ಸಂಸದ ಜಿಗಜಿಣಗಿ ಅವರ ಗೆಲವು ನಿಶ್ಚಿತ : ಜಿಲ್ಲಾ ಉಪಾಧ್ಯಕ್ಷ ಶಿವರಾಜ್ ಕೆಂಗನಾಳ
ಇಂಡಿ : 2024 ನೇ ಸಾರ್ವತ್ರಿಕ ಲೋಕಸಭೆ ಚುನಾವಣೆ ನಿಮಿತ್ಯ ತಾಂಬಾ ಗ್ರಾಮದ ವಾರ್ಡ್ ನಂ -06 ರಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಮಾನ್ಯ ಸಂಸದರಾದ ರಮೇಶ ಜಿಗಜಿಣಗಿ ಅವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಶಿವರಾಜ್ ಕೆಂಗನಾಳ ಅವರು ಮತದಾರ ಭಂದುಗಳೇ ಈ ಚುನಾವಣೆ ಯಾವ ಜಾತಿ ಚುನಾವಣೆ ಅಲ್ಲ, ಯಾವ ಧರ್ಮದ ಚುನಾವಣೆ ಅಲ್ಲ, ಯಾವ ವ್ಯಕ್ತಿಯ ಚುನಾವಣೆ ಅಲ್ಲ ಭಂದುಗಳೇ ಈ ಚುನಾವಣೆ ದೇಶದ ಅಭಿವೃದ್ಧಿ ಚುನಾವಣೆ, ಈ ಚುನಾವಣೆ ದೇಶದ ಭದ್ರತೆಯ ಚುನಾವಣೆ, ಈ ಚುನಾವಣೆ ನಮ್ಮ ನಿಮ್ಮ ಸ್ವಾಭಿಮಾನದ ಚುನಾವಣೆ ಅದ ಕಾರಣ ಭಂದುಗಳೇ ದಯವಿಟ್ಟು ಮೇ 7 ನೇ ತಾರೀಕು ತಪ್ಪದೆ ಕಮಲದ ಗುರುತಿಗೆ ಬಟನ್ ಒತ್ತುವದರ ಮೂಲಕ ನಿಮ್ಮ ಮತದಾನ ಮಾಡಿ ಬಿಜೆಪಿಗೆ ಹಾಗೂ ಮೋದಿಜೀ ಗೆ ಮತ್ತೊಮ್ಮೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.