ಕೊಟ್ಟ ಮಾತಿಗೆ ತಪ್ಪಿಲ್ಲ..! ಸಂಸದ ಪ್ರತಾಫ್ ಸಿಂಹ..
ಬೆಳಗಾವಿ : ತಳವಾರ ಮತ್ತು ಪರಿವಾರ ಸಮುದಾಯದ ದಶಕಗಳ ಬೇಡಿಕೆಯಾಗಿದ್ದ ‘ಪರಿಶಿಷ್ಟ ಪಂಗಡ’ ಸ್ಥಾನಮಾನ ಕಲ್ಪಿಸಿಕೊಡುವ ಮೂಲಕ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದೆ, ಕೊಟ್ಟ ಮಾತಿಗೆ ಎಂದು ತಪ್ಪಿಲ್ಲ ಮೈಸೂರು – ಕೊಡಗು ಸಂಸದ ಪ್ರತಾಫ್ ಸಿಂಹ ಹೇಳಿದರು.
ಹುಕ್ಕೇರಿಯಲ್ಲಿ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿಯ ವತಿಯಿಂದ, ತಳವಾರ & ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡ ಸೇರ್ಪಡೆ ಮಾಡಲು ಅವಿರತವಾಗಿ ಶ್ರಮಿಸಿದ ಸಂಸದ ಪ್ರತಾಪ್ ಸಿಂಹ ರಿಗೆ ಸನ್ಮಾನ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ಸತ್ಕಾರ ಸ್ವೀಕರಿಸಿ ಮಾತಾನಾಡಿದ ಅವರು, ಸುಮಾರು ವರ್ಷಗಳ ಹಿಂದೆಯೇ ತಳವಾರ & ಪರಿವಾರ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಯಾಗಬೇಕಿತ್ತು. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಜೊತೆಗೆ ಬೇರೆ ರಾಜಕೀಯ ಪಕ್ಷಗಳು ಈ ಸಮುದಾಯಗಳನ್ನು ಕೇವಲ ಮತಬ್ಯಾಂಕ್ ಮಾಡಿಕೊಂಡು ಅನ್ಯಾಯ ಮಾಡಿವೆ.
ಆದರೆ ಪ್ರಧಾನಿ ಮೋದಿ ಜಿ ಮತ್ತು ಬೊಮ್ಮಾಯಿ ಡಬಲ್ ಎಂಜಿನ್ ಸರಕಾರ ಕೊಟ್ಟ ಮಾತಿನಂತೆ ಈ ತಳವಾರ & ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿ ಪ್ರಮಾಣ ಪತ್ರ ವಿತರಿಸಿ ಸಾಮಾಜಿಕ ನ್ಯಾಯ ಕೊಟ್ಟಿದ್ದಾಗಿದೆ ಎಂದು ಹೇಳಿದರು.
ಭವಿಷ್ಯದಲ್ಲಿ ಈ ಸಮುದಾಯಗಳು ಒಂದಾಗಿ ಮುಂದಿನ ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯನ್ನಿರಿಸುವ ಮುನ್ಸೂಚನೆ ನೀಡಲು ಸಜ್ಜಾಗಬೇಕು. ನಿಮಗೆ ಋಣ ತಿರಿಸುವ ಕಾಲದ ಸಮಯ ಬಂದಿದೆ. ೨೩ ರ ವಿಧಾನ ಸಭಾ ಚುನಾವಣೆಯಲ್ಲಿ ಡಬಲ್ ಎಂಜಿನ್ ಸರಕಾರಕ್ಕೆ ಸಂಪೂರ್ಣ ಬೆಂಬಲ ನೀಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಅಮಿತ್ ಎ.ಕೆ ಮಾತಾನಾಡಿದ ಅವರು, ನಮ್ಮ ಸಮುದಾಯದ ಸುದೀರ್ಘ ಹೋರಾಟದ ಮಾಡಿದೆ. ಆದರೆ ಫಲ ಮಾತ್ರ ದೊರೆಯದಂತಾಗಿತ್ತು. ಎಲ್ಲಾ ರಾಜಕೀಯ ಪಕ್ಷಗಳು ಪರಿಶಿಷ್ಟ ಪಂಗಡದ ಹೆಸರಲ್ಲಿ ಮತ ಪಡೆಯುವ ಪ್ರಯತ್ನ ಮಾಡಿದ್ರು. ಆದರೆ ಮೈಸೂರು ಸಂಸದ ಪ್ರತಾಫ್ ಸಿಂಹ ಅವರು ಕೊಟ್ಟ ಮಾತಿನಂತೆ ಈ ಸಮುದಾಯಕ್ಕೆ ನ್ಯಾಯ ಒದಗಿಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಚ್ಛಾಶಕ್ತಿಯ ಫಲವಾಗಿ ತಳವಾರ ಸಮುದಾಯಕ್ಕೆ ಎಸ್‌ಟಿ ಮಾನ್ಯತೆ ಸಿಕ್ಕಿದೆ. ಅದಕ್ಕಾಗಿ ಹಗಲು ಇರಳು ಶ್ರಮ ಪಟ್ಟವರು ಸಂಸದ ಪ್ರಥಾಫ್ ಸಿಂಹ ಸಾಹೇಬರು ಎಂದು ಹೇಳಿದರು. ಎಸ್ಟಿ ಬೇಡಿಕೆಗಾಗಿ ಅನೇಕ ವರ್ಷಗಳ ಸುದೀರ್ಘವಾದ ಹೋರಾಟ ನಮ್ಮ ಹಿರಿಯರು ಮಾಡಿದ್ದಾರೆ. ನಮ್ಮ ಹಿರಿಯರ ನೋವು ಕೂಗು ಯಾರು ಕೇಳಲಿಲ್ಲ. ಇಲ್ಲಿಯವರೆಗೂ ಯಾವೊಬ್ಬ ವ್ಯಕ್ತಿಗೂ ಧ್ವನಿ ನೀಡಲಿಲ್ಲ. ಆದರೆ ತಮ್ಮೆಲ್ಲಾ ಒತ್ತಡದಲ್ಲೂ ಎದೆ ಗುಂದದೆ ನಮ್ಮ ಸಮುದಾಯಕ್ಕೆ ಪ್ರಾಮಾಣಿಕವಾಗಿ ನ್ಯಾಯ ಕೊಡಿಸುವಲ್ಲಿ ಮೊದಲಿಗರು ಯಾಗಿದ್ದರು. ನಿಮ್ಮ ಪ್ರಯತ್ನದ ಶ್ರಮಕ್ಕೆ ಋಣ ತಿರಿಸಲು ಸಾಧ್ಯವಿಲ್ಲ. ಆ ಋಣದಲ್ಲಿ ಇರುತ್ತೆವೆ ಎಂದೆಂದೂ ಮರೆಯುವುದಿಲ್ಲ ಎಂದು ತಿಳಿಸಿದರು.
ಜೊತೆಗೆ ಬಿಜೆಪಿ ಸರ್ಕಾರಕ್ಕೆ ಋಣಿಯಾಗಿರ — ಬೇಕಾಗಿರುವುದು ಸಮಾಜದ ನೈತಿಕತೆಯ ವಿಚಾರ. ಬಿಜೆಪಿಯ ಋಣ ತೀರಿಸಲು ಇದೀಗ ವಿಧಾನ ಸಭೆ ಚುನಾವಣೆ ಹೊಸ್ತಿಲಲ್ಲಿ ಸದವಕಾಶ ಲಭಿಸಿದ್ದು, ತನ್ನಿಮಿತ್ತ ಸಮಾಜ ಮಹತ್ವದ ನಿರ್ಧಾರ ಕೈಗೊಂಡು ಬೆನ್ನೆಲುಬಾಗಿ ನಿಲ್ಲೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಮಖಂಡಿ, ಅಥಣಿ, ರಾಯಬಾಗ, ಚಿಕ್ಕೂಡಿ ಹಾಗೂ ಬೆಳಗಾವಿ ಬಾಗಲಕೋಟ ಜಿಲ್ಲೆಯ ತಳವಾರ ಸಮುದಾಯದ ಅನೇಕರು ಆಗಿಮಿಸಿ ಗೌರವಿಸಿದರು.