ಮೋದಿಜಿ ಕೊಡುಗೆ ಅಪಾರವಾದದ್ದು : ಸಂಸದ ಜಿಗಜಿಣಗಿ..
ವಿಜಯಪುರ : ಪ್ರತಿಯೊಬ್ಬರಿಗೂ ಪ್ರೇರಣೆ ಅಗತ್ಯ, ಈಗ ಯುವಕರಿಗೆ ಮೋದಿ ಪ್ರೇರಣೆ, ಪ್ರತಿ ವ್ಯಕ್ತಿಗೂ ಪ್ರೇರಣೆ ಅಗತ್ಯ, ಮೋದಿಜಿ ಆಡಳಿತ ನಡೆಸಿದ ೮ ವರ್ಷಗಳಲ್ಲಿಯೇ ಜಗತ್ತಿನ ನಾಯಕರಾಗಿ, ವಿಶ್ವದ ನಾಯಕರಿಗೆ ಪ್ರೇರಣೆಯಾಗಿದ್ದಾರೆ. ಪ್ರತಿ ನಿತ್ಯ ಬೇರೆ ಬೇರೆ ದೇಶದ ಪ್ರಧಾನಿಗಳು ಭಾರತಕ್ಕೆ ಬರುತ್ತಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ವಿಜಯಪುರದ ಶ್ರೀ ರುಕ್ಮಾಂಗದ ಪಂಡಿತರ ಸಮಾಧಿ ಸಭಾಂಗಣದಲ್ಲಿ ಶನಿವಾರ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಪ್ರಶಿಕ್ಷಣ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ್, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸಾಬು ಮಾಶ್ಯಾಳ ಸೇರಿದಂತೆ ಕಾರ್ಯಕರ್ತರು ಇದ್ದರು.
 
	    	










 
                                 
                                 
                                 
                                







