡೇವಜೀರ ಸಮಾಜದ ತಾಲೂಕಾ ಅಧ್ಯಕ್ಷರಾಗಿ ಆಯ್ಕೆಯಾದ ಶಂಕರಗೌಡ ಎಸ್. ಶಿವಣಗಿ, ಕಾರ್ಯಧ್ಯಕ್ಷರು ಬೀಮನಗೌಡ ಕೂಡಗಾನೂರ, ಉಪಾಧ್ಯಕ್ಷ
ಮಲ್ಲಣಗೌಡ ಬಿರಾದಾರ,
ಪ್ರಧಾನ ಕಾರ್ಯದರ್ಶಿ ಆರ್. ಎಸ್. ಬಿರಾದಾರ, ಅವರಿಗೆ ವಿವಿಧ ದಲಿತ ಪರ ಒಕ್ಕೂಟದ ವತಿಯಿಂದ ಶಾಲು ಹೊದಿಸಿ, ಮಾಲೆ ಹಾಕಿ ಗೌರವ ಸಮರ್ಪಿಸಲಾಯಿತು.
ಈ ವೇಳೆ ಮಾತನಾಡಿದ ಡಿಎಸ್ಎಸ್ ಮುಖಂಡ ಹಾಗೂ ಸಮಾಜ ಸೇವಕ ಬಸವರಾಜ ಸಿದ್ದಾಪೂರ ಅವರು ಮಾತನಾಡಿದ
ಸಮಾಜದಲ್ಲಿ ಎಲ್ಲಾ ಸಮುದಾಯಗಳು ಒಟ್ಟಾಗಿ ಸಾಗಿದಾಗ ಮಾತ್ರ ತಾಲೂಕಿನ ಅಭಿವೃದ್ಧಿ ಸಾಧ್ಯ. ಹಂಡೇವಜೀರ ಸಮಾಜದ ನೂತನ ಪದಾಧಿಕಾರಿಗಳು ತಮ್ಮ ಸಮಾಜದ ಸಂಘಟನೆಯ ಜೊತೆಗೆ ಸರ್ವ ಸಮಾಜಗಳ ಏಳಿಗೆಗೆ ಶ್ರಮಿಸಲಿ. ದಲಿತ ಪರ ಸಂಘಟನೆಗಳು ಯಾವಾಗಲೂ ಇಂತಹ ಸಮಾಜಮುಖಿ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಲ್ಲಲಿವೆ,” ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಮಹಾಂತೇಶ ತಮದಡ್ಡಿ, ಶೇಖು ಬಳವಾಟ, ಪರಶುರಾಮ ತಳವಾರ, ಮಾಜಿ ಗ್ರಾ.ಪಂ ಸದಸ್ಯ ರಾಮಣ್ಣ ಮಾದರ, ರಮೇಶ ದೂಡಮನಿ, ಮಲ್ಲು ಗುಡಿಹಾಳ, ರಾಮನಗೌಡ ಕಂದಗನೂರ, ಅಡೆವೇಪ್ಪ ದೂಡಮನಿ, ಯಂಕಪ್ಪ ವಾಲ್ಮೀಕಿ, ನಾಗೇಶ ಹಡಲಗೇರಿ, ದ್ಯಾಮಣ್ಣ ವಾಲಿಕಾರ, ಮಲೀಕ ಬೇಪಾರಿ, ನಾಗೇಶ ದೂಡಮನಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


















