ವಿಜಯಪುರ ಜಿಲ್ಲೆಗೆ ನೂತನ ಖಡಕ್ ಎಸ್ಪಿ..! ಯಾರು ಗೊತ್ತಾ..?
ವಿಜಯಪುರ : ಜಿಲ್ಲೆಯ ನೂತನ ಎಸ್ಪಿಯಾಗಿ ಲಕ್ಷ್ಮಣ ನಿಂಬರಗಿಯವರನ್ನು ಸರ್ಕಾರ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ. ಇಂದು ಸರ್ಕಾರ ಹೊರಡಿಸಿರುವ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದೇಶದಲ್ಲಿ ಲಕ್ಷ್ಮಣ ನಿಂಬರಗಿ ಇವರು ನೂತನ ಎಸ್ಪಿಯಾಗಿ ವರ್ಗಾವಣೆ ಗೊಂಡಿದ್ದಾರೆ. 2014 ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಲಕ್ಷ್ಮಣ ನಿಂಬರಗಿ, ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದವರು. ಉಡುಪಿ, ಬೆಳಗಾವಿ ಬಳ್ಳಾರಿ ಹಾಗೂ ಸಿಸಿಬಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ವಿಜಯಪುರ ಜಿಲ್ಲೆಗೆ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ. ಈ ಮೊದಲಿನ ಎಸ್ಪಿ ಹೃಷಿಕೇಶ್ ಸೋನವಾಣೆ ವರ್ಗಾವಣೆ ಬಳಿಕ ಪ್ರಸನ್ನ ದೇಸಾಯಿ ಪ್ರಭಾರ ಎಸ್ಪಿಯಾಗಿದ್ದರು.


















