ಲಿಂಗಸೂಗೂರು: ರಾಯಚೂರ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಾಗರಹಾಳ ಗ್ರಾಮದಲ್ಲಿ 14 ನೇ ವರ್ಷದ ಅಯ್ಯಪ್ಪ ಸ್ವಾಮಿಯ ಅಗ್ನಿಪೂಜೆಯ ಕಾರ್ಯಕ್ರಮ ನೆರವೇರಿತು.
ಗ್ರಾಮದ ಬಸವೇಶ್ವರ ವೃತ್ತದಿಂದ ಕನ್ನಿಪೂಜೆ, ಕುಂಬ ಕಳಸದೊಂದಿಗೆ ಅಯ್ಯಪ್ಪ ಸ್ವಾಮಿಯ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ನಂತರ ಮಾರುತಿ ದೇವಸ್ಥಾನ ಮತ್ತು ಗ್ರಾಮ ದೇವತೆ ದೇವಸ್ಥಾನದಿಂದ ಜ್ಯೋತಿಯನ್ನು ಗುರುಸ್ವಾಮಿ ಸಿದ್ದಣ್ಣ ಈಟಿ,ಸ್ವಾಮಿಯ ಸನ್ನಿದಾನಕ್ಕೆ ತಂದರು. ಮಹಾಪೂಜೆಯಲ್ಲಿ ಅಯ್ಯಪ್ಪ ಸ್ವಾಮಿಯ ಮೂರ್ತಿಗೆ ಮಹಾದೇವ ಯಲಗೂರ ಗುರುಸ್ವಾಮಿ ನೇತೃತ್ವದಲ್ಲಿ 18 ಮೆಟ್ಟಿಲ ಒಡೆಯನಿಗೆ ತುಪ್ಪದ ಅಭಿಷೇಕ ಮಾಡಿದರು.ಇನ್ನು ಅಯ್ಯಪ್ಪ ಮಾಲಾಧಾರಿಗಳು ಅಗ್ನಿ ಪ್ರವೇಶ ಮಾಡಿ, ಕುದಿಯುವ ಎಣ್ಣೆಯಲ್ಲಿ ಕೈ ಎದ್ದುವ ಮೂಲಕ ಭಕ್ತಿಯ ಪರಾಕಷ್ಟೆ ಮೆರೆದರು. ಈ ವೇಳೆ ಹರಿಹರ ಸುತನಿಗೆ ಜ್ಯೋತಿ ಬೆಳಗಿ,ಹಾಡು ನೃತ್ಯದೊಂದಿಗೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ದೂರದೂರುಗಳಿಂದ ಬಂದಂತಹ ಭಕ್ತರಿಗೆ ಮಹಾ ಅನ್ನ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಭಕ್ತರು ಅನ್ನ ಪ್ರಸಾದ ಸ್ವೀಕರಿಸಿ ಅಯ್ಯಪ್ಪನ ಕೃಪೆಗೆ ಪಾತ್ರರಾದರು. ಈ ವೇಳೆ ನಾಗರಹಾಳ, ಲಿಂಗಸೂಗೂರು,ಚಿತಾಪೂರ,ಗುಂಡಸಾಗರ,ಖೈರವಾಡಗಿ,ಹೊಸೂರು,ಅನೆಹೊಸೂರು,ನಿರಲಕೇರಿ,ಮುದಗಲ್,ಯಲಗೂರಿನ ಅಯ್ಯಪ್ಪ ಮಾಲಾಧಾರಿಗಳು ಉಪಸ್ಥಿತರಿದ್ದರು.