ಶೀಲ ಶಂಕಿಸಿ ಬರ್ಬರ್ ಹತ್ಯೆ..! ಎಲ್ಲಿ..?
ವಿಜಯಪುರ: ಪತ್ನಿಯ ಶೀಲ ಶಂಕಿಸಿ ಪತ್ನಿಯನ್ನು ಪಾಪಿ ಪತಿ ಸಲಕೆಯಿಂದ ಹೊಡೆದ ಬರ್ಬರ ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟ ತಾ. ಹುಬನೂರು ತಾಂಡಾ -2ರಲ್ಲಿ ಘಟನೆ ನಡೆದಿದೆ.
ರೇಶ್ಮಾ ರಾಠೋಡ (25) ಕೊಲೆಯಾದ ಪತ್ನಿ. ಅಶೋಕ ರಾಠೋಡ (33) ಪತ್ನಿಯ ಕೊಲೆ ಮಾಡಿದ ಆಸಾಮಿ. ಕುಡಿದು ಬಂದು ಮನೆಯಲ್ಲಿ ಪತ್ನಿಗೆ ನಿತ್ಯ ಅಶೋಕ ಕಿರುಕುಳ ಕೊಡ್ತಿದ್ದನು.
ಗಂಡ ಕಾಟ ತಾಳಲಾರದೆ ಹುಬನೂರಿನಲ್ಲಿದ್ದ ತನ್ನ ತವರು ಮನೆಗೆ ರೇಶ್ಮಾ ಹೋಗಿದ್ದಳು. ರೇಶ್ಮಾ ತವರು ಮನೆಗೆ ಹೋಗಿ ಅಲ್ಲಿ ಸಲಕೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಕಳೆದ 11 ವರ್ಷಗಳ ಹಿಂದೆ ಮದುವೆಯಾಗಿತ್ತು. ಕೆಲ ತಿಂಗಳಿನಿಂದ ಪತ್ನಿಯ ಮೇಲೆ ಅನೈತಿಕ ಸಂಬಂಧದ ಸಂಶಯವನ್ನು ಅಶೋಕ ಮಾಡುತ್ತಿದ್ದನು. ತಿಕೋಟಾ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.