ನಾಗರಬೆಟ್ಟದ ಸಮಗ್ರ ಅಭಿವೃದ್ಧಿಗೆ ಬದ್ಧ: ನೂತನ ಎನ್.ಆರ್.ಎಲ್.ಎಂ ನೂತನ ಕಟ್ಟಡ ಉದ್ಘಾಟನೆ: ಶಾಸಕ ಸಿ.ಎಸ್. ನಾಡಗೌಡ
ನಾಗರಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ನೂತನ ಕಟ್ಟಡ ಲೋಕಾರ್ಪಣೆ: ಶಾಸಕ ನಾಡಗೌಡ ಅವರಿಗೆ ಅದ್ಧೂರಿ ಸನ್ಮಾನ.
ಮುದ್ದೇಬಿಹಾಳ: ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನೂತನ ಕಟ್ಟಡಗಳು ಸಹಕಾರಿಯಾಗಲಿವೆ ಎಂದು ಮುದ್ದೇಬಿಹಾಳ ಕ್ಷೇತ್ರದ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಅವರು ಹೇಳಿದರು.
ತಾಲ್ಲೂಕಿನ ನಾಗರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (MGNREGA) ನಿರ್ಮಾಣಗೊಂಡ ನೂತನ ಎನ್.ಆರ್.ಎಲ್.ಎಂ (NRLM) ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಗ್ರಾಮದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಶಾಸಕರು, ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ನಾಗರಬೆಟ್ಟ ಗ್ರಾಮ ಪಂಚಾಯಿತಿ ವತಿಯಿಂದ ಹಾಗೂ ಗ್ರಾಮಸ್ಥರ ಪರವಾಗಿ ಶಾಸಕ ಸಿ.ಎಸ್. ನಾಡಗೌಡ ಅವರಿಗೆ ಫಲಪುಷ್ಪ ನೀಡಿ, ಸ್ಮರಣಿಕೆ ನೀಡುವುದರ ಮೂಲಕ ಅತ್ಯಂತ ಗೌರವಪೂರ್ವಕವಾಗಿ ಘನ ಸನ್ಮಾನ ಮಾಡಲಾಯಿತು.
ಪ್ರಶಂಸೆ: ಕೇವಲ ೧೭ ಲಕ್ಷದಲ್ಲಿ ಯಾವದೇ ನಿರೀಕ್ಷೆ ಮಾಡದೇ ಗುಣಮಟ್ಟದಲ್ಲಿ ಬ್ರಹತ್ ಕಟ್ಟಡ ನಿರ್ಮಿಸಿದ ಗುತ್ತಿಗೆದಾರರಾದ ಅಮರಯ್ಯ ಶಿವಯೋಗಿಮಠ ಅವರನ್ನು ಶಾಸಕ ನಾಡಗೌಡ ಹಾಗೂ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಪಂ ಇಓ ವೆಂಕಟೇಶ್ ವಂದಾಲ,ಪಂಚ ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಲೆಕ್ಕಾಧಿಕಾರಿ ವೀರೇಶ ಹೂಗಾರ,ಬಿಜ್ಜೂರ ಪಿಡಿಓ ಕೆ ಎಚ್ ಕುಂಬಾರ,ಗ್ರಾ.ಪಂ ಅಧ್ಯಕ್ಷರಾದ ಸಿದ್ದರಾಮಪ್ಪ ಪ್ಯಾಟಿ,ಉಪಾಧ್ಯಕ್ಷ ಪ್ರೇಮಾ ಚಲವಾದಿ.ನ್ಯಾಯವಾಧಿಗಳಾದ ಆರ್.ಬಿ.ಪಾಟೀಲ, ಶಿಕ್ಷಣ ಸಂಸ್ಥೆಯ ಎಂ.ಎಸ್.ಪಾಟೀಲ,ಎಸ್ ಡಿಕೆ ಸಂಸ್ಥೆ ಅಧ್ಯಕ್ಷ ಬಿ.ಜಿ.ಮಠ, ರುದ್ರಗೌಡ ಪಾಟೀಲ,
ಪಿಡಿಓ ರಾಜು ನಾರಾಯಣಿ, ಕಾರ್ಯದರ್ಶಿ ಅಯ್ಯಪ್ಪ ಮಲಗಲದಿನ್ನಿ, ಕಾಂತು ಮಣೂರ, ಅಮರಯ್ಯ ಶಿವಯೋಗಿಮಠ,ನೀಲಪ್ಪ ಮದರಿ,ಕಲ್ಲಣ್ಣ ಪ್ಯಾಟಿ, ಕೃಷಿ ಅಧಿಕಾರಿ ಸುರೇಶ ಬಾವಿಕಟ್ಟಿ, ಪಿಎಸ್‌ಐ ಸಂಜಯ ತಿಪ್ಪಾರಡ್ಡಿ, ತಾ.ಪಂ ಸಹಾಯಕ ಡಿ.ಎಸ್.ಗುರಿಕಾರ, ಕೆಂಜುಂಡ್ಡಪ್ಪಾ ಮುರಾಳ,ಕಾಶಪ್ಪ ಮಾದರ, ಹಣಮಗೌಡ ಪಾಟೀಲ, ಯಲ್ಲಪ್ಪ ಚಲವಾದಿ,ವಿರೇಶ ಪ್ಯಾಟಿ,ಎನ್ ಎಚ್ ವಾಲಿಕಾರ,ಶಿಕ್ಷಕರ ಗಾಯಕ ಹಿರೂ ನಾಯಕ ನಿರೂಪಿಸಿದರು, ಯಲ್ಲಪ್ಪ ಚಲವಾದಿ ವಂದಿಸಿದರು,ಸೇರಿದಂತೆ ಗ್ರಾಪಂ ಸಿಬ್ಬಂದಿಗಳು, ಗ್ರಾಮದ ಹಿರಿಯರು ಮತ್ತು ನೂರಾರು ಸಾರ್ವಜನಿಕರು ಸೇರಿದಂತೆ ಉಪಸ್ಥಿತರಿದ್ದರು