ಜಿಲ್ಲೆಯ ಅಭಿವೃದ್ಧಿಗೆ ಸಂಸದರ ಕೊಡುಗೆ ಶೂನ್ಯ..! ಇಲಿಯಾಸ್
ಇಂಡಿ: 40 ವರ್ಷ ರಾಜಕೀಯಲ್ಲಿ ರಾಜ್ಯದ ಸಚಿವರಾಗಿ, ಕೇಂದ್ರದ ಮಂತ್ರಿಯಾಗಿ ಜಿಲ್ಲೆಯಲ್ಲಿ ನೆನಪಿಡುವ ಯಾವ ಕೆಲಸ ಸಂಸದ ರಮೇಶ್ ಜಿಗಜಿಣಿಗಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾ ಅಧ್ಯಕ್ಷ ಇಲಿಯಾಸ್ ಬೊರಾಮಣಿ ಪ್ರಶ್ನೆ ಮಾಡಿದರು.
ವಿಜಯಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿಜೆಪಿ ಸಂಸದರು ಕೇಂದ್ರ ಸರಕಾರದಿಂದ ಎಷ್ಟು
ಕೆಲಸ ತಂದಿದ್ದಾರೆ..? ಕ್ಷೇತ್ರದ ಯಾವ ಯಾವ
ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಅದಲ್ಲದೇ ಸ್ವ ಗ್ರಾಮದಲ್ಲಿ , ತಾಲ್ಲೂಕಿನಲ್ಲಿ ನೆನಪಿಡುವ ಯಾವ ಕಾಮಗಾರಿ ಕೈಗೊಂಡಿದ್ದಾರೆ. ತಾಲ್ಲೂಕಿನ ರೈತಪರ, ಜನಪರ ಯಾವುದೇ ಒಂದು ಹೇಳಿಕೊಳ್ಳವ ಕಾರ್ಯ ಸಂಸದ ರಮೇಶ್ ಜಿಗಜಿಣಿಗಿ ಅವರಿಂದ ಆಗಿಲ್ಲ ಎಂದು ಹೇಳಿದರು.
ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿ, ರಮೇಶ
ಜಿಗಜಿಣಿ ಅವರು ಸುಮಾರು 40 ವರ್ಷ ರಾಜಕೀಯಲ್ಲಿ ರಾಜ್ಯದ ಸಚಿವರಾಗಿ, ಕೇಂದ್ರದ ಮಂತ್ರಿಯಾಗಿ ಜಿಲ್ಲೆಯಲ್ಲಿ
ಹೇಳಿಕೊಳುವಷ್ಟು ಯಾವ ಕೆಲಸವನ್ನು ಮಾಡಿಲ್ಲ.
ವಿಜಯಪುರ ಜಿಲ್ಲೆಯ ಯಾವ ತಾಲೂಕಿನಲ್ಲಿಯೂ
ಕೇಂದ್ರದ ಯೋಜನೆಗಳು ಹಾಗೂ ರಸ್ತೆಗಳನ್ನು
ದುರಸ್ತಿ ಮಾಡಿಸಲಿಲ್ಲ. ಇದರಿಂದ ಆಕ್ರೋಶಗೊಂಡ
ವಿಜಯಪುರ ಮತದಾರರು ಈ ಭಾರಿ ಜಿಗಜಿಣಿ ಯವರನ್ನು 2024ರ ಲೋಕ ಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನ ಅವರ ಕಾರ್ಯವೈಖರಿಗೆ ಭ್ರಮನಿರಸನ – ಗೊಂಡಿದ್ದು, ಈ ಲೋಕಸಭೆ ಚುನಾವಣೆಯಲ್ಲಿ ಅವರನ್ನು
ತಿರಸ್ಕರಿಸಲಿದ್ದಾರೆ ಎಂದು ಹೇಳಿದರು.
ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರ
ಅವರನ್ನು ಆಯ್ಕೆ ಮಾಡಿದಲ್ಲಿ ಜಿಲ್ಲೆಯನ್ನು ಮಾದರಿಯಲ್ಲೇ ವಿಜಯಪುರ ಲೋಕಸಭಾ
ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸಲಾಗುವುದು ಎಂದು ತಿಳಿಸಿದರು.
ಇಂಡಿ: ಇಲಿಯಾಸ ಬೋರಾಮಣಿ ಭಾವಚಿತ್ರ.