ಇಂಡಿ : ಉದ್ಯಮಶೀಲತಾ, ಗಂಗಾ ಕಲ್ಯಾಣ, ನೇರ ಸಾಲ ಮತ್ತು ಕೂಲಿ ಕಾರ್ಮಿಕರಿಗೆ, ರೈತರಿಗೆ ನೇರವಾಗಲೂ ದ್ವೀಚಕ್ರ ವಾಹನ ವಿತರಣೆ ಸೇರಿದಂತೆ ಅನೇಕ ಯೋಜನೆಗಳು ಬಡವರಿಗೆ ಸಮರ್ಪಕವಾಗಿ ದೊರೆತಿಲ್ಲ ಎಂದು ಬಹುಜನ ಸಮಾಜ ಪಾರ್ಟಿ ಜಿಲ್ಲಾ ಕಾರ್ಯದರ್ಶಿ ಹಾಗೂ ಇಂಡಿ ವಿಧಾನಸಭಾ ಉಸ್ತುವಾರಿ ನಾಗೇಶ್ ಶಿವಶರಣ ಗಂಭೀರ ಆರೋಪ ಮಾಡಿದರು.
ಪಟ್ಟಣದಲ್ಲಿ ಮಾತಾನಾಡಿದ ಅವರು, ಅಂಬೇಡ್ಕರ್ ನಿಗಮದ ಯೋಜನೆಗಳು ಬಡವರಿಗೆ ನೀಡಿಲ್ಲ. ಅರ್ಹ ಪಲಾನುಭವಿಗಳಿಗೆ ಅನ್ಯಾಯ ಎಸಗಿದ್ದಾರೆ ಎಂದು ದೂರಿದರು. 2022-23 ರ ನೇ ಸಾಲಿನ ಡಾ. ಅಂಬೇಡ್ಕರ್ ನಿಗಮದ ಯೋಜನೆಗಳಿಗೆ ಪಲಾನುಭವಿಗಳನ್ನು ಇಲ್ಲಿಯವರೆಗೆ ಆಯ್ಕೆ ಮಾಡಿಲ್ಲ. ನಿರ್ದಿಷ್ಟವಾಗಿ ಗುರಿ ಪ್ರಕಾರ ಉದ್ಯಮಶೀಲತಾ, ಗಂಗಾ ಕಲ್ಯಾಣ, ನೇರ ಸಾಲ ಇನ್ನಿತರ ಸೀಮಿತ ಅವಧಿಯಲ್ಲಿ ಫಲಾನುಭವಿಗಳಿಗೆ ತಲುಪಿಸದೆ ಬಡವರ ಕಲ್ಯಾಣಕ್ಕಾಗಿ ಇಟ್ಟಿರುವ ಹಣವನ್ನು ಸಮರ್ಪಕವಾಗಿ ಬಳಸದೇ ಅವ್ಯವಹಾರ ಎಸಿಗಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ಬಹುಜನ ಸಮಾಜ ಪಾರ್ಟಿ ಇಂಡಿ ಘಟಕದಿಂದ ಎಸಿ ಎಸ್ಟಿ ಆಯೋಗಕ್ಕೆ ದೂರು ಸಲ್ಲಿಸಲಿದ್ದು, ದಲಿತ ವಿರೋಧಿ ನಡೆಯನ್ನು ಖಂಡಿಸುತ್ತೆವೆ. ದಲಿತ ವಿರೋಧಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ. ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ದಲಿತ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ತಿಳಿಸಿಳಿದ್ದೆನೆ ಎಂದು ಪತ್ರಿಕಾ ಪ್ರಕಟಣೆಗೆ ಮಾಹಿತಿ ನೀಡಿದ್ದಾರೆ.