ಮುದ್ದೇಬಿಹಾಳ: ಪಟ್ಟಣದ ವಿಬಿಸಿ ಪ್ರೌಢಶಾಲೆ ಆವರಣದಲ್ಲಿರುವ ಸಿದ್ದೇಶ್ವರ ವೇದಿಕೆಯ ಮುಂಭಾಗ ಶಾಸಕ ಸಿ.ಎಸ್.ನಾಡಗೌಡರು ರಾಷ್ಟçಧ್ವಜಾರೋಹಣ, ಕಸಾಪ ಗೌರವ ಸಲಹೆಗಾರ ರಾಜು ಕಲಬುರ್ಗಿ ನಾಡಧ್ವಜ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಪರಿಷತ್ತಿನ ಧ್ವಜ ಆರೋಹಣಗೊಳಿಸುವ ಮೂಲಕು ಶನಿವಾರ ಬೆಳಿಗ್ಗೆ ಸಮ್ಮೇಳನಕ್ಕೆ ಅಧಿಕೃತ ಚಾಲನೆ ನೀಡಿದರು. ಇದೇ ವೇಳೆ ಮಾತೋಶ್ರೀ ಗಂಗಮ್ಮ ವೀರಪ್ಪ ಚಿನಿವಾರ ಪ್ರಧಾನ ವೇದಿಕೆಯನ್ನು ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಐಎನ್‌ಬಿಸಿಡಬ್ಲುಎಫ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸಂಗೀತಾ ನಾಡಗೌಡ, ಮುಖಂಡರಾದ ಮಾರುತಿ ನಲವಡೆ, ಮಹಾಂತೇಶ ಗಂಗನಗೌಡರ ಜಂಟಿಯಾಗಿ ಉದ್ಘಾಟಿಸಿದರು. ವೈರಾಗ್ಯ ಚಕ್ರವರ್ತಿ ಘನಮಠ ಶಿವಯೋಗಿ ಮುಖ್ಯ ಮಹಾದ್ವಾರ, ಶರಣೆ ತಂಗಡಗಿ ನೀಲಮ್ಮ, ಬಸರಕೋಡದ ಶ್ರೀ ಪವಾಡ ಬಸವೇಶ್ವರ, ವೈದ್ಯರತ್ನ ಡಾ.ಆರ್.ಆರ್.ಪದಕಿ ಹೆಸರಿನ ಮಹಾದ್ವಾರಗಳನ್ನು, ಶ್ರೀ ವೀರೇಶ್ವರ ಶರಣರ ದಾಸೋಹ ಮನೆ, ಮಲಿಕಸಾಬ ನದಾಫ ಅಮರಗೋಳ ಹೆಸರಿನ ಮಹಾಮಂಟಪ, ಪ್ರೊ.ಎ.ಎಸ್.ಹಿಪ್ಪರಗಿ ಹೆಸರಿನ ಪುಸ್ತಕ ಮಳಿಗೆ ಮುಂತಾದವುಗಳನ್ನು ಏಕಕಾಲಕ್ಕೆ ನಿಗದಿಪಡಿಸಿದ ಗಣ್ಯರು ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯ್ಕಮಕ್ಕಳ, ಗಣ್ಯರಾದ ಗುರು ತಾರನಾಳ, ಶಂಕರಗೌಡ ಹಿರೇಗೌಡರ, ಎಚ್.ಆರ್.ಬಾಗವಾನ, ನೇತಾಜಿ ನಲವಡೆ, ಅಬ್ದುಲ್‌ಗಫೂರ ಮಕಾನದಾರ, ಡಾ.ವಿಜಯಕುಮಾರ ಗೂಳಿ, ಮಹಾದೇವಿ ವಾಲಿ, ಸಂತೋಷ ನಾಯ್ಕೋಡಿ, ರಾಜು ಬಳ್ಳೊಳ್ಳಿ, ಹುಲಗಪ್ಪ ನಾಯಕಮಕ್ಕಳ, ಅಯ್ಯೂಬ ಮನಿಯಾರ, ಎಸ್.ಎಂ.ನದಾಫ, ರಾಹುಲ್ ಪಾಟೀಲ, ಬಿಇಓ ಬಿ.ಎಸ್.ಸಾವಳಗಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ, ಪುರಸಭೆ ಚುನಾಯಿತ, ನಾಮನಿರ್ದೇಶಿತ ಸದಸ್ಯರು, ಕಸಾಪ ಪದಾಧಿಕಾರಿಗಳು ಸೇರಿ ಹಲವರು ಪಾಲ್ಗೊಂಡಿದ್ದರು.