ನೇತಾಜಿ ಪ್ರೀಮಿಯರ್ ಲೀಗ್- ಸೀಸನ್ 4-ಮಲೈ ಮಹದೇಶ್ವರ ಬೆಟ್ಟದ ಎಂ ಸಿ ಸಿ ಕ್ರಿಕೆಟರ್ಸ್ ತಂಡ ಚಾಂಪಿಯನ್
ಹನೂರು: ನೇತಾಜಿ ಕ್ರಿಕೆಟರ್ಸ್ ಹಾಗೂ ಎಂ ಆರ್ ಮಂಜುನಾಥ್ ರವರ ಸಹಯೋಗದೊಂದಿಗೆ ನೇತಾಜಿ ಪ್ರೀಮಿಯರ್ ಲೀಗ್ ಸೀಸನ್ 4 ಅನ್ನು ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.
ಸ್ವಾತಂತ್ರ್ಯ ಹೋರಾಟಗಾರ, ಅಪ್ರತಿಮ ವೀರಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 127ನೇ ಜನ್ಮದಿನ ಸ್ಮರಣಾರ್ಥ ನೇತಾಜಿ ಕ್ರಿಕೆಟರ್ಸ್ ತಂಡದ ವತಿಯಿಂದ ಆಯೋಜಿಸಲಾಗಿದ್ದ ನೇತಾಜಿ ಕ್ರಿಕೆಟ್ ಪ್ರೀಮಿಯರ್ ಲೀಗ್ ನ ನಾಲ್ಕನೆಯ ಆವೃತ್ತಿಯಲ್ಲಿ ಮಲೈ ಮಹದೇಶ್ವರ ಬೆಟ್ಟದ ಎಂ ಸಿ ಸಿ ಕ್ರಿಕೆಟರ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಮಹದೇಶ್ವರ ಬೆಟ್ಟದ ರಾಮಚಂದ್ರು ಹಾಗೂ ನಾಗೇಂದ್ರರವರ ಮಾಲೀಕತ್ವದ ಎಂ ಸಿ ಸಿ ಕ್ರಿಕೆಟರ್ಸ್ ತಂಡವು ಮೊದಲ ಬಹುಮಾನ 60000ರೂ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ಪಡೆದು ಸಂಭ್ರಮಿಸಿತು. ಹನೂರಿನ ಮೇಘರಾಜ್ ಮಾಲೀಕತ್ವದ ಪವರ್ ವಾರಿಯರ್ಸ್ ತಂಡ 40000ರೂ ನಗದು ಮತ್ತು ಟ್ರೋಫಿಯೊಂದಿಗೆ ಮೊದಲ ರನ್ನರ್ಸ್ ಅಪ್ ತಂಡವಾಗಿ ಹೊರಹೊಮ್ಮಿದರೆ,ಬಂಡಳ್ಳಿಯ ಮಣಿ ಮಾಲೀಕತ್ವದ ಎ ವಿ ಎಂ ಟೈಟಾನ್ಸ್ ತಂಡವು 2ನೇ ರನ್ನರ್ಸ್ ಅಪ್ ಆಗಿ ಟ್ರೋಫಿಯನ್ನು ಪಡೆದುಕೊಂಡಿತು. ಸರಣಿಪೂರ್ತಿ ಉತ್ತಮ ಪ್ರದರ್ಶನ ನೀಡಿ ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಎ ವಿ ಎಂ ಟೈಟಾನ್ಸ್ ತಂಡದ ಜಾವಿದ್ ಪಡೆದರು, ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿ ಎ ವಿ ಎಂ ಟೈಟಾನ್ಸ್ ತಂಡದ ಫರಾಜ್ ಪಡೆದರೆ, ಬೆಸ್ಟ್ ಬೌಲರ್ ಪ್ರಶಸ್ತಿ ಎಂ ಸಿ ಸಿ ಕ್ರಿಕೆಟರ್ಸ್ ತಂಡದ ಮೋಸಿನ್ ಖಾನ್,ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಎಂ ಸಿ ಸಿ ಕ್ರಿಕೆಟರ್ಸ್ ತಂಡದ ಮಹೇಂದ್ರ ಪಡೆದರು. ಫೈನಲ್ ಪಂದ್ಯದಲ್ಲಿ ಉತ್ತಮವಾಗಿ ಆಡಿದ ಸಮೀರ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಆನಂದ್ ಕುಮಾರ್, ಜೆ ಡಿ ಎಸ್ ಮುಖಂಡರಾದ ಮಂಜೇಶ್, ನೇತಾಜಿ ಕ್ರಿಕೆಟರ್ಸ್ ತಂಡದ ಹಿರಿಯ ಆಟಗಾರರಾದ ಮಹೇಶ್, ಸುರೇಶ್, ಚೆಸ್ಕಾಂ ಕಂಟ್ರಾಕ್ಟರ್ ರವಿ ಹಾಗೂತಂಡಗಳ ಮಾಲೀಕರಾದ ಮಹೇಶ್, ಸನತ್, ಮಹದೇವ್, ರಾಮಚಂದ್ರು, ನಾಗೇಂದ್ರ, ಮೇಘರಾಜ್, ಮಣಿ, ಮಹೇಶ್,ರುದ್ರನಾಯಕ್, ಮುತ್ತುರಾಜ್ ಹಾಗೂ ಕ್ರೀಡಾಭಿಮಾನಿಗಳು ಮತ್ತು ಟೂರ್ನಿ ಆಯೋಜಕರಾದ ಶಶಿ, ಚೇತನ್, ಸಂತೋಷ್, ಗಂಗಾಧರ್ ಭಾಗವಹಿಸಿದ್ದರು.
ವರದಿ: ಚೇತನ್ ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ.