ಬೆಂಗಳೂರು: ಶಹಾಪುರು ತಾಲ್ಲೂಕಿನ ಶಖಾಪುರು ಗ್ರಾಮದ ಮೋಕ್ಷ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ವತಿಯಿಂದ ಬೆಂಗಳೂರು ನಗರದ ಯಲಹಂಕ ಹೋಬಳಿಯ ಮಿಟ್ಟಿಗನಹಳ್ಳಿಯಲ್ಲಿ ಇರುವ ಜೆ. ಎಮ್. ಜೆ. ಸ್ನೇಹ ಸದನ ಅನಾಥ ಮಕ್ಕಳ ಆಶ್ರಮದಲ್ಲಿ ಇರುವ ಮಕ್ಕಳಿಗೆ ದಿನಸಿ ಸಾಮಾಗ್ರಿಗಳನ್ನು, ಹಣ್ಣು, ಬಿಸ್ಕೆಟ್ ವಿತರಣೆ ಮಾಡಲಾಯಿತು.
ಕರೋನ ಸಂದರ್ಭದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿರುವ ಅನಾಥಾಶ್ರಮಗಳು ಮತ್ತು ಅಲ್ಲಿನ ಮಕ್ಕಳಿಗೆ ಏನಾದ್ರೂ ಒಂದು ಸಣ್ಣ ಸಹಾಯ ಮಾಡುವ ಉದ್ದೇಶದಿಂದ ಜೆ. ಎಮ್.ಜೆ. ಸ್ನೇಹ ಸದನ ಅನಾಥ ಮಕ್ಕಳ ಆಶ್ರಮಕ್ಕೆ ಭೇಟಿ ನೀಡಿದ ಸಂಸ್ಥೆಯ ಸದಸ್ಯರು ಅಲ್ಲಿ ವಾಸಮಾಡುತ್ತಿರು ಹೆಣ್ಣು ಮಕ್ಕಳ ಕಷ್ಟ ಸುಖವನ್ನು ವಿಚಾರಿಸಿ ಅವರಿಗೆ ಅತಿ ಅವಶ್ಯಕವಿರುವ ದಿನಸಿ ಸಾಮಾಗ್ರಿಗಳಾದ, ಹಣ್ಣು,ಬಿಸ್ಕೆಟಗಳನ್ನು, ಕೊಡಿಸಿ ನೀವು ಯಾರು ಅನಾಥರು ಅಲ್ಲ ನಿಮ್ಮೊಂದಿಗೆ ನಾವು ಇದ್ದೇವೆ, ನಮ್ಮ ಸಂಸ್ಥೆ ಇದೆ ಎಂದು ಸಂಸ್ಥೆಯ ಅಧ್ಯಕ್ಷರು ಶ್ರೀಮತಿ ಮಲ್ಲಮ್ಮ ಶರಣಗೌಡ ಅವರು ಮಾತನಾಡಿ ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ತುಂಬಿದರು, ಈ ಕಾರ್ಯಕ್ರಮಕ್ಕೆ ಆಗಮಿಸಿದ ಹೆಣ್ಣೂರು ಪೊಲೀಸ್ ಠಾಣೆ ಪಿ.ಎಸ್.ಐ ಲಕ್ಷ್ಮಣ ಗುಳಪ್ಪನವರು ಮಾತನಾಡಿ ಹೆಣ್ಣುಮಕ್ಕಳಿಗೆ ಎದುರಾಗುವ ಸಮಸ್ಯಗಳನ್ನು ದೈರ್ಯದಿಂದ ಹೇಳಿ, ಮತ್ತು ಮುಂಬರುವ ಪರೀಕ್ಷೆಯಲ್ಲಿ ಚನ್ನಾಗಿ ಓದಿ ಹೆಚ್ಚಿನ ಅಂಕಗಳನ್ನು ಗಳಿಸಿ ಉನ್ನತ ಹುದ್ದೆಗಳನ್ನು ಪಡೆದುಕೊಂಡು ಸಮಾಜಕ್ಕೆ ಒಂದು ದೊಡ್ಡ ಶಕ್ತಿಯಾಗಿ ಬೆಳೆದು ನೀವು ಯಾರು ಅಂತ ತೋರಿಸಬೇಕು ಎಂದು ಅವರು ಮಕ್ಕಳನ್ನು ಹುರಿದುಂಬಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜೆ. ಎಮ್.ಜೆ.ಸ್ನೇಹ ಸದನ ಆಶ್ರಮದ ಉಸ್ತುವಾರಿ ನೋಡಿಕೊಳ್ಳುವ ಸಿಸ್ಟರ್ ಹೃದಯ ಸಿಸ್ಟರ್ ಅವರು ಮಾತನಾಡಿ ಶಹಾಪುರು ತಾಲ್ಲೂಕಿನ ಶಖಾಪುರು ಗ್ರಾಮದ ಮೋಕ್ಷ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ವತಿಯಿಂದ ನಮ್ಮ ಆಶ್ರಮಕ್ಕೆ ಭೇಟಿ ನೀಡಿ ಮಕ್ಕಳಿಗೆ ಪೊಲೀಸರ ಮೇಲಿನ ಭಯ ದೂರಮಾಡಿಸಿ ಅವರಿಗೆ ಅವಶ್ಯವಿರುವ ದಿನಸಿ ಸಾಮಾಗ್ರಿಗಳನ್ನು, ಹಣ್ಣುಗಳನ್ನು ವಿತರಿಸಿದ ಇಂತಹ ಸಂಸ್ಥೆಗಳಿಗೆ ಜೀಸಸ್ ಇನ್ನೂ ಹೆಚ್ಚಿನ ಸಹಾಯ ಮಾಡುವ ಶಕ್ತಿ ತುಂಬಲಿ ಮತ್ತು ಈ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಆಶೀರ್ವಾದ ಮಾಡಿ ಈ ಸಂಸ್ಥೆಯ ಸದಸ್ಯರು ಬಂದು ನಮ್ಮ ದೇವರ ಮಕ್ಕಳಿಗೆ ಸಹಾಯ ಮಾಡಿದ್ದಾರೆ ಅವರಿಗೆ ಧನ್ಯವಾದಗಳು ತಿಳಿಸುತ್ತಾ
ಇದೆ ರೀತಿ ನಿಮ್ಮ ಸಂಸ್ಥೆ ಇನ್ನೂ ಹೆಚ್ಚು ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ ಕಾರ್ಯಕ್ರಮ ಮಾಡಲಿ ಎಂದು ಆಶಿಸಿದರು. ನಂತರದಲ್ಲಿ ಅಲ್ಲಿನ ಮಕ್ಕಳಿಗೆ ಹಣ್ಣುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ, ರಾಜಸಾಬ, ಭೀಮಣ್ಣ ನಂದಳ್ಳಿ, ಮಹೇಶ, ಸಂಗಪ್ಪ, ಪ್ರಶಾಂತ, ಬಸವರಾಜ ಪಾಟೀಲ್, ಯಲ್ಲಪ್ಪ ಎಮ್ಮೆರ, ಗೋಪಾಲ ಗಂಗನಾಳ, ಮಾಳಪ್ಪ ಮೇಟಿ, ಶರಣಗೌಡ ಶಖಾಪುರ, ಅಂಜಲಿ ನಂದಳ್ಳಿ, ಮೋಕ್ಷ ಪಾಟೀಲ್, ಅಭಿಶ್ರೀ ಪಾಟೀಲ್, ಹಾಗೂ ಆಶ್ರಮದ ಸಿಬ್ಬಂದಿ ವರ್ಗದವರು ಇದ್ದರು.