ಲಿಂಗಸುಗೂರು : ತಾಲ್ಲೂಕಿನ ಮುದುಗಲ್ ಪಟ್ಟಣದ ಐತಿಹಾಸಿಕ ಕೋಟೆ ಸ್ವಚ್ಛತಾ ಕಾರ್ಯಕ್ಕೆ ಲಿಂಗಸುಗೂರು ಉಪ ವಿಭಾಗಾಧಿಕಾರಿ ರಾಹುಲ್ ಸಂಕನೂರು ಚಾಲನೆ ನೀಡಿದರು.
ಲಿಂಗಸುಗೂರು ತಾಲ್ಲೂಕಿನ ಮುದುಗಲ್ ಪಟ್ಟಣದ ಐತಿಹಾಸಿಕ ಕೋಟೆ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,’ಕೋಟೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಐದು ನೂರು ವರ್ಷಗಳ ಇತಿಹಾಸ ಇರುವ ಕೋಟೆಗೆ ಅಮೆರಿಕಾ ದೇಶದವರು ತಮ್ಮ ಸ್ಮಾರಕಗಳ ರಕ್ಷಣೆಗೆ ಮುತುವರ್ಜಿ ವಹಿಸುತ್ತಾರೆ. ಆದರೆ, ನಮ್ಮಲ್ಲಿ ಸಾವಿರಾರು ವರ್ಷಗಳ ಇತಿಹಾಸವಿದ್ದರೂ ಸ್ಮಾರಕಗಳ ರಕ್ಷಣೆಗೆ ಗಮನಕೊಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
5 ತಿಂಗಳ ಹಿಂದೆ ನಾನು ಮುದಗಲ್ ಕೋಟೆಗೆ ಭೇಟಿ ನೀಡಿದ್ದೆ. ಕೋಟೆ ತುಂಬ ಮುಳ್ಳುಕಂಟಿ ಬೆಳೆದಿದ್ದವು. ಬೇಸರವಾಯಿತು. ಕೋಟೆ ಸ್ವಚ್ಛತೆ ಕುರಿತು ಜಿಲ್ಲಾಧಿಕಾರಿ ಜತೆ ಮಾತನಾಡಿದ್ದೆ. ಕೊರೊನಾ ಮತ್ತು ಮಳೆಗಾಲದ ಕಾರಣಕ್ಕೆ ಗಮನಹರಿಸಲು ಸಾಧ್ಯವಾಗಲಿಲ್ಲ. ವಕೀಲರ ಸಂಘ ಹಾಗೂ ಸಾರ್ವಜನಿಕರೇ ಸ್ವಚ್ಛತೆಗೆ ಮುಂದೆ ಬಂದಿರುವುದು ಸಂತಸ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಶಿವನಾಗಪ್ಪ ಬಡಕುರಿ, ಮುಖ್ಯಾಧಿಕಾರಿ ಮರಿಲಿಂಗಪ್ಪ, ಉಪ ತಹಶೀಲ್ದಾರ್ ತುಳಜಾ ರಾಮಸಿಂಗ್, ಗುರುಬಸ್ಸಪ್ಪ ಸಜ್ಜನ್, ಅಶೋಕ ಗೌಡ ಪಾಟೀಲ, ವಕೀಲರಾದ ಆಶಿಕ್ ಅಹ್ಮದ್ ಹಾಗೂ ಕುಪ್ಟಣ್ಣ ಮಾಣಿಕ್, ವಕೀಲ ನಾಗರಾಜ ಗಸ್ತಿ, ನಿವೃತ್ತ ಮುಖ್ಯಶಿಕ್ಷಕ ಹಾಜಿಮಲಂಗ ಬಾಬ, ಸಂತೋಷ ಸುರಪುರ, ಸಾದೀಕ್ ಅಲಿ, ಮಲ್ಲಪ್ಪ ಮಾಟೂರ್, ಮಹೆಬೂಬ ಕಡ್ಡಿಪುಡಿ, ಷಣ್ಮುಕಪ್ಪ ಚಲವಾದಿ, ಬಸವರಾಜ ಜಲ್ಲಿ, ಸಂಗಪ್ಪ ಹೀರೆಮನಿ ಹಾಗೂ ಮಹೆಬೋಬ್ ಬಾರಿಗಿಡ ಸೇರಿ ಹಲವರು ಇದ್ದರು.