ಇಂಡಿ : ಮಾದಕ ವಸ್ತುಗಳ ಬಳಕೆಯಿಂದ ಅದೆಷ್ಟೋ ಜನರ ಬದುಕು ಬರ್ಬಾದ್ ಆಗಿದೆ. ಮಾದಕ ದ್ರವ್ಯ ಸೇವನೆಯಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ. ಇತ್ತಿಚೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿದ್ದು, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತಿವೆ.
ಮಾದಕ ದ್ರವ್ಯ ವಸ್ತುಗಳ ಮಾರಾಟ, ಸಾಗಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ಮಟ್ಟ ಹಾಕಲು ಸರ್ಕಾರ ಕೆಲಸ ಮಾಡಬೇಕು. ಅಲ್ಲದೇ, ಮಹಾರಾಷ್ಟ್ರ ವಿಜಯಪುರ ಗಡಿಭಾಗದಲ್ಲಿ ಮಾದಕ ವಸ್ತುಗಳಿಗೆ ಕಡಿವಾಣ ಹಾಕಬೇಕು ಎಂದು ನಿಂಬೆ ನಾಡಿನ ಶಾಸಕ ಯಶವಂತರಾಯಗೌಡ ಪಾಟೀಲ್ ಸರ್ಕಾರಕ್ಕೆ ಸದನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಮಾದಕ ವಸ್ತುಗಳ ಸಾಗಾಟದಲ್ಲಿ ಭಾಗಿಯಾದ ಆರೋಪಿತರ ವಿರುದ್ಧ ಯಾವುದೇ ತಾರತಮ್ಯ ವಿಲ್ಲದೆ NDPS ಕಾಯ್ದೆ 1985 ರ ಅನ್ವಯ ಸರ್ಕಾರ ಕ್ರಮ ಕೈಗುಳ್ಳುತ್ತಿದೆ ಎಂದು ಸಚಿವರು ಭರವಸೆ ನೀಡಿದರು.