ದೇಶದ ಏಕತೆ ಸಂಕೇತ “ನಮ್ಮ ಮಣ್ಣು ನನ್ನ ದೇಶದ ಅಭಿಯಾನ”
ಇಂಡಿ : ದೇಶದ ಏಕತೆ ಸಂಕೇತವಾಗಿ ‘ನನ್ನ ಮಣ್ಣು ನನ್ನ ದೇಶದ ಅಭಿಯಾನ’ ಅಡಿಯಲ್ಲಿ ದೇಶಾದ್ಯಂತ ಮೃತ್ತಿಕೆ ಸಂಗ್ರಹಿಸಿ ಅಮೃತ ಉದ್ಯಾನ ನಿರ್ಮಾಣ ಮಾಡಲಾಗುವ ಕಾರ್ಯಕ್ಕೆ ಅಭಿಯಾನ ಜಿಲ್ಲಾ ಸಂಚಾಲಕ ಹಾಗೂ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗೂರು ಹಾಗೂ ತಾಲೂಕು ಅಭಿಯಾನದ ಸಂಚಾಲಕ ಶಾಂತು ಕಂಬಾರ ಗುರುವಾರ ಚಾಲನೆ ನೀಡಿದರು.
ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿ ಇಂಡಿ ಮಂಡಲದಲ್ಲಿ ಹಮ್ಮಿಕೊಂಡಂತ “ನಮ್ಮ ಮಣ್ಣು ನಮ್ಮ ದೇಶ” ಶ್ರೀ ಧಾನಮ್ಮದೇವಿ ಆವರಣದಲ್ಲಿ ಮಣ್ಣು ಸಂಗ್ರಹಿಸಿ ” ಅಭಿಯಾನಕ್ಕೆ ಕಾರ್ಯಕರ್ತರು ಸೇರಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಅಭಿಯಾನ ಸಂಚಾಲಕ ಮಲ್ಲಿಕಾರ್ಜುನ ಜೋಗುರ, ಮಂಡಲ ಉಸ್ತುವಾರಿ ರಾಜು ಪೂಜಾರಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಮಂಡಲ ಅದ್ಯಕ್ಷ ಮಲ್ಲಿಕಾರ್ಜುನ ಕಿವಡೆ ಮಾತನಾಡಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಪ್ರಾಧನ ಮಂತ್ರಿ ನರೇಂದ್ರ ಮೋದಿಜಿಯವರ ಮಾರ್ಗದರ್ಶನದಂತೆ ಇಡೀ ರಾಷ್ಟ್ರದಲ್ಲಿ “ನಮ್ಮ ಮಣ್ಣು ನಮ್ಮ ದೇಶ” ಅಭಿಯಾನಕ್ಕೆ ಚಾಲನೆ ನೀಡಿದ್ದು, ಇಂದು ಇಂಡಿ ಪಟ್ಟಣದಲ್ಲಿಯೂ ಸಹ ಚಾಲನೆ ನೀಡಲಾಗಿದೆ. ಪವಿತ್ರವಾದ ಮಣ್ಣು ಇಡೀ ಜಗತ್ತಿನ ಜೀವರಾಶಿಗಳ ಬದುಕಿಗೆ ಅತ್ಯಾವಶ್ಯಕ ಎಂದು ಹೇಳಿದರು. ಅದಲ್ಲದೇ ಇಡೀ ಕಾರ್ಯಕರ್ತರು ಸೇರಿ ಮಣ್ಣು ತಾಯಿ ಸ್ವರೂಪ, ಮಣ್ಣಿಗೆ ನಮನಗಳು ವೀರಯೋಧರಿಗೆ ವಂದನೆಗಳು, ನನ್ನ ದೇಶದ ಮಣ್ಣು ಮುತ್ತು ರತ್ನ ವಜ್ರಗಳ ಹೊಳಪು, ಮಣ್ಣಿಗೆ ಸನ್ಮಾನ ಭಾರತದ ಅಭಿಮಾನ, ದೇಶದ ರಕ್ಷಣೆ ಮಣ್ಣಿನ ಸಂರಕ್ಷಣೆ, ಅಮೃತವನಕ್ಕಾಗಿ ಮನೆಮನೆಯಿಂದ ಮಣ್ಣು ಸಂಗ್ರಹಣೆ ಎಂದು ಈ ರೀತಿ ಘೋಷಣೆ – ಗಳೊಂದಿಗೆ ಪವಿತ್ರವಾದ ಮಣ್ಣನ್ನು ಸಂಗ್ರಹಿಸಲಾಗುತ್ತದೆ ಎಂದು ಹೇಳಿದರು.
ಇನ್ನೂ ದೇವಸ್ಥಾನ, ಮಠ ಮಂದಿರ ಹಾಗೂ ವೀರಯೋಧರ ಸಮಾಧಿ ಹತ್ತಿರದ ಮಣ್ಣನ್ನು ಕಳಸಿಯಲ್ಲಿ ತುಂಬಿಕೊಂಡು, ಕಳಸಿಯೊಂದಿಗೆ ಮನೆಮನೆಗೆ ತೆರಳಿ ಪೂಜ್ಯ ಮಾತೆಯರಿಂದ ಮಣ್ಣನ್ನು ಸಂಗ್ರಹಿಸಲಾಗುತ್ತದೆ. ತಾಲೂಕಿನ ಎಲ್ಲಾ ಗ್ರಾಮಗಳಿಂದಲೂ ಮಣ್ಣು ಸಂಗ್ರಹಿಸಿ, ದೆಹಲಿಯ ದೇಶಭಕ್ತರ ವೀರ ಯೋಧರ ಅಮೃತ ವಾಟಿಕಾ ವನದಲ್ಲಿ ಸಮರ್ಪಣೆ ಮಾಡಲಾಗುತ್ತದೆ. ಭೂಮಿ ತಾಯಿಯನ್ನು ಗೌರವಿಸಿ ಪವಿತ್ರವಾದ ಮಣ್ಣಿನ ರಕ್ಷಣೆ ನಮ್ಮೆಲ್ಲರ ಆಧ್ಯ ಕರ್ತವ್ಯವೆಂದು ತಿಳಿಸಿ ಹೇಳಿದರು.
ಈ ಸಂದರ್ಭದಲ್ಲಿ ಸಿದ್ದಲಿಂಗ ಹಂಜಗಿ, ಅನಿಲ್ ಜಮಾದಾರ್, ಮುತ್ತು ದೇಸಾಯಿ, ರಾಜಕುಮಾರ್ ಸಗಾಯಿ, ಬುದ್ದುಗೌಡ ಪಾಟೀಲ್, ರವಿ ವಗ್ಗೆ, ಯಲ್ಲಪ್ಪ ಹದರಿ, ಮಲ್ಲಿಕಾರ್ಜುನ್ ವಾಲಿಕಾರ, ಅಶೋಕಗೌಡ ಬಿರಾದಾರ, ತಾಲೂಕಿನ ಅಭಿಯಾನದ ಸಂಚಾಲಕ ಶಾಂತು ಕಂಬಾರ, ರಾಜಶೇಖರ ಯರಗಲ್, ಕಾಶಿನಾಥ ನಾಯಿಕೋಡಿ, ಆರ್ ಡಿ ಪಾಟೀಲ, ಶ್ರೀಮಂತ ಮೋಗಲಾಯಿ, ವಿಜಯಲಕ್ಷ್ಮಿ ರೂಗಿಮಠ, ಪುರಸಭೆ ಸದಸ್ಯ ಅನಿಲಗೌಡ ಬಿರಾದರ್, ದೆವೇಂದ್ರ ಕುಂಬಾರ್ , ಶ್ರೀಕಾಂತ ದೇವರ, ಮಂಜು ದೇವರ, ವಜ್ರಕಾಂತ ಕುಡಿಗನೂರ, ಕಲ್ಲಪ್ಪ ಉಟಗಿ, ರಾಚು ಬಡಿಗೇರ, ಮಹದೇವ ಗುಡ್ಡೂಡಗಿ, ಸಂಜು ದಶವಂತ್, ಸಂತೋಷ್ ಪಾಟೀಲ್, ರಾಮಸಿಂಗ್ ಕನ್ನೊಳ್ಳಿ, ಮಂಜು ದೇವರ, ಅಶೋಕ ಅಕಲಾದಿ, ದತ್ತಾ ಬಂಡೇನವರ, ಗೋವಿಂದ ರಾಠೂಡ, ಜಯರಾಮ ರಾಥೋಡ್ ಹಾಗೂ ಕಾರ್ಯಕರ್ತರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.