ಪಠ್ಯದಲ್ಲಿ ನೈತಿಕ, ಮಾನವೀಯ ಮೌಲ್ಯಗಳು ಅವಶ್ಯ – ಜಿಲ್ಲಾ ಕಸಾಪ ಅಧ್ಯಕ್ಷ ವಾಲಿಕಾರ
ಇಂಡಿ : ಇಂದಿನ ಪಠ್ಯಕ್ರಮದಲ್ಲಿ ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಣದಲ್ಲಿ ಮೌಲ್ಯಗಳಿದ್ದರೆ ಮಾತ್ರ ವಿದ್ಯಾರ್ಥಿಯ ಪರಿಪೂರ್ಣ ವ್ಯಕ್ತಿತ್ವ ವಿಕಸನಗೊಳ್ಳುವದು ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣ ಕರ್ನಾಟಕ ಟಿಚರ್ಸ ಬಿ ಈಡ್ ಕಾಲೇಜು ಹಾಗು ವಿದ್ಯಾಚೇತನ ಪ್ರಕಾಶನ ಸಿಂದಗಿ ಇವರ ಸಂಯುಕ್ತ ಆಶ್ರಯದಲ್ಲಿ ಮೌಲ್ಯಾಧಾರಿತ ಶಿಕ್ಷಣ ಕುರಿತು ಶೈಕ್ಷಣ ಕ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕತೆಯ ಭರಾಟೆಯಲ್ಲಿ ಮೌಲ್ಯಗಳು ಕುಸಿತಗೊಂಡಿವೆ. ಸ್ವಾಮಿ ವಿವೇಕಾನಂದ,ಮಹಾತ್ಮ ಗಾಂಧೀಜಿ, ರವೀಂದ್ರನಾಥ ಠಾಗೋರ. ಡಾ ಸರ್ವಪಲ್ಲಿ ರಾಧಾಕೃಷ್ಣ ಮುಂತಾದ ದಾರ್ಶನಿಕರು ಮೌಲ್ಯಗಳಿಲ್ಲದ ಶಿಕ್ಷಣ
ನಿರೂಪಯುಕ್ತ .ಮಾನವೀಯ ಮೌಲ್ಯ ಮಕ್ಕಳಿಗೆ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಹಂತದಲ್ಲಿ ಬೋಧನೆ ಮಾಡುವ ಮೂಲಕ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವದು ಅತ್ಯವಶ್ಯ ಎಂದರು.
ಡಾ ವಿ ಡಿ ಐಹೊಳ್ಳಿ , ಸಂಸ್ಥೆಯ ಉಪಾಧ್ಯಕ್ಷ ಸಂಗಣ್ಣ ಈರಾಬಟ್ಟಿ , ಪ್ರಾಚಾರ್ಯ ಡಾ ಸುಧಾ ಸುಣಗಾರ ಹ ಮ ಪೂಜಾರಿ ಮಾತನಾಡಿದರು. ಬಿ ಕೆ ಉಕುಮನಾಳ. ಡಿ ಎಸ್ ಮಠಪತಿ. ಸಂಗೀತಾ ಉಟಗಿ. ಬಿ ಪಿ ಹುನ್ನೂರ ವಿ ಎಸ್ ಕಡಕೋಲ. ರವಿ ಪೂಜಾರಿ. ವಿ ಎಸ್ ಕಡಕೋಳ. ರವಿ ಪೂಜಾರಿ .ಸಾಗರ ಚವ್ವಾಣ. ಲಕ್ಷೀ ಬಿರಾದಾರ. ಅಪೂರ್ವ ಮತ್ತಿತರಿದ್ದರು.
ಇಂಡಿ ಪಟ್ಟಣ ಕರ್ನಾಟಕ ಟಿಚರ್ಸ ಬಿ ಈಡ್ ಕಾಲೇಜನಲ್ಲಿ ಶೈಕ್ಷಣ ಕ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಹಾಸೀಮ ಪೀರ ವಾಲಿಕಾರ ಮಾತನಾಡಿದರು.