ರೋಗಿಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಡೋಝಿಯ ಸಂಪರ್ಕ ರಹಿತ ರಿಮೋಟ್ ಪೇಷೆಂಟ್ ಮಾನಿಟರಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡ ರಾಷ್ಟ್ರೋತ್ಥಾನ ಪರಿಷತ್ ಅಧೀನದ ಮೊದಲ ಆಸ್ಪತ್ರೆ ಎಂಬ ಮಹತ್ವದ ಸಾಧನೆ ಮಾಡಿದ ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆ
ಬೆಂಗಳೂರು, ಏಪ್ರಿಲ್ 13, 2024: ಆರೋಗ್ಯ ಸೇವಾ ಕ್ಷೇತ್ರವು ನಿರಂತರವಾಗಿ ರೂಪಾಂತರಕ್ಕೆ ಒಳಗಾಗುತ್ತಿರುವುದರಿಂದ ಉತ್ತಮ ಆರೋಗ್ಯ ಸೇವೆ ನೀಡಲು ಆಸ್ಪತ್ರೆಗಳು ಕೂಡ ಅತ್ಯಾಧುನಿಕ ಸಾಧನಗಳಿಗೆ ಹೊಂದಿಕೊಳ್ಳುವುದು ಅವಶ್ಯವಾಗಿದೆ ಎಂದು ಜಯದೇವ್ ಸ್ಮಾರಕ ರಾಷ್ಟೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಐಸಿಯು ಅನೆಸ್ತೇಷಿಯಾಲಜಿ ಎಚ್ ಓಡಿ ಡಾ. ಆನಂದ್ ಶಂಕರ್ ಹೇಳಿದರು.
ಜಯದೇವ ಸ್ಮಾರಕ ರಾಷ್ಟೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಡೋಝಿಯ ಸುಧಾರಿತ ಎಐ ಆಧರಿತ ಸಂಪರ್ಕರಹಿತ, ಕಂಟಿನ್ಯೂಯಸ್ ಪೇಷೆಂಟ್ ಮಾನಿಟರಿಂಗ್ ಆಂಡ್ ಅರ್ಲಿ ವಾರ್ನಿಂಗ್ ಸಿಸ್ಟಮ್ ಅನ್ನು ಅಳವಡಿಸುವ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಇದು ರೋಗಿಗಳ ಸುರಕ್ಷತೆ, ನಿರಂತರ ಕಾಳಜಿ ಮತ್ತು ರೋಗಿಗಳ ಆರೈಕೆಯ ಗುಣಮಟ್ಟವನ್ನು ಹೆಚ್ಚಿಸಲು ಮೇಡ್ ಇನ್ ಇಂಡಿಯಾ’ ತಂತ್ರಜ್ಞಾನವನ್ನು ಹೊಂದಿದೆ. ಡೋಝಿಯ ಉತ್ಪನ್ನವು ಕೌಡ್ ಆಧರಿತವಾಗಿದೆ. ರೋಗಿ ಗಳ ಸುರಕ್ಷತೆಗಾಗಿ ಹಾಗೂ ಉತ್ತಮ ಚಿಕಿತ್ಸಾ ಫಲಿತಾಂಶ 2 ದೊರಕಿಸಲು ಸಕಾಲಿಕ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರೋಗಿಯನ್ನು ನಿರಂತರವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ನಿಗಾ ವಹಿಸಲು ಆಸ್ಪತ್ರೆ ಸಿಬ್ಬಂದಿಗೆ ಅನುವು ಮಾಡಿಕೊಡುವ ಸೆಂಟ್ರಲ್ ಆಂಡ್ ರಿಮೋಟ್ ಮಾನಿಟರಿಂಗ್ ಸಾಮರ್ಥ್ಯವನ್ನು ಹೊಂದಿದೆ.
“ಜಯದೇವ್ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಂತಹ ಪ್ರತಿಷ್ಠಿತ ಸಂಸ್ಥೆಯೊಂದಿಗೆ ಕೈಜೋಡಿಸುವುದಕ್ಕೆ ನಮಗೆ ಹೆಮ್ಮೆ ಇದೆ. ಏಕೆಂದರೆ ರೋಗಿಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಮತ್ತು ಚಿಕಿತ್ಸಾ ಫಲಿತಾಂಶಗಳು ಮತ್ತು ಶುಶ್ರೂಷೆಯ ದಕ್ಷತೆಯನ್ನು ಸುಧಾರಿಸಲು ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಉದ್ದೇಶವನ್ನು ಹೊಂದಿದ್ದೇವೆ. ನಿರಂತರವಾದ ವಾರ್ಡ್ ಮಾನಿಟರಿಂಗ್ ಮತ್ತು ಅರ್ಲಿ ವಾರ್ನಿಂಗ್ ಸಿಸ್ಟಮ್ ಅಳವಡಿಕೆಯಿಂದ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಸಾಧ್ಯವಾಗುತ್ತದೆ ಎಂದು *ಡೋಝಿ ಸಿಇಓ ಮತ್ತು ಸಹ ಸಂಸ್ಥಾಪಕರಾದ ಮುದಿತ್ ದಂಡವಾಟೆ* ಹೇಳಿದ್ದಾರೆ.
ಈ ಸಂದರ್ಭ ರಾಷ್ಟೋತ್ಥಾನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಆತ್ಮಾರಾಮ್, ವೈದ್ಯಕೀಯ ಆಡಳಿತಾಧಿ ಕಾರಿ ಡಾ. ಶೈಲಾ ಹೆಚ್.ಎನ್, ಡೋಝಿ ಸಿಇಓ ಮತ್ತು ಸಹ ಸಂಸ್ಥಾಪಕ ಮುದಿತ್ ದಂಡವಾಟೆ ಉಪಸ್ಥಿತರಿದ್ದರು.