ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಹಾಗೂ ಗರ್ಭಿಣಿ ಸ್ತ್ರೀಯರ ತಪಾಸಣಾ ಶಿಬಿರ ಮತ್ತು ಮಕ್ಕಳ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತುರವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ನಡೆದ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯನ್ನು ಗ್ರಾಮದ ಗರ್ಭಿಣಿ ಮಹಿಳೆಯರ ಆರೋಗ್ಯ ತಪಾಸಣೆ ಮಾಡಿ ಚಿಕ್ಕ ವಯಸ್ಸಿನ ಮಕ್ಕಳಿಗೆ ಲಸಿಕೆಯನ್ನು ಹಾಕಲಾಯಿತು.
ಈ ವೇಳೆ ಕರ್ನಾಟಕ ಹೆಲ್ತ್ ಪ್ರಮೋಟ್ ತಾಲೂಕ ಸಂಯೋಜಕರಾದ ಹನುಮಂತಪ್ಪ ಮಾತನಾಡಿ ಪ್ರತಿಯೊಬ್ಬ ಗರ್ಭಿಣಿ ಮಹಿಳೆಯು ತಮ್ಮ ಆರೋಗ್ಯವನ್ನು ಆಗಾಗ ಪರೀಕ್ಷಿಸಿಕೊಳ್ಳಬೇಕು ಡೆಂಗ್ಯೂ ಜ್ವರ ಎನ್ನುವುದು ನಮ್ಮ ಸುತ್ತಮುತ್ತಲಿನ ತೊಟ್ಟಿಗಳಲ್ಲಿ, ಚರಂಡಿಗಳಲ್ಲಿ,ಟಯರ್ ಗಳಲ್ಲಿ, ತೆಂಗಿನಕಾಯಿ ಚಿಪ್ಪುಗಳಲ್ಲಿ ನೀರು ಶೇಖರಣೆಯಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ಹರಡುತ್ತದೆ ಇದರಿಂದ ನಾವುಗಳೆಲ್ಲರೂ ಟೆಂಗಿನ ಚಿಪ್ಪುಗಳಲ್ಲಿನ, ಟಯರ್ ಗಳಲ್ಲಿನ, ಹಾಗೂ ತೊಟ್ಟಿಗಳಲ್ಲಿ ನೀರು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದರು.
ನಂತರ ಗುಂಜಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕಿ ಮೋದೀನ್ ಬೀ ಮಾತನಾಡಿ ಡೆಂಗ್ಯೂ ಜ್ವರ ಎಂಬುದು ದೇಹದಲ್ಲಿ ಮೈಕೈನೋವು,ಚಳಿ ಆಗುವುದು, ಅತಿಸಾರ ಉಂಟಾಗುವುದು, ಮಕ್ಕಳಿಗೆ ಬಹುಬೇಗ ಬುದ್ಧಿಮಾಂದ್ಯತೆಯ ಉಂಟಾಗುವುದು ಈತರನಾಗಿ ಕಾಣಿಸಿಕೊಳ್ಳುತ್ತದೆ ಅದಕ್ಕೆ ಪ್ರತಿಯೊಬ್ಬ ಗರ್ಭಿಣಿ ಮಹಿಳೆ, ಮಕ್ಕಳು ಮತ್ತು ವೃದ್ದರು ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ವೀರಭಧ್ರಯ್ಯ ಸ್ವಾಮಿ ಗ್ರಾಮ ಹೆಲ್ತ್ ಪ್ರಮೋಟ್, ಪರಮೇಶ, ಪವಿತ್ರ ಆರೋಗ್ಯ ಸಿಬ್ಬಂದಿಗಳು, ಲಿಂಗನಗೌಡ ನಡಲಮನಿ ಊರಿನ ಹಿರಯರು, ಹನುಮಂತಮ್ಮ, ದೇವಮ್ಮ ಆಶಾಕಾರ್ಯಕರ್ತೆಯರು, ಬಸನಗೌಡ, ಚನಪ್ಪ, ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು, ಹಾಗೂ ಊರಿನ ಗರ್ಭಿಣಿ ಮಹಿಳೆಯರು, ವೃದ್ಧರು, ಮಕ್ಕಳ ತಾಯಂದಿರು ಉಪಸ್ಥಿತರಿದ್ದರು.