ಇಂಡಿಯ ಪಾಟೀಲರಿಗೆ, ರಾಷ್ಟ್ರೀಯ ವೀರ ಗಣಾಚಾರಿ ಪ್ರಶಸ್ತಿ
ಇಂಡಿ : ಪಟ್ಟಣದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ
ಸಂಸ್ಥೆಯ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ
ಇವರಿಗೆ ರಾಷ್ಟ್ರೀಯ ವೀರ ಗಣಾಚಾರಿ ಪ್ರಶಸ್ತಿ ನೀಡಿ
ಗೌರವಿಸಲಾಗಿದೆ. ಇಂದು ದೇವರ ಹಿಪ್ಪರಗಿಯಲ್ಲಿ ಮಡಿವಾಳ ಮಾಚಿದೇವರ ಪ್ರತಿಷ್ಠಾನ ಹಾಗೂ ಕಲೆ ಸಾಹಿತ್ಯ ವೇದಿಕೆ ವತಿಯಿಂದ ನಡೆದ ಸಮಾರಂಭದಲ್ಲಿ ಈ
ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪಂಚಮಸಾಲಿ ಪೀಠದ ಪರಮಪೂಜ್ ಜಗದ್ಗುರುಗಳಾದ ಶ್ರೀ ಬಸವ ಮೃತ್ಯುಂಜಯ ಶ್ರೀ ಈ ಪ್ರಶಸ್ತಿ ಪ್ರಧಾನ ಮಾಡಿದರು. ಪ್ರತಿಪ್ಠಾನದ ಅಧ್ಯಕ್ಷ ಬಿ.ಎಂ.ಪಾಟೀಲ, ಬಿ.ಎಲ್.ಪಾಟೀಲ ನಾಗರಾಳ,ಇಂಡಿಯ ರವಿಗೌಡ ಪಾಟೀಲ, ರಾಜುಗೌಡ ಪಾಟೀಲ, ರಾಜು ಕುಲಕರ್ಣಿ, ಅಮಿತ ಪಾಟೀಲ,ರಾಜುಗೌಡ ಪಾಟೀಲ ದೇವರ ಹಿಪ್ಪರಗಿ ಮತ್ತಿತರಿದ್ದರು.
ಇಂಡಿಯ ನೀಲಕಂಠಗೌಡ ಪಾಟೀಲರಿಗೆ ದೇವರ
ಹಿಪ್ಪರಗಿಯಲ್ಲಿ ನಡೆದ ಸಮಾರಂಭದಲ್ಲಿ
ರಾಷ್ಟ್ರೀಯ ವೀರ ಗಣಾಚಾರಿ ಪ್ರಶಸ್ತಿ ನೀಡಿ
ಗೌರವಿಸಲಾಯಿತು.