ನೇಹಾ ಕೊಲೆಗೆ ಇಂಡಿಯಲ್ಲಿ ಅಕ್ರೋಶ, ಪ್ರತಿಭಟನೆ
ಇಂಡಿ : ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ಅತ್ಯಂತ ಖಂಡನೀಯವಾಗಿದ್ದು, ಇಂತಹ ಪ್ರಕರಣದಲ್ಲಿ ಆರೋಪಿಗೆ ಎನ್ ಕೌಂಟರ್ ಕಾನೂನು ಜಾರಿಯಾಗಬೇಕು ಪುರಸಭೆ ಮಾಜಿ ಅಧ್ಯಕ್ಷ ಯಮುನಾಜಿ ಸಾಳಂಕೆ ಮಾತನಾಡಿದರು.
ಶನಿವಾರ ಪಟ್ಟಣದಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಇಂಡಿ ತಾಲೂಕಾ ಚಿಂತನಾ ಕ್ರೀಯಾಶೀಲ ಮಠಾಧೀಶರ ಸಮಿತಿ, ಇಂಡಿ ತಾಲೂಕಾ ಜಂಗಮ ಕ್ಷೇಮಾಭಿವೃದ್ದಿ ಸಂಘ, ಇಂಡಿ ತಾಲೂಕಾ ಸರ್ವಧರ್ಮ ಸಮನ್ವಯ ಒಕ್ಕೂಟ ಸಹಯೋಗದಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಹೇಳಿದರು.
ನೇಹಾ ಹತ್ಯೆ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಆರೋಪಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು ಆತ್ ಕ್ಷಮಿಸಲಾರದಂತ ಹೀನ ಕೃತ್ಯ ಮಾಡಿದ್ದು, ಆತನಿಗೆ ಕಠಿಣ ಶಿಕ್ಷೆಯಾಗಬೇಕ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಕೊಲೆ ಆರೋಪಿ ಫಯಾಜ ವಿರುದ್ಧ
ಘೋಷಣೆ ಕುಗಿದ ಪ್ರತಿಭಟನಾಕಾರರು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು.
ಪ್ರತಿಭಟನೆ ಪಟ್ಟಣದ ಅಂಬೇಡ್ಕರ ವೃತ್ತದಿಂದ
ಬಸವವೃತ್ತದ ಮೂಲಕ ಮಿನಿ ವಿಧಾನಸೌಧ ತಲುಪಿ
ಅಲ್ಲಿ ಬೃಹತ್ ಸಭೆಯಾಗಿ ಮಾರ್ಪಟ್ಟಿತು. ಅಲ್ಲಿ ಮಾತನಾಡಿದ ಹತ್ತಳ್ಳಿ ಗುರುಪಾದೇಶ್ವರ ಶ್ರೀಗಳು ಮತ್ತು ತಡವಲಗಾದ ರಾಚೋಟೇಶ್ವರ ಶ್ರೀಗಳು ಆರೋಪಿ
ಫಯಾಜಗೆ ಗಲ್ಲು ಶಿಕ್ಷೆ ಆಗಬೇಕು. ಕಾನೂನು
ಮೂಲಕ ಕಠಿಣ ಕ್ರಮ ಕೈಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು. ಜೆಡಿ ಎಸ್ ಮುಖಂಡ
ಬಿ.ಡಿ.ಪಾಟೀಲ, ನ್ಯಾಯವಾದಿ ಮತ್ತು ಜಂಗಮ
ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎಸ್.ಎಲ್. ನಿಂಬರಗಿಮಠ, ಶ್ರೀಶೈಲಗೌಡ ಪಾಟೀಲ, ಪುರಸಭೆ
ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ,ರಾಘವೇಂದ್ರ ಕಾಪಸೆ,ಪುಸಭೆ ಸದಸ್ಯ ಅನೀಲಗೌಡ ಬಿರಾದಾರ ಸೋಮು ನಿಂಬರಗಿಮಠ, ಸತೀಶ ಕುಂಬಾರ ಮಾತನಾಡಿ ರಾಜ್ಯದಲ್ಲಿ ಭಯೆಯ ವಾತಾವರಣ ಇದೆ. ಹೆಣ್ಣನ್ನು ಗೌರವಿಸುವ ದೇಶ ನಮ್ಮದು. ಕೊಲೆ ಮಾಡಿದವನಿಗೆ ಗಲ್ಲು ಶಿಕ್ಷೆ ನೀಡಿ ಮಹಿಳೆಗೆ ಕರ್ನಾಟಕ ಸುರಕ್ಷಿತವೆಂದು
ಸಾರಬೇಕಾಗಿದೆ ಎಂದರು.
ಅಲ್ಪ ಸಂಖ್ಯಾತ ಮುಖಂಡರಾದ ರೈಸ ಅಷ್ಟೇಕರ,
ಮಹಮ್ಮದ ಇಲಿಯಾಸ ಮಾಣಿಕ ಜನಾಬ,
ಮೌಲಾನಾ ನಾಯ್ಕೋಡಿ ಮಾತನಾಡಿ ಭಾರತದಲ್ಲಿ
ಹಿಂದು ಮುಸ್ಲೀಂಮರು ಸಹೋದರಂತೆ ಬಾಳುತ್ತಿದ್ದು ಇಲ್ಲಿರುವ ಮುಸ್ಲಿಮರು ಭಾರತೀಯರು, ಮಾನವೀಯತೆ ಪ್ರತೀಕ ಕಾರಣ ಅಪರಾಧಿ ಫಯಾಜನನ್ನು ಎನ್ ಕೌಂಟರ
ಮಾಡಬೇಕೆಂದು ಒತ್ತಾಯಿಸಿದರು.
ನಂತರ ತಹಸೀಲ್ದಾರ ಮಂಜುಳಾ ನಾಯಕ ಇವರಿಗೆ
ಮನವಿ ಅರ್ಪಿಸಲಾಯಿತು. ಪ್ರತಿಭಟನೆಯಲ್ಲಿ ಬಂಥನಾಳ ವೃಷಭಲಿಂಗೇಶ್ವರ ಶ್ರೀಗಳು, ಅಹಿರಸಂಗದ
ಮಲ್ಲಿಕಾರ್ಜುನ ಶ್ರೀಗಳು, ಹಾವಿನಾಳದ ವಿಜಯಮಹಾಂತೇಶ ಶ್ರೀಗಳು, ಇಂಚಗೇರಿಯ
ರುದ್ರಮುನಿ ಶ್ರೀಗಳು,ರೋಡಗಿಯ ಅಭಿನವ
ಶಿವಲಿಂಗೇಶ್ವರ ಶ್ರೀಗಳು,ಅಥರ್ಗಾದ ಮುರಗೇಂದ್ರ ಶ್ರೀಗಳು,ಚಡಚಣದ ಷಡಕ್ಷರಿ ಶ್ರೀಗಳು, ರಾಮಸಿಂಗ ಕನ್ನೊಳ್ಳಿ, ವೇಕಂಟೇಶ ಕುಲಕರ್ಣಿ,ಪುರಸಭೆ ಸದಸ್ಯ ದೇವೇಂದ್ರ ಕುಂಬಾರ,ಚಂದು ದೇವರ, ಪ್ರಕಾಶ ಬಿರಾದಾರ, ಶ್ರೀಧರ ಕ್ಷತ್ರಿ , ರಾಜಗುರು ದೇವರ,ಶಾಂತು
ಕಂಬಾರ, ಆನಂದ ದೇವರ, ಮಹೇಶ ಹೂಗಾರ,
ಸೋಮಶೇಖರ ದೇವರ, ಶಿವಾಜಿ ಪವಾರ,ಅಭಿಷೇಕ
ಬಿಳಗಿ, ಶಾಂತೇಶ ಪಾಸೋಡಿ ಮತ್ತಿತರಿದ್ದರು.
ಇಂಡಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ವಿದ್ಯಾರ್ಥಿನಿ ನೇಹಾ ಕೊಲೆ ವಿರೋಧಿಸಿ ಮಠಾಧೀಶರು ತಹಸೀಲ್ದಾರ ಮಂಜುಳಾ ನಾಯಕ ಇವರಿಗೆ ಮನವಿ ಸಲ್ಲಿಸಿದರು.