ಇಂಡಿ : ಶಾಲೆಯ ಪಕ್ಕದಲ್ಲೇ MSIL ಹೊಸ ಮಳಿಗೆ ಪ್ರಾರಂಭಕ್ಕೆ ಅನುಮತಿ ಕೊಡಬೇಡಿ, ಕೊಟ್ಟರೆ ಕಲ್ಮಷ ವಾತಾವರಣ ನಿರ್ಮಾಣವಾಗುವುದರ ಜೊತೆಗೆ ಮಕ್ಕಳು ದುಷ್ಟಚಟಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಅಲ್ಲದೇ ಶಾಲಾ ಮಕ್ಕಳ ಭವಿಷ್ಯ ದಾರಿ ತಪ್ಪುತ್ತೆ ಎಂದು ಶಾಲಾ ವಿಧ್ಯಾರ್ಥಿಗಳು, ಗ್ರಾಮ ಸದಸ್ಯರು ಮತ್ತು ಅಧ್ಯಕ್ಷ ಸೇರಿ ತಾಲ್ಲೂಕು ದಂಡಾಧಿಕಾರಿ ಸಿ.ಎಸ್. ಕುಲಕರ್ಣಿ ,ಅಬಕಾರಿ ನೀರಿಕ್ಷಕರೂ, ಗ್ರಾಮೀಣ ಪೋಲಿಸ್ ಠಾಣಾ ಪಿಎಸ್ಐ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಕಲ್ಲಯ್ಯ ಹಿರೇಪಠ ಮಾತಾನಾಡಿದ ಅವರು, ಶ್ರೀ ಶಾರದಾ ಕಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀ ಶಿವಯೋಗೇಶ್ವರ ಸರ್ವೋದಯ ಸಂಸ್ಥೆಯ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜಿನ ಪಕ್ಕ ದಲ್ಲಿಯೇ ಎಮ್ ಎಸ್ ಐ ಎಲ್ ಹೊಸ ಮಳಿಗೆ ತೆರೆಯುವುದರಿಂದ ಶಾಲಾ ವಿದ್ಯಾರ್ಥಿ/ವಿಧ್ಯಾರ್ಥಿನಿಯರಿಗೆ ವಿಧ್ಯಾಭ್ಯಾಸ ಮಾಡಲು ತುಂಬಾ ತೊಂದರೆ ಯಾಗುತ್ತೆ ಎಂದು ಹೇಳಿದರು. ಜೊತೆಗೆ ಕಾನೂನು ಬಾಹಿರ ಮದ್ಯದ ಮಳಿಗೆ ತೆರೆಯಲು ಅವಕಾಶ ನೀಡಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ದರಾಯ ಅರಳಗುಂಡಗಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ಸೋಮನಾಥ ಮಂದೇವಾಲಿ, ಮಹೇಶ್ ಹಸನಾಪುರ, ಶಿವಾನಂದ ನಂದಾಗೊಳ, ಮಲ್ಲು ಬಗಲಿ, ಸೃಜನ್ ಜಾಧವ,ಧಾನಯ್ಯ ಮಠಪತಿ, ಅಪ್ಪಶಾ ಕೋರಳ್ಳಿ,ಈರಣ್ಣ ಗಾಳಿಮಠ ಇನ್ನೂ ಅನೇಕರು ಉಪಸ್ಥಿತರು.