ಲಿಂಗಸುಗೂರು: ಲಿಂಗಸುಗೂರ ಪಟ್ಟಣದ ಜ್ಯೋತಿ ಹಾರ್ಡ್‌ವೇರನಲ್ಲಿ ನಕಲಿ ಬಿಲ್ಲುಗಳನ್ನು ನೀಡುತ್ತಿದ್ದು ಅಕ್ರಮವಾಗಿ ಸರಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದು ಜ್ಯೋತಿ ಹಾರ್ಡ್‌ವೆರ್‌ನಲ್ಲಿ ಕೇವಲ ಕೃಷಿ ಚಟುವಟಿಕೆಗಳಿಗೆ ಬೇಕಾಗುವಂತಹ ಸಲಕರಣೆಗಳನ್ನು ಹಾಗೂ ಹೊಲಗಳಿಗೆ ನೀರು ಪೂರೈಸುವ ಯಂತ್ರ ಮೋಟಾರು ಪೈಪಗಳು ಬೆಳೆಗಳಿಗೆ ನಾಟಿ ಮಾಡಲು ಹಾಗೂ ಇನ್ನಿತರ ಚಟುವಟಿಕೆಗಳನ್ನು ಪೂರೈಸುವ ಸಾಮಾಗ್ರಿಗಳು ದೊರೆಯುತ್ತವೆ.
ಇಲ್ಲಿ ರೈತರು ಹೆಚ್ಚು ಹೆಚ್ಚು ವ್ಯಾಪಾರ ವಹಿವಾಟು ಮಾಡುವ ಅಂಗಡಿಯಾಗಿದ್ದು ಈ ಅಂಗಡಿಯಲ್ಲಿ ಅಂಗಡಿಯ ಮಾಲೀಕರು ಇಲ್ಲಿ ಯಾವುದೇ ಸಾಮಾಗ್ರಿಗಳನ್ನು ತೆಗೆದುಕೊಂಡರೆ ಅದಕ್ಕೆ ರೈತರ ಮುಂದೆ ನಕಲಿ ಬಿಲ್ಲು ೯% ಜಿ.ಎಸ್.ಟಿ. ಟ್ಯಾಕ್ಸ್ ಸಿ.ಜಿ.ಎಸ್.ಟಿ. ಹಾಗೂ ಎಸ್.ಜಿ.ಎಸ್.ಟಿ. ಟ್ಯಾಕ್ಸ್ ಎಂದು ಹೇಳಿ ಹಣವನ್ನು ತೆಗೆದುಕೊಂಡು ಸರಕಾರಕ್ಕೆ ಕಟ್ಟಬೇಕಾದ ಟ್ಯಾಕ್ಸನ್ನು ಕಟ್ಟದೆ ಅಕ್ರಮವಾಗಿ ತೆರಿಗೆ ವಂಚನೆ ಮಾಡುತ್ತಿದ್ದು ಸರಕಾರಕ್ಕೆ ಬರುವಂತಹ ಆದಾಯವನ್ನು ಮೋಸದಿಂದ ವಂಚನೆ ಮಾಡುತ್ತಿದ್ದಾರೆ.
ಪಟ್ಟಣದಲ್ಲಿರುವ ಜ್ಯೋತಿ ಹಾರ್ಡ್‌ವೇರ್ ಅಂಗಡಿ ಸಗಟು ಕೃಷಿ ಚಟುವಟಿಕೆ ಬಳಸುವ ವಸ್ತುಗಳನ್ನು ಮಾರಾಟ ಮಾಡಿ ರಸೀದಿ ನೀಡದೆ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ದಲಿತ ಸಂಘಟನೆಗಳು ಆರೋಪಿಸಿ ಮಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಹಾಗೂ ಆದಾಯ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು.
ಖಾಸಗಿ ಅಂಗಡಿಯ ಮಾಲೀಕರು ಹಾಗೂ ಅಂಗಡಿ ವ್ಯಾಪಾರಸ್ಥರು ಒಳ ಒಪ್ಪಂದ ಮಾಡಿಕೊಂಡು ಜನರಿಂದ ಹಣ ದೋಚಿಕೊಳ್ಳುತ್ತಿದ್ದು, ಇದರಿಂದಾಗಿ ಬಡ, ಮಧ್ಯಮ ವರ್ಗದ ಕುಟುಂಬಸ್ಥರು ಹಾಗೂ ರೈತಾಪಿ ಜನರಿಗೆ ಸಾಕಷ್ಟು ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ.
ತಾಲೂಕು ಆಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ತೆರಿಗೆ ವಂಚನೆ ಮಾಡಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಬೇಕು, ತೆರಿಗೆ ವಂಚಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘಟನೆಗಳು ಒತ್ತಾಯವಾಗಿದೆ. ಕೇವಲ ಹೆಸರಿಗೆ ಒಂದು ಬಿಲ್ಲು ಸರಕಾರಕ್ಕೆ ತೋರಿಸಲು ಇನ್ನೊಂದು ಬಿಲ್ ಈ ರೀತಿಯಾಗಿ ತೆರಿಗೆ ವಂಚನೆ ನೆಡೆಯುತ್ತದೆ ಕಟ್ಟುವ ಟ್ಯಾಕ್ಸ್ ಬಿಲ್ಲು ಬೇರೆಯಾಗಿದ್ದು ಜ್ಯೋತಿ ಹಾರ್ಡ್‌ವೇರ್ ಈಗಾಗಲೇ ಹಲವು ಪಂಚಾಯತಿಗಳಿಗೆ ನಕಲಿ ಬಿಲ್ಲುಗಳನ್ನು ನೀಡಿ ವಂಚನೆ ಮಾಡಿದ್ದಾರೆ ಎಂಬ ಆರೋಪ ದಲಿತ ಸಂಘಟನೆಗಳ ಹಲವಾರು ಬಾರಿ ಮನವಿಯನ್ನು ನೀಡಿದ್ದಾರೆ.
ಜ್ಯೋತಿ ಹಾರ್ಡ್‌ವೇರ್ ಕೇವಲ ಬಿಳಿ ಹಾಳೆಯ ಮೇಲೆ ಬಿಲ್ಲು ಹಾಕಿದ್ದು ಅದೇ ಹೆಸರಿನಲ್ಲಿ ಜಿ.ಎಸ್.ಟಿ. ಬಿಲ್ಲನ್ನು ಬರೆದು ತೆರಿಗೆ ವಂಚನೆ ಮಾಡಿದ್ದು ಹಾಡು ಹಗಲೇ ಮೋಸ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಶರಣ ಬಸವ ಈಚನಾಳ ಆರೋಪಿಸಿದ್ದಾರೆ. ಇದೇ ರೀತಿ ತಾಲೂಕಿನ ಪ್ರಮುಖ ವ್ಯಾಪಾರ ವಹಿವಾಟು ಅಂಗಡಿ ಮಾಲೀಕರು ಜಿಎಸ್‌ಟಿ ಬಿಲ್ಲು ಕೊಡದೆ ಇರುವುದು ಕಂಡುಬಂದಿದೆ ಇದರಿಂದಾಗಿ ಸಾರ್ವಜನಿಕ ತೇರಿಗೆ ಹಣ ಹಾಡು ಹಗಲೇ ಲೂಟಿ ಮಾಡುವ ವ್ಯಾಪಾರಿಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳ ಹಿಂದೇಟು ಹಾಕುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯ ನಡೆ ನಿಗೂಢವಾಗಿದೆ.
ಸರ್ಕಾರದ ನಿಯಮ ಪ್ರಕಾರ ಯಾವುದೇ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಲಿಂಗಸುಗೂರು ನಗರದಲ್ಲಿ ಹಾಡು ಹಗಲೇ ಜನರ ಜೇಬಿಗೆ ಕತ್ತರಿ ಹಾಕಿ ತಮ್ಮ ವ್ಯಾಪಾರ ಮಾಡಿ ಕೊಂಡು ತೇರಿಗೆ ವಂಚನೆ ಪ್ರಕರಣ ನಿನ್ನೆ ನಡೆದ ಘಟನೆ ಬೇಳಕಿಗೆ ಬಂದಿದೆ ರಾಯಚೂರು ಜಿಲ್ಲೆಯ ಆದಾಯ ತೇರಿಗೆ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತು ಕೊಂಡಿದ್ದಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ ಕೂಡಲೇ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ಮೋಸ ಮಾಡುವ ವ್ಯಾಪಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ ಇಲ್ಲವೊ ಎಂಬುದು ಕಾದುನೋಡಬೇಕಿದೆ?.