ಇಂಡಿ : ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್ಬಹಳ ಉತ್ತಮ ಆಗಿದೆ ಎಂದು ಪ್ರವೀಣ ಮನವಿ ಹೇಳಿದರು. ಇಂಡಿಯಲ್ಲಿ ಮಾತನಾಡಿದ ಅವರು, ವಿದ್ಯಾ ಯೋಜನೆ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳ ಕಲಿಕೆ ದೃಷ್ಟಿಯಿಂದ ಡಿಜಿಟಲ್ ಶಿಕ್ಷಣ ಅತ್ಯವಶ್ಯಕವಾಗಿದೆ. ಇನ್ನು ಪ್ರತಿ ಮನೆಗೂ ನೀರು, ವಿದ್ಯಾರ್ಥಿಗಳಿಗೆ ಡಿಜಿಟಲ್ ಯುನಿವರ್ಸಿಟಿ ಹಾಗೂ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಇದು ಉತ್ತಮವಾದ ಬಜೆಟ್ ಆಗಿದೆ ಎಂದರು.