ಹುಡ್ಕೂ ಮನೆ ಹಂಚಿಕೆಯಲ್ಲಿ ಮುಡಾ ಮಾದರಿಯ ಹಗರಣ..!
ಮುದ್ದೇಬಿಹಾಳ : ಕಾಂಗ್ರೆಸ್ ಶಾಸಕ ಸಿ.ಎಸ್ ನಾಡಗೌಡ ರು ಹುಡ್ಕೂ ಮನೆ ಹಂಚಿಕೆಯಲ್ಲಿ ಮುಡಾ ಮಾದರಿಯ ಹಗರಣ ಮಾಡಿದ್ದಾರೆ ಎಂಬ ಬಿಜೆಪಿ ಯ ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಅವರ ಆರೋಪಕ್ಕೆ ಶಾಸಕರಾದ ಸಿ.ಎಸ್ ನಾಡಗೌಡರು ಉತ್ತರಿಸಬೇಕು ನಡಹಳ್ಳಿ ಅವರ ಪ್ರಶ್ನೆಗೆ ಕಾಂಗ್ರೆಸ್ ಪಕ್ಷದ ಮುಖಂಡರು ಸ್ಪಷ್ಟವಾದ ಉತ್ತರವನ್ನು ನೀಡಿಲ್ಲ ಕಾಂಗ್ರೆಸ್ ಮುಖಂಡರಲ್ಲಿ ಅವರ ಶಾಸಕರು ತಂದ ಅನುದಾನದ ತುಂಬಾ ಗೊಂದಲವಿದೆ ಸ್ಪಷ್ಟತೆ ಇಲ್ಲವೆಂದು ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಪಂಪಣ್ಣನವರ ಹೇಳಿದರು.
ಅವರು ಮಂಗಳವಾರ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಪಕ್ಷದಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು
ನಾಡಗೌಡರು25 ವರ್ಷದ ಆಡಳಿತದಲ್ಲಿ ಮತಕ್ಷೇತ್ರದ ಅಭಿವೃದ್ಧಿಯಾಗಿದೆ ಎಂದು ಹೇಳುವ ಕಾಂಗ್ರೆಸ್ ಮುಖಂಡರು ಹಿಂದಿನ ದಿವಂಗತ ಶಾಸಕರು ಸಚಿವರಾಗಿದ್ದ ಜೆ ಎಸ್ ದೇಶಮುಖರು ತಾಲೂಕಿನಲ್ಲಿ ವಿದ್ಯುತ್ ಸರಬರಾಜು ಸೇರಿದಂತೆ ಅನೇಕ ಜನಪರ ಕೆಲಸ ಮಾಡಿದ್ದಾರೆ ಎಂ ಎಂ ಸಜ್ಜನ ಶಾಸಕರ ಅವಧಿಯಲ್ಲಿ ಬಸ್ ನಿಲ್ದಾಣ ತಂಗಡಗಿ ಬ್ರಿಡ್ಜ್ ಅನೇಕ ಸರಕಾರಿ ಕಟ್ಟಡಗಳನ್ನು ಮಾಡಿದ್ದಾರೆ ಅದನ್ನು ಸ್ಮರಿಸಬೇಕು ಅಂತಯೇ ನಮ್ಮ ನಡಹಳ್ಳಿ ಶಾಸಕರು ಸಹ ಜನರ ಕಣ್ಣಿಗೆ ಕಾಣುವಂತೆ ಅಭಿವೃದ್ಧಿ ಯೋಜನೆ ಕಾಮಗಾರಿಗಳನ್ನು ಮಾಡಿದ್ದಾರೆ ಎಂದರು.
ಎಸ್ಸಿ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ತಂಗಡಗಿ ಮಾತನಾಡಿ 25 ವರ್ಷಗಳಿಂದ ಧೂಳು ತುಂಬಿದ ತಾಲೂಕನ್ನು ನಡಹಳ್ಳಿ ಶಾಸಕರು ಮೂರುವರೆ ವರ್ಷದಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ, ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ಹೊಸ ವಿದ್ಯುತ್ ಸ್ಟೇಶನ್, ಹೊಸ ಶಾಲಾ ಕಟ್ಟಡಗಳು ಕರೆಗಳಿಗೆ ನೀರು ತುಂಬಿಸುವುದು, ಸ್ವಂತ ಹಣದಲ್ಲಿ ವಿದ್ಯಾರ್ಥಿಗಳಿಗೆ ನೋಟಬುಕ್ಸ ಹಂಚಿಕೆ ಮಾಡಿದ್ದಾರೆ.
ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಹರೀಶ ನಾಟಿಕಾರ ಮಾತನಾಡಿ ಕಾಂಗ್ರೆಸ್ ಮುಖಂಡರು ಶಾಸಕರಾದ ನಾಡಗೌಡರು ಒಂದುವರೆ ವರ್ಷದಲ್ಲಿ ನೂರಾರು ಕೋಟಿ ಅನುದಾನ ತಂದಿದ್ದಾರೆ ಎನ್ನುತ್ತಾರೆ ತಾಲೂಕಿನಲ್ಲಿ ಕಾಮಗಾರಿ ಪ್ರಾರಂಭವಾಗಿಲ್ಲಾ ಮಾಜಿ ಶಾಸಕರು ಶಾಸಕರಿಗೆ ಏಕವಚನ ಪದ ಬಳಕೆ ಮಾಡಿಲ್ಲಾ ಕಾಂಗ್ರೆಸ್ ಮುಖಂಡರು ಇಲ್ಲಸಲ್ಲದ ಆರೋಪ ಮಾಡ್ತಾರೆ ಬಸವಣ್ಣ ಅಂಬೇಡ್ಕರ್ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಶಾಸಕರು ತಾಲೂಕಿನ ಅಂಬೇಡ್ಕರ್, ಬಸವಣ್ಣ, ವಿರೇಶ್ವರ ಶರಣ ಕಂಚಿನ ಮೂರ್ತಿಗಳು ಕಳಪೆಯಾಗಿವೆ ಎನ್ನುತ್ತಾರೆ ಕಂಚಿನ ಪ್ರತಿಮೆ ಕಳಪೆಯಾಗಲು ಸಾಧ್ಯವೇ? ಬಿಜೆಪಿ ಸರಕಾರದ ಎಸ್ಪಿಟಿಎಸ್ಪಿ ಯಲ್ಲಿ 36 ಸಾವಿರ ಕೋಟಿ ಮೀಸಲು ಇಟ್ಟಿದ್ದನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿದೆ, ಪಟ್ಟಣದ ಎಪಿಎಂಸಿಯಲ್ಲಿ ಶಾಸಕರ ಸಂಬಂಧಿಕರೇ ಮಾಡುತ್ತಿರುವ ಸಿಸಿ ರಸ್ತೆ ಕಳಪೆಯಾಗಿದೆ ಡ್ರೈನಜ್ ಮಾಡದೆ ಸಿಸಿ ರಸ್ತೆ ಮಾಡುತ್ತಿದ್ದಾರೆ ಎಂದರು.
ಈ ವೇಳೆ ಬಿಜೆಪಿ ಪ್ರಕಾ ಲಕ್ಷಣ ಬಿಜ್ಜೂರ ಮಾತನಾಡಿದರು ಪತ್ರಿಕಾಗೋಷ್ಠಿ ರೈತ ಮೋರ್ಚಾ ಅಧ್ಯಕ್ಷ ಶಂಕರಗೌಡ ಶಿವಣಗಿ, ಎಎಸ್ಟಿ ಮೋರ್ಚಾ ಅಧ್ಯಕ್ಷ ಶಿವು ಕನ್ನೊಳ್ಳಿ, ಮುಖಂಡರಾದ ಸೋಮನಗೌಡ ಬಿರಾದಾರ, ಸುಭಾಷ್ ಕಟ್ಟಿಮನಿ, ಪರಶುರಾಮ ನಾಲತವಾಡ, ರೇವಣಪ್ಪಅಜಮನಿ, ಶಿವಾನಂದ ಮಂಕಣಿ, ಆನಂದ ಚವ್ಹಾಣ, ಕಾರ್ಯದರ್ಶಿ ಸಂಜಯ ಬಾಗೇವಾಡಿ, ನಾಗೇಶ ಕವಡಿಮಟ್ಟಿ, ರವೀಂದ್ರ ಬಿರಾದಾರ, ಸಂಗಣ್ಣ ಬಿಸಲದಿನ್ನಿ,ಶೇಖರ ಢವಳಗಿ, ಸೇರಿದಂತೆ ಉಪಸ್ಥಿತರಿದ್ದರು.
ತಾಲೂಕಿನಲ್ಲಿ ಪೋಲೀಸ್ ಹಾಗೂ ಅಬಕಾರಿ ಅಧಿಕಾರಿಗಳಿಗೆ ಪ್ರತಿ ತಿಂಗಳು 40ರಿಂದ 50 ಸಾವಿರ ರೂ ಮಂತ್ಲಿ ಹೋಗುತ್ತದೆ ಪೂಲೀಸರು ಲಂಚವನ್ನು ಪೋನ್ ಪೇ ಮಾಡಿಸಿಕೊಳ್ಳುತ್ತಾರೆ ಈ ಬಗ್ಗೆ ಸಿಬಿಐ ತನಿಖೆಯಾಗಲಿ
ಹರೀಶ ನಾಟಿಕಾರ
ವರದಿ : ಬಸವರಾಜ ಕುಂಬಾರ ,ಮುದ್ದೇಬಿಹಾಳ